ಆಂತರಿಕ ಘರ್ಷಣೆ: ಗುಂಡೇಟಿಗೆ 'ಅಸ್ಸಾಂ ವೀರಪ್ಪನ್' ಬಲಿ!

ಯುನೈಟೆಡ್ ಪೀಪಲ್ಸ್ ರೆವಲ್ಯೂಷನರಿ ಫ್ರಂಟ್ (ಯುಪಿಆರ್ ಎಫ್) ನ ಸ್ವಯಂ ಘೋಷಿತ ಕಮಾಂಡರ್-ಇನ್-ಚೀಫ್ ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿಯಲ್ಲಿ ಅಸ್ಸಾಂನ ದಕ್ಷಿಣ ಬೆಟ್ಟಗಳ ಕಾರ್ಬಿ ಆಂಗ್ಲಾಂಗ್ ಜಿಲ್ಲೆಗಳಲ್ಲಿ ತನ್ನ ಗುಂಪಿನವರೇ ಹಾರಿಸಿದ ಗುಂಡೇಟಿಗೆ ಬಲಿಯಾಗಿದ್ದಾರೆ.
ಅಸ್ಸಾಂ ವೀರಪ್ಪನ್
ಅಸ್ಸಾಂ ವೀರಪ್ಪನ್

ಗುವಾಹಟಿ: ಯುನೈಟೆಡ್ ಪೀಪಲ್ಸ್ ರೆವಲ್ಯೂಷನರಿ ಫ್ರಂಟ್ (ಯುಪಿಆರ್ ಎಫ್) ನ ಸ್ವಯಂ ಘೋಷಿತ ಕಮಾಂಡರ್-ಇನ್-ಚೀಫ್ ಶನಿವಾರ ಮತ್ತು ಭಾನುವಾರದ ಮಧ್ಯರಾತ್ರಿಯಲ್ಲಿ ಅಸ್ಸಾಂನ ದಕ್ಷಿಣ ಬೆಟ್ಟಗಳ ಕಾರ್ಬಿ ಆಂಗ್ಲಾಂಗ್ ಜಿಲ್ಲೆಗಳಲ್ಲಿ ತನ್ನ ಗುಂಪಿನವರೇ ಹಾರಿಸಿದ ಗುಂಡೇಟಿಗೆ ಬಲಿಯಾಗಿದ್ದಾರೆ.

ಮರದ ಕಳ್ಳಸಾಗಣೆಯಲ್ಲಿ ತೊಡಗಿ ವೀರಪ್ಪನ್ ಎಂದೇ ಹೆಸರಾಗಿದ್ದ ಮಂಗಿನ್ ಖಲ್ಹೌ ಈ ಸಂಘಟನೆಯಲ್ಲಿದ್ದ ಏಕೈಕ ಹಿರಿಯ ಸದಸ್ಯನಾಗಿದ್ದ. ಇತರ ಅನೇಕ ಮುಖಂಡರು ಪೊಲೀಸ್ ಎನ್ ಕೌಂಟರ್ ನಲ್ಲಿ ಹತರಾದರೆ, ಉಳಿದ ಅನೇಕ ಮಂದಿ ಪೊಲೀಸರಿಗೆ ಶರಣಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆಂತರಿಕ ವಿಷಯಗಳಿಗೆ ಸಂಬಂಧಿಸಿದಂತೆ ಗುಂಪಿನೊಳಗೆ ಭಾನುವಾರ ಘರ್ಷಣೆ ಉಂಟಾಗಿದ್ದು, ಹಲವು ಗುಂಡುಗಳು ತಲೆ ಒಳಗೆ ಹೋದ್ದರಿಂದ ಲಮಂಗಿನ್ ಖಲ್ಹೌ ಮೃತಪಟ್ಟಿದ್ದಾನೆ.

ತನ್ನದೇ ಗುಂಪಿನವರು ಹಾರಿಸಿದ ಗುಂಡಿನಿಂದ ಆತ ಮೃತಪಟ್ಟಿದ್ದಾನೆ. ಆತನ ಮೃತದೇಹವನ್ನು ಬೊಕಾಜನ್ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿದೆ. ಅಲ್ಲಿಂದ ಮರಣೋತ್ತರ ಪರೀಕ್ಷೆಗೆ ದಿಫುಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com