ಗುವಾಹತಿ: ಹಿಂದೂ ಹುಡುಗ ಹಿಂದೂ ಹುಡಿಗಿಗೆ ಸುಳ್ಳು ಹೇಳುವುದೂ ಕೂಡ ಒಂದು ರೀತಿ ಜಿಹಾದ್ ಎಂದು ಅಭಿಪ್ರಾಯಪಟ್ಟಿರುವ ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ ಅವರು ಅದರ ವಿರುದ್ಧ ಕಠಿಣ ಕಾನೂನು ತರುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.
ಗುವಾಹತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂಧುತ್ವ 5 ಸಾವಿರ ವರ್ಷಗಳಷ್ಟು ಹಳೆಯ ಜೀವನ ಪದ್ಧತಿಯಾಗಿದೆ. ಹೆಚ್ಚಿನ ಇತರೆ ಧರ್ಮಗಳ ಅನುಯಾಯಿಗಳು ಕೂಡ ಹಿಂದೂಗಳ ವಂಶಸ್ಥರೇ ಆಗಿದ್ದಾರೆ. ಹೀಗಾಗಿ ಇಂತಹ ಪುರಾತನ ಧರ್ಮದ ರಕ್ಷಣೆ ಮಾಡಬೇಕು. ಹಿಂದೂ ಹುಡುಗ ಹಿಂದೂ ಹುಡಿಗಿಗೆ ಸುಳ್ಳು ಹೇಳುವುದೂ ಕೂಡ ಒಂದು ರೀತಿ ಜಿಹಾದ್. ಅದರ ವಿರುದ್ಧ ಕಠಿಣ ಕಾನೂನು ತರುತ್ತೇವೆ ಎಂದು ಹೇಳಿದ್ದಾರೆ.
ಸ್ಥಳೀಯ ಸಂಸ್ಕೃತಿ ರಕ್ಷಣೆಗೆ ಹೊಸ ಇಲಾಖೆ
ಇದೇ ವೇಳೆ ಬುಡಕಟ್ಟು ಮತ್ತು ಇತರ ಸ್ಥಳೀಯ ಸಮುದಾಯಗಳಿಗೆ ಸೇರಿದ ಜನರ ಸಂಸ್ಕೃತಿ ಮತ್ತು ಆಚರಣೆಗಳನ್ನು ರಕ್ಷಿಸಲು ಹೊಸ ಇಲಾಖೆಯನ್ನು ರಚಿಸಲು ಅಸ್ಸಾಂ ಸಚಿವ ಸಂಪುಟ ಶನಿವಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಮಾಹಿತಿ ನೀಡಿದರು. ಹೊಸ ಇಲಾಖೆ, ರಾಜ್ಯದ ಸ್ಥಳೀಯ ಜನಸಂಖ್ಯೆಯು ಅವರ ನಂಬಿಕೆ ಮತ್ತು ಸಂಪ್ರದಾಯಗಳನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸುತ್ತದೆ ಮತ್ತು ಅವರಿಗೆ ಅಗತ್ಯವಾದ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದರು.
'ಯೋಜನೆಗಳ ತ್ವರಿತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಆರ್ಥಿಕ ಮತ್ತು ಆಡಳಿತಾತ್ಮಕ ಸುಧಾರಣೆಗಳು ಅಗತ್ಯವೆಂದು ಸಭೆಯಲ್ಲಿ ಕ್ಯಾಬಿನೆಟ್ ಒಪ್ಪಿಕೊಂಡಿದೆ. 2 ಕೋಟಿ ಮತ್ತು ಅದಕ್ಕಿಂತ ಕಡಿಮೆ ಮೌಲ್ಯದ ಯೋಜನೆಗಳಿಗೆ ಇಲಾಖಾ ಮುಖ್ಯಸ್ಥರಿಗೆ ಅನುಮತಿ ನೀಡಲು ಅರ್ಹತೆ ಇದೆ ಎಂದು ನಿರ್ಧರಿಸಿದೆ ಮತ್ತು 2 ಕೋಟಿ ರೂ.ಗಳಿಂದ 5 ಕೋಟಿ ರೂ.ಗಳವರೆಗಿನ ಮೌಲ್ಯದ ಯೋಜನೆಗಳಿಗೆ ಅನುಮತಿ ನೀಡಲು ಮುಖ್ಯ ಕಾರ್ಯದರ್ಶಿ ನೇತೃತ್ವದ ಹಣಕಾಸು ಸಮಿತಿಗೆ ಅನುಮತಿ ನೀಡಲಾಗಿದೆ. ಹಣಕಾಸು ಸಚಿವರ ನೇತೃತ್ವದ ವಿಶೇಷ ಸ್ಥಾಯಿ ಸಮಿತಿಯು 5 ಕೋಟಿ ರೂ.ಗಳಿಂದ 100 ಕೋಟಿ ರೂ.ಗಳವರೆಗೆ ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಲಿದೆ, ಮತ್ತು 100 ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಒಳಗೊಂಡಿರುವ ಯೋಜನೆಗಳಿಗೆ ಕ್ಯಾಬಿನೆಟ್ ಮಾತ್ರ ಅನುಮೋದನೆಗೆ ಮುಂದಾಗಲಿದೆ ಎಂದು ಅವರು ಹೇಳಿದರು.
Advertisement