ಗೋವಾ:  ಕಾಂಗ್ರೆಸ್ ನಿಂದ ಬಿಜೆಪಿ ಸೇರಿದ 10 ಶಾಸಕರಿಗೆ  ಕೇಕ್ ಕಳಿಸಿದ ಆಮ್ ಆದ್ಮಿ ಪಕ್ಷ! 

ಕಾಂಗ್ರೆಸ್ ನಿಂದ ಬಿಜೆಪಿ ಸೇರಿದ್ದ 10 ಶಾಸಕರ ಮನೆಗೆ ಆಮ್ ಆದ್ಮಿ ಪಕ್ಷ ಕೇಕ್ ಕಳಿಸಿದೆ. ಪಕ್ಷಾಂತರ ಮಾಡಿ 2 ವರ್ಷಗಳಾದ ಹಿನ್ನೆಲೆಯಲ್ಲಿ ಮತದಾರರ ಬೆನ್ನಿಗೆ ಚೂರಿ ಹಾಕಿದ್ದಕ್ಕಾಗಿ ಕೇಕ್ ಕಳಿಸಲಾಗಿದೆ ಎಂದು ರಾಷ್ಟ್ರೀಯ ವಕ್ತಾರರಾದ ಆತಿಶಿ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಪಣಜಿ: ಕಾಂಗ್ರೆಸ್ ನಿಂದ ಬಿಜೆಪಿ ಸೇರಿದ್ದ 10 ಶಾಸಕರ ಮನೆಗೆ ಆಮ್ ಆದ್ಮಿ ಪಕ್ಷ ಕೇಕ್ ಕಳಿಸಿದೆ. ಪಕ್ಷಾಂತರ ಮಾಡಿ 2 ವರ್ಷಗಳಾದ ಹಿನ್ನೆಲೆಯಲ್ಲಿ ಮತದಾರರ ಬೆನ್ನಿಗೆ ಚೂರಿ ಹಾಕಿದ್ದಕ್ಕಾಗಿ ಕೇಕ್ ಕಳಿಸಲಾಗಿದೆ ಎಂದು ರಾಷ್ಟ್ರೀಯ ವಕ್ತಾರರಾದ ಆತಿಶಿ ಹೇಳಿದ್ದಾರೆ.

2019 ರ ಜುಲೈ 10 ರಂದು ಈ ಶಾಸಕರು ಪಕ್ಷಾಂತರಗೊಂಡು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ನೇತೃತ್ವದ ಸರ್ಕಾರಕ್ಕೆ ಸ್ಪಷ್ಟ ಬಹುಮತ ದೊರೆಯುವಂತೆ ಮಾಡಿದ್ದರು. 

"ಈ ಶಾಸಕರ ಮನೆಗಳಿಗೆ ನಮ್ಮ ನಾಯಕರು ತೆರಳಿ, ಕೇಕ್ ವಿತರಿಸಿ ಈ ದಿನವನ್ನು ನೆನಪಿಸಿದರು. ಈ ದಿನ ಅವರನ್ನು ಕಾಂಗ್ರೆಸ್ ಟಿಕೆಟ್ ನ ಅಡಿ ಆಯ್ಕೆ ಮಾಡಿದ ಮತದಾರರಿಗೆ ಬೆನ್ನಿಗೆ ಚೂರಿ ಹಾಕಿ ಬಿಜೆಪಿ ಸೇರ್ಪಡೆಯಾದ ದಿನ" ಎಂದು ಆಪ್ ನ ದೆಹಲಿ ಶಾಸಕರೂ ಆಗಿರುವ ಆತಿಶಿ ಹೇಳಿದ್ದಾರೆ. 

ಕಾಂಗ್ರೆಸ್ ಗೆ ಮತ ಹಾಕುವುದು ಬಿಜೆಪಿಗೆ ಹಾಕುವಂತೆ ಎಂಬುದು ಗೋವಾದ ಜನತೆಗೆ ಈಗ ಅರ್ಥವಾಗಿದೆ ಎಂದು ಆತಿಶಿ ಹೇಳಿದ್ದಾರೆ. ಲೆಟ್ಸ್ ಕ್ಲೀನ್ ಗೋವಾ ಪಾಲಿಟಿಕ್ಸ್ ಎಂಬ ಆಮ್ ಆದ್ಮಿ ಪಕ್ಷದ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, 70,000 ಮಂದಿ ವೆಬ್ ಸೈಟ್ ನ್ನು ವೀಕ್ಷಿಸಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ವಕ್ತಾರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com