ಮೊಬೈಲ್ ನಲ್ಲಿ ಚಾಟಿಂಗ್: ಇಬ್ಬರು ಬುಡಕಟ್ಟು ಮಹಿಳೆಯರಿಗೆ ಥಳಿತ; 7 ಮಂದಿ ಬಂಧನ

ಪುರುಷರೊಂದಿಗೆ ಮೊಬೈಲ್ ನಲ್ಲಿ ಚಾಟಿಂಗ್ ಮಾಡುತ್ತಿದ್ದ ಕಾರಣಕ್ಕಾಗಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ಥಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಬಂಧನ (ಸಾಂಕೇತಿಕ ಚಿತ್ರ)
ಬಂಧನ (ಸಾಂಕೇತಿಕ ಚಿತ್ರ)

ಧರ್: ಪುರುಷರೊಂದಿಗೆ ಮೊಬೈಲ್ ನಲ್ಲಿ ಚಾಟಿಂಗ್ ಮಾಡುತ್ತಿದ್ದ ಕಾರಣಕ್ಕಾಗಿ ಇಬ್ಬರು ಬುಡಕಟ್ಟು ಮಹಿಳೆಯರನ್ನು ಥಳಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಯುವತಿಯರ ಸಂಬಂಧಿಗಳೇ ಈ ಕೃತ್ಯ ಎಸಗಿದ್ದು, ತಮ್ಮ ಸಂಬಂಧಿಕರ ಪೈಕಿ ಪುರುಷರೊಂದಿಗೆ ಚಾಟಿಂಗ್ ನಡೆಸುತ್ತಿದ್ದರಿಂದ ಈ ದುಷ್ಕೃತ್ಯ ಎಸಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ 7 ಮಂದಿಯನ್ನು ಬಂಧಿಸಲಾಗಿದೆ. ಥಳಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗತೊಡಗಿದ್ದು ಕಳೆದ ತಿಂಗಳು ನಡೆದ ಘಟನೆ ಇದಾಗಿದೆ.

ಮಹಿಳೆಯರೂ ಸೇರಿದಂತೆ ಹಲವು ಮಂದಿ ಯುವತಿಯರನ್ನು ಕೋಲಿನಿಂದ ಥಳಿಸುತ್ತಿರುವ, ಕೂದಲು ಹಿಡಿದು ಎಳೆದಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಸಂತ್ರಸ್ಥ ಯುವತಿಯರು 19-20 ವಯಸ್ಸಿನವರಾಗಿದ್ದು,  ಪಿಪಲ್ವ ಗ್ರಾಮದವರಾಗಿದ್ದಾರೆ. ವಿಡಿಯೋವನ್ನು ನೋಡಿ ಪರಿಶೀಲನೆ ನಡೆಸುತ್ತಿದ್ದಾಗ, ಈ ಘಟನೆ ಕುಟುಂಬ ಸದಸ್ಯರೇ ನಡೆಸಿರುವುದು ಎಂಬುದು ತಿಳಿಯಿತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ಮಹಿಳೆಯರನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಅವರು ನೀಡಿರುವ ದೂರಿನ ಅನ್ವಯ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com