ಕೇಂದ್ರದ ಆಮ್ಲಜನಕ ವಿತರಣಾ ಸೂತ್ರಕ್ಕೆ ಸುಪ್ರೀಂ ಕೋರ್ಟ್ ಅಸಮಾಧಾನ

ಕೇಂದ್ರವು ಗುರುವಾರ ಸುಪ್ರೀಂ ಕೋರ್ಟ್‌ಗೆ ತನ್ನ ಆದೇಶವನ್ನು ಪಾಲಿಸಿದೆ ಹಾಗೂ 700 ಮೆಟ್ರಿಕ್ ಟನ್ ಆಮ್ಲಜನಕದ ಬದಲು ದೆಹಲಿಯ ಕೋವಿಡ್ -19 ರೋಗಿಗಳಿಗೆ 730 ಮೆಟ್ರಿಕ್ ಟನ್ ಸರಬರಾಜು ಖಚಿತಪಡಿಸಿದೆ ಎಂದು ಹೇಳಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on

ನವದೆಹಲಿ: ಕೇಂದ್ರವು ಗುರುವಾರ ಸುಪ್ರೀಂ ಕೋರ್ಟ್‌ಗೆ ತನ್ನ ಆದೇಶವನ್ನು ಪಾಲಿಸಿದೆ ಹಾಗೂ 700 ಮೆಟ್ರಿಕ್ ಟನ್ ಆಮ್ಲಜನಕದ ಬದಲು ದೆಹಲಿಯ ಕೋವಿಡ್ -19 ರೋಗಿಗಳಿಗೆ 730 ಮೆಟ್ರಿಕ್ ಟನ್ ಸರಬರಾಜು ಖಚಿತಪಡಿಸಿದೆ ಎಂದು ಹೇಳಿದೆ. ಕೇಂದ್ರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್ ಮತ್ತು ಎಂ.ಆರ್.ಶಾ ಅವರ ನ್ಯಾಯಪೀಠಕ್ಕೆ ಮೇ 4 ರಂದು ರಾಷ್ಟ್ರ ರಾಜಧಾನಿಯ 56 ಪ್ರಮುಖ ಆಸ್ಪತ್ರೆಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಅವರಲ್ಲಿ ಗಮನಾರ್ಹ ಪ್ರಮಾಣದ ದ್ರವ ವೈದ್ಯಕೀಯ ಆಮ್ಲಜನಕ (ಎಲ್‌ಎಂಒ) ಇದೆ ಎಂದು ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಮೆಹ್ತಾ ಹೇಳಿಕೆಗೆ ತೃಪ್ತರಾಗದೆ “ನಿಮ್ಮ ಆಮ್ಲಜನಕದ ವಿತರಣೆ ಸೂತ್ರಕ್ಕೆ ಒಂದು ಪುನರ್ಮನನದ ಅಗತ್ಯವಿದೆ.ನೀವು ಸೂತ್ರವನ್ನು ಸಿದ್ಧಪಡಿಸಿದಾಗ, ಐಸಿಯುಗೆ ಹೋದ ಪ್ರತಿಯೊಬ್ಬರಿಗೂ ಆಮ್ಲಜನಕದ ಅಗತ್ಯವಿರಲಿಲ್ಲ ಆದರೆ ಈಗ ಅನೇಕ ಜೋಂ ಐಸೋಲೇಷನ್ ರೋಗಿಗಳಿಗೆ ಆಮ್ಲಜನಕದ ಅಗತ್ಯವಿದೆ. ನಿಮ್ಮ ಸೂತ್ರವು ಆಂಬುಲೆನ್ಸ್, ಕೋವಿಡ್ ಕೇರ್ ಸೌಲಭ್ಯ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ, ”ಎಂದರು.

"ನಿಮ್ಮ ಆಮ್ಲಜನಕ ವಿತರಣೆ ಸೂತ್ರವು ದೆಹಲಿಯನ್ನು ಸರಿಯಾಗಿ ಅಳೆಯುವಲ್ಲಿ ವಿಫಲವಾಗಿದೆ. ಕರ್ನಾಟಕದ ನ್ಯಾಯಾಂಗ ಆದೇಶವಿದೆ, ನಾವು ಈ ಪ್ಯಾನ್ ಇಂಡಿಯಾ ಸರಬರಾಜು, ವಿತರಣೆ ನೋಡಬೇಕಿದೆ" ಎಂದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com