ರಾಷ್ಟ್ರಪಿತ ಮಹಾತ್ಮ ಗಾಂಧಿ ಅವಹೇಳನ, ಗೋಡ್ಸೆಗೆ ಬಹುಪರಾಕ್: ಹಿಂದೂ ಸನ್ಯಾಸಿ ವಿರುದ್ಧ ಪ್ರಕರಣ ದಾಖಲು

ಗಾಂಧಿ ಹಂತಕ ಗೋಡ್ಸೆಯಂಥ ವಕ್ತಿಗಳು ಸರ್ಕಾರದ ಮುಖ್ಯಸ್ಥನಾಗಬೇಕು. ಅಂಥವರಿಂದಲೇ ಹಿಂದೂ ಧರ್ಮ ಉಳಿಯುತ್ತದೆ.
ಮಹಾತ್ಮ ಗಾಂಧಿ
ಮಹಾತ್ಮ ಗಾಂಧಿ
Updated on

ಮುಂಬೈ: ರಾಷ್ಟ್ರಪಿತ ಮಹಾತ್ಮಾ ಗಾಂಧಿ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿ ಆರೋಪದಡಿ ಮಹಾರಾಷ್ಟ್ರ ಪೊಲೀಸರು ಹಿಂದೂ ಮುಖಂಡ, ಸನ್ಯಾಸಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಾರಾಷ್ಟ್ರ ಮೂಲದ ಸನ್ಯಾಸಿ ಕಾಳಿಚರಣ್ ಮಹಾರಾಜ್ ವಿರುದ್ಧ ಸ್ಥಳೀಯ ಕಾಮ್ಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ದರು. ರಾಯ್ಪುರದಲ್ಲಿ ನಡೆದಿದ್ದ ಧರ್ಮ ಸಮ್ಸದ್ ಅಧಿವೇಶನದಲ್ಲಿ ಕಾಳಿಚರಣ್ ಮಹಾರಾಜ್ ಅವರು ತಮ್ಮ ಭಾಷಣದಲ್ಲಿ ಮಹಾತ್ಮಾ ಗಾಂಧಿ ವಿರುದ್ಧ ಅವಹೇಳಕಾರಿಯಾಗಿ ಮಾತನಾಡಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. 

ಅದೇ ಭಾಷಣದಲ್ಲಿ ಕಾಳಿಚರಣ್ ಮಹಾರಾಜ್ ಗಾಂಧಿ ಹಂತಕ ಗೋಡ್ಸೆಯನ್ನು ಹೊಗಳಿದ್ದರು. ಅಲ್ಲದೆ ಅಂಥ ವ್ಯಕ್ತಿಯೇ ಹಿಂದೂ ಮುಖಂಡನಾಗಬೇಕು, ಅಂಥ ವ್ಯಕ್ತಿಯೇ ಸರ್ಕಾರದ ಮುಖ್ಯಸ್ಥನಾಗಬೇಕು. ಅವರಿಂದಲೇ ಧರ್ಮ ಉಳಿಯುತ್ತದೆ ಎಂದು ಅವರು ಭಾಷಣದಲ್ಲಿ ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com