ಡೆಲ್ಟಾ ಪ್ಲಸ್ ರೂಪಾಂತರಿ ನಿಯಂತ್ರಣಕ್ಕೆ ದೊಡ್ಡ ಮಟ್ಟದಲ್ಲಿ ಪರೀಕ್ಷೆಗಳೇಕೆ ನಡೆಯುತ್ತಿಲ್ಲ: ಕೇಂದ್ರ ಸರ್ಕಾರಕ್ಕೆ ರಾಹುಲ್ ಗಾಂಧಿ ಪ್ರಶ್ನೆ

ಕೊರೋನಾ ವೈರಸ್ ನ ಡೆಲ್ಟಾ ಪ್ಲಸ್ ರೂಪಾಂತರವನ್ನು ಪರೀಕ್ಷಿಸಲು ಮತ್ತು ತಡೆಗಟ್ಟಲು "ದೊಡ್ಡ ಪ್ರಮಾಣದ ಪರೀಕ್ಷೆಗಳನ್ನು ಸರ್ಕಾರ ಏಕೆ ಮಾಡಲಾಗುತ್ತಿಲ್ಲ ಮತ್ತು ಈ ರೂಪಾಂತರಗಳ ವಿರುದ್ಧ ಹಾಲಿ ಲಸಿಕೆಗಳು ಎಷ್ಟು ಪರಿಣಾಮಕಾರಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಕೊರೋನಾ ವೈರಸ್ ನ ಡೆಲ್ಟಾ ಪ್ಲಸ್ ರೂಪಾಂತರವನ್ನು ಪರೀಕ್ಷಿಸಲು ಮತ್ತು ತಡೆಗಟ್ಟಲು "ದೊಡ್ಡ ಪ್ರಮಾಣದ ಪರೀಕ್ಷೆಗಳನ್ನು ಸರ್ಕಾರ ಏಕೆ ಮಾಡಲಾಗುತ್ತಿಲ್ಲ ಮತ್ತು ಈ ರೂಪಾಂತರಗಳ ವಿರುದ್ಧ ಹಾಲಿ ಲಸಿಕೆಗಳು ಎಷ್ಟು ಪರಿಣಾಮಕಾರಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. 

ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಆರೋಗ್ಯ ಸಚಿವಾಲಯ ಡೆಲ್ಟಾ ಪ್ಲಸ್ ರೂಪಾಂತರವನ್ನು ಅತ್ಯಂತ ಕಾಳಜಿಯ ಮತ್ತು ಕಳವಳಕಾರಿ ರೂಪಾಂತರ ಎಂದು ಘೋಷಣೆ ಮಾಡಿದ್ದು, ಹೀಗಿದ್ದೂ ದೇಶದಲ್ಲಿ ಈ ರೂಪಾಂತರ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೇಕೆ ದೊಡ್ಡ ಮಟ್ಟದಲ್ಲಿ  ಪರೀಕ್ಷೆಗಳನ್ನು ನಡೆಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. 

"ಡೆಲ್ಟಾ ಪ್ಲಸ್ ರೂಪಾಂತರದ ಬಗ್ಗೆ ಮೋದಿ ಸರ್ಕಾರಕ್ಕೆ ರಾಹುಲ್ ಗಾಂಧಿ ಪ್ರಶ್ನೆಗಳು
ಡೆಲ್ಟಾ ಪ್ಲಸ್ ರೂಪಾಂತರ ಪರೀಕ್ಷಿಸಲು ಮತ್ತು ತಡೆಗಟ್ಟಲು ದೊಡ್ಡ ಪ್ರಮಾಣದಲ್ಲಿ ಪರೀಕ್ಷೆಯನ್ನು ಏಕೆ ಮಾಡಲಾಗುತ್ತಿಲ್ಲ? 
ಇದರ ವಿರುದ್ಧ ಲಸಿಕೆಗಳು ಎಷ್ಟು ಪರಿಣಾಮಕಾರಿ ಮತ್ತು ಸಂಪೂರ್ಣ ಮಾಹಿತಿ ಯಾವಾಗ ಲಭ್ಯವಾಗುತ್ತದೆ? 
ವೈರಸ್ ನ ಮೂರನೇ ಅಲೆಯನ್ನು ನಿಯಂತ್ರಿಸುವ ಯೋಜನೆ ಏನು..? ಎಂದು ಅವರು ಹಿಂದಿಯಲ್ಲಿ ಟ್ವೀಟ್  ಮಾಡಿದ್ದಾರೆ.

ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಕ್ರೂರ ಎರಡನೇ ಅಲೆಯಿಂದ ಭಾರತವು ತೀವ್ರವಾಗಿ ತತ್ತರಿಸಿತು, ಪ್ರತಿದಿನ ಭಾರಿ ಸಂಖ್ಯೆಯ ಜೀವಗಳನ್ನು ಸೋಂಕು ಬಲಿ ತೆಗೆದುಕೊಂಡಿತ್ತು. ವಿವಿಧ ಆಸ್ಪತ್ರೆಗಳಲ್ಲಿ ಆಮ್ಲಜನಕದ ಪೂರೈಕೆಯ ಕೊರತೆಯು ತೀವ್ರ ಆತಂಕ ಸೃಷ್ಟಿ ಮಾಡಿತ್ತು.  ಇದೀಗ ಹೊಸ ಸೋಂಕು ಪ್ರಕರಣಗಳ ಸಂಖ್ಯೆಯು ಕೆಳಮುಖ ಪ್ರವೃತ್ತಿಯನ್ನು ತೋರಿಸುತ್ತಿದೆ ಮತ್ತು ಸಕಾರಾತ್ಮಕ ಪ್ರಮಾಣವು ಕಳೆದ ಹಲವಾರು ದಿನಗಳಿಂದ ಕುಸಿಯುತ್ತಿದೆ. ದಿನನಿತ್ಯದ ಸೋಂಕು ಪ್ರಕರಣಗಳ ಪ್ರಮಾಣ 4 ಲಕ್ಷಕ್ಕೂ ದಿಂದ ಇದೀಗ ಸರಾಸರಿ 50 ಸಾವಿರಕ್ಕೆ ಕುಸಿದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com