ಟಾಟಾನಗರದಿಂದ ಬೆಂಗಳೂರಿಗೆ ಮೊದಲ 'ಆಕ್ಸಿಜನ್ ಎಕ್ಸ್ ಪ್ರೆಸ್' ಪ್ರಯಾಣ- ಪಿಯೂಷ್ ಗೋಯಲ್

ರಾಜ್ಯದಲ್ಲಿನ ಕೋವಿಡ್-19 ರೋಗಿಗಳಿಗೆ ಆಕ್ಸಿಜನ್ ಒದಗಿಸುವ ನಿಟ್ಟಿನಲ್ಲಿ ಮೊದಲ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಬೆಂಗಳೂರಿನತ್ತ ಹೊರಟಿದೆ.
ಪಿಯೂಷ್ ಗೋಯಲ್, ಆಕ್ಸಿಜನ್ ಎಕ್ಸ್ ಪ್ರೆಸ್
ಪಿಯೂಷ್ ಗೋಯಲ್, ಆಕ್ಸಿಜನ್ ಎಕ್ಸ್ ಪ್ರೆಸ್
Updated on: 

ನವದೆಹಲಿ: ರಾಜ್ಯದಲ್ಲಿನ ಕೋವಿಡ್-19 ರೋಗಿಗಳಿಗೆ ಆಕ್ಸಿಜನ್ ಒದಗಿಸುವ ನಿಟ್ಟಿನಲ್ಲಿ ಮೊದಲ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಬೆಂಗಳೂರಿನತ್ತ ಹೊರಟಿದೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್  ಟಾಟಾನಗರದಿಂದ ಲಿಕ್ವಿಡ್ ಆಮ್ಲಜನಕದ ಕಂಟೇನರ್ ಗಳನ್ನು ಹೊತ್ತ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ ಎಂದು ಹೇಳಿದ್ದಾರೆ.

ರಾಜ್ಯಕ್ಕೆ ಇದೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಆಕ್ಸಿಜನ್ ಎಕ್ಸ್ ಪ್ರೆಸ್ ರೈಲಿನ ಮೂಲಕ ಆರು ಕಂಟೇನರ್ ಗಳಲ್ಲಿ ಆಮ್ಲಜನಕವನ್ನು ರಾಜ್ಯಕ್ಕೆ ಪೂರೈಸುತ್ತಿದೆ. ಇದರಿಂದ ರಾಜ್ಯದಲ್ಲಿನ ಕೋವಿಡ್ ಪೀಡಿತರಿಗೆ ಹೆಚ್ಚಿನ ಅನುಕೂಲಕವಾಗಲಿದೆ ಎಂದು ಪಿಯೂಷ್ ಗೋಯಲ್ ಟ್ವೀಟರ್ ಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com