ಕೇರಳ: ಕ್ರಿಸ್ ಮಸ್ ಆಚರಣೆ ವೇಳೆ ಗಲಾಟೆ; ಪೊಲೀಸರ ಮೇಲೆ ದಾಳಿ, ಜೀಪಿಗೆ ಬೆಂಕಿ, 150 ಕಾರ್ಖಾನೆ ಕಾರ್ಮಿಕರ ಬಂಧನ

ಎರ್ನಾಕುಲಂ ಗ್ರಾಮಾಂತರ ಪೊಲೀಸರು ಭಾನುವಾರ ಮುಂಜಾನೆ ಕಿಝಕ್ಕಂಬಲಂನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈಶಾನ್ಯ ರಾಜ್ಯಗಳು, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಿಂದ ಬಂದಿರುವ ಖಾಸಗಿ ಗಾರ್ಮೆಂಟ್ಸ್ ಕಾರ್ಖಾನೆಯ (ಕಿಟೆಕ್ಸ್ ಗಾರ್ಮೆಂಟ್ಸ್) 150 ಕ್ಕೂ ಹೆಚ್ಚು ಕಾರ್ಮಿಕರನ್ನು ವಶಕ್ಕೆ ಪಡೆದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಕೊಚ್ಚಿ: ಎರ್ನಾಕುಲಂ ಗ್ರಾಮಾಂತರ ಪೊಲೀಸರು ಭಾನುವಾರ ಮುಂಜಾನೆ ಕಿಝಕ್ಕಂಬಲಂನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಈಶಾನ್ಯ ರಾಜ್ಯಗಳು, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಿಂದ ಬಂದಿರುವ ಖಾಸಗಿ ಗಾರ್ಮೆಂಟ್ಸ್ ಕಾರ್ಖಾನೆಯ (ಕಿಟೆಕ್ಸ್ ಗಾರ್ಮೆಂಟ್ಸ್) 150 ಕ್ಕೂ ಹೆಚ್ಚು ಕಾರ್ಮಿಕರನ್ನು ವಶಕ್ಕೆ ಪಡೆದಿದ್ದಾರೆ.

ಈ ಕಾರ್ಮಿಕರು ಪೊಲೀಸ್​​ ಜೀಪ್‌ಗೆ ಬೆಂಕಿ ಹಚ್ಚಿ, ಸ್ಥಳಕ್ಕೆ ಆಗಮಿಸಿದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದರು. ಮೂರು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಕಾರ್ಮಿಕರ ಬಂಧನವನ್ನು ದಾಖಲಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಕುನ್ನತುನಾಡ್ ಪೊಲೀಸರು ತಿಳಿಸಿದ್ದಾರೆ. ಬಂಧಿತ ಕಾರ್ಮಿಕರಲ್ಲಿ ಹೆಚ್ಚಿನವರು ಜಾರ್ಖಂಡ್ ಮೂಲದವರು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಮುಖ್ಯವಾಗಿ ಈಶಾನ್ಯ ರಾಜ್ಯಗಳ ಕಾರ್ಮಿಕರು ಮತ್ತು ಇತರ ರಾಜ್ಯಗಳ ಕಾರ್ಮಿಕರ ನಡುವೆ ಘರ್ಷಣೆ ಪ್ರಾರಂಭವಾಗಿದೆ. ಎರಡು ಗುಂಪುಗಳ ಕಾರ್ಮಿಕರು ಶಿಬಿರದಲ್ಲಿ ತಡರಾತ್ರಿ ಕ್ರಿಸ್ಮಸ್ ಆಚರಿಸಿದ್ದಾರೆ. ಈ ವೇಳೆ ಮದ್ಯ ಮತ್ತು ಮಾದಕ ದ್ರವ್ಯಗಳು ಸೇವಿಸುತ್ತಿದ್ದು, ಇದನ್ನು ಮಾಡದಂತೆ ಕಾರ್ಖಾನೆಯ ಭದ್ರತಾ ಸಿಬ್ಬಂದಿ ತಾಕೀತು ಮಾಡಿದ್ದಾರೆ. ಭದ್ರತಾ ಸಿಬ್ಬಂದಿ ಮಾತನ್ನು ಕಾರ್ಮಿಕರು ಕೇಳದ ಕಾರಣ, ಪೊಲೀಸರ ಸಹಾಯವನ್ನು ಕೋರಲಾಯಿತು. ನಂತರ ಅವರು ತಮ್ಮ ಆಕ್ರೋಶವನ್ನು ಪೊಲೀಸರ ಮೇಲೆ ತಿರುಗಿಸಿದರು.

ಪೊಲೀಸ್​ ಜೀಪ್‌ಗೆ ಬೆಂಕಿ:
ಕಾರ್ಮಿಕರು ಪೊಲೀಸ್​ ಜೀಪಿಗೆ ಬೆಂಕಿ ಹಚ್ಚಿದ್ದು, ಅದರಲ್ಲಿ ಕುನ್ನತ್ತುನಾಡ್ ವೃತ್ತ ನಿರೀಕ್ಷಕ ವಿ.ಟಿ. ಶಾಜನ್ ಮತ್ತು ಇತರ ನಾಲ್ವರು ಪೊಲೀಸ್ ಸಿಬ್ಬಂದಿ ಆಗಮಿಸಿದ್ದರು. ಇತರ ಎರಡು ಪೊಲೀಸ್ ಜೀಪ್‌ಗಳು ಸಹ ಹಾನಿಗೊಳಗಾಗಿದ್ದವು. ಕಲ್ಲು ತೂರಾಟದಲ್ಲಿ ಹೆಚ್ಚಿನವರ ತಲೆಗೆ ಗಾಯಗಳಾಗಿವೆ. ಹಿಂಸಾಚಾರವನ್ನು ಹತ್ತಿಕ್ಕಲು ಮುಂಜಾನೆಯೇ ಸ್ಥಳಕ್ಕೆ ಜಿಲ್ಲಾ ಪೊಲೀಸ್ ಮುಖ್ಯಸ್ಥ (ಎರ್ನಾಕುಲಂ ಗ್ರಾಮಾಂತರ) ಕೆ.ಕಾರ್ತಿಕ್ ಬಂದಿದ್ದಾರೆ. ಸುಮಾರು 500 ಪೊಲೀಸರು ಸ್ಥಳಕ್ಕೆ ಧಾವಿಸಿ, 150ಕ್ಕೂ ಕಾರ್ಮಿಕರನ್ನು ಬಂಧಿಸಿದ್ದಾರೆ. ಸದ್ಯ ಘರ್ಷಣೆ ನಡೆದ ಕಿಜಕ್ಕಂಬಲಂನಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಪೆರುಂಬವೂರು ಡಿವೈಎಸ್ಪಿ ಘಟನೆಯ ತನಿಖೆಯ ನೇತೃತ್ವ ವಹಿಸಿದ್ದಾರೆ. ಬಂಧನಕ್ಕೊಳಗಾದ ಕಾರ್ಮಿಕರನ್ನು ಪ್ರದೇಶದ ವಿವಿಧ ಪೊಲೀಸ್ ಠಾಣೆಗಳಿಗೆ ಕರೆದೊಯ್ಯಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com