ಮೋದಿಯ ತಪ್ಪು ನಿರ್ಧಾರಗಳಿಗೆ ತಲೆಬಾಗುವವರು ಹಿಂದುತ್ವವಾದಿಗಳು: ರಾಹುಲ್ ಗಾಂಧಿ

ಹಿಂದುತ್ವದ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿದ್ದಾರೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 

ನವದೆಹಲಿ: ಹಿಂದುತ್ವದ ವಿಚಾರವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿದ್ದಾರೆ. 

ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಪ್ರಧಾನಿ ಮೋದಿಯವರ ತಪ್ಪು ನಿರ್ಧಾರಗಳಿಗೆ ತಲೆಬಾಗುವವರು ಹಿಂದುತ್ವವನ್ನು ಅನುಸರಿಸುತ್ತಿದ್ದಾರೆ ಎಂದು ಹೇಳಿದರು. ಸವಾಲುಗಳನ್ನು ಎದುರಿಸುವವರು ಹಿಂದೂಗಳು ಮತ್ತು ಸಮಸ್ಯೆಗಳಿಂದ ಹೆದರಿ ಓಡಿಹೋಗುವವರು ಹಿಂದುತ್ವವಾದಿಗಳು ಎಂದು ಹೇಳಿದರು.

ಕೆಲವರು ಬ್ರಿಟಿಷರ ಮುಂದೆ ತಲೆಬಾಗಲು ಹಿಂದುತ್ವವೇ ಕಾರಣ: ರಾಹುಲ್ ಗಾಂಧಿ
ಮೂರು ದಿನಗಳ ಕಾಂಗ್ರೆಸ್ ತರಬೇತಿ ಶಿಬಿರದ ಸಮಾರೋಪವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಹಿಂದುತ್ವದ ಸಿದ್ಧಾಂತವನ್ನು ನಂಬುವವರು ಯಾರ ಮುಂದೆಯಾಗಲಿ ತಲೆಬಾಗುತ್ತಾರೆ. ಬ್ರಿಟಿಷರ ಮುಂದೆ ತಲೆಬಾಗುತ್ತಾರೆ ಮತ್ತು ಅವರು ಹಣದ ಮುಂದೆ ತಲೆಬಾಗುತ್ತಾರೆ ಏಕೆಂದರೆ ಅವರ ಹೃದಯದಲ್ಲಿ ಸತ್ಯವಿಲ್ಲ ಎಂದರು. 

ಆರ್ಎಸ್ಎಸ್ ವಿರುದ್ಧ ರಾಹುಲ್ ಗಾಂಧಿ ಕಿಡಿ
ರಾಷ್ಟ್ರೀಯ ಸ್ವಯಂಸೇವಾ ಸಂಘ(ಆರ್‌ಎಸ್‌ಎಸ್) ಅನ್ನು ಗುರಿಯಾಗಿಸಿಕೊಂಡ ರಾಹುಲ್ ಗಾಂಧಿ, ಈ ಗುಂಪು ದ್ವೇಷವನ್ನು ಹರಡುತ್ತಿದೆ. ನಾವು ಪ್ರೀತಿಯಿಂದ ಹೋರಾಡಬೇಕು ಎಂದು ಹೇಳಿದರು. ಆರೆಸ್ಸೆಸ್ ಮತ್ತು ಬಿಜೆಪಿಯ ಅಪಪ್ರಚಾರವನ್ನು ಎದುರಿಸುವ ಉದ್ದೇಶದಿಂದ ಜೈಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಈ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com