ವೇಗವಾಗಿ 17 ಕೋಟಿ ಡೋಸ್ ಲಸಿಕೆ ಹಾಕಿದ ಮೊದಲ ದೇಶ; ವಿಶ್ವದಲ್ಲೇ ಅತಿ ವೇಗದ ಲಸಿಕಾ ಅಭಿಯಾನಕ್ಕೆ ಭಾರತ ಸಾಕ್ಷಿ

ಭಾರತ ಜಾಗತಿಕವಾಗಿ ಅತಿ ಹೆಚ್ಚು ವೇಗವಾಗಿ ಕೋವಿಡ್‌-19 ಲಸಿಕೆ ನೀಡುವ ದೇಶವಾಗಿ ಹೊರಹೊಮ್ಮಿದ್ದು, ಇಲ್ಲಿಯವರೆಗೆ 17 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ನವದೆಹಲಿ: ಭಾರತ ಜಾಗತಿಕವಾಗಿ ಅತಿ ಹೆಚ್ಚು ವೇಗವಾಗಿ ಕೋವಿಡ್‌-19 ಲಸಿಕೆ ನೀಡುವ ದೇಶವಾಗಿ ಹೊರಹೊಮ್ಮಿದ್ದು, ಇಲ್ಲಿಯವರೆಗೆ 17 ಕೋಟಿ ಡೋಸ್ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ತಿಳಿಸಿದೆ.

ಆ ಮೂಲಕ ವೇಗವಾಗಿ 17 ಕೋಟಿ ಡೋಸ್ ಲಸಿಕೆಯನ್ನು ಹಾಕಿದ ಮೊದಲ ದೇಶ ಎಂಬ ಕೀರ್ತಿಗೆ ಭಾರತ ಭಾಜನವಾಗಿದೆ. ಈ ಪ್ರಮಾಣದ ಲಸಿಕೆಯನ್ನು ಭಾರತ 114 ದಿನಗಳಲ್ಲಿ ವಿತರಿಸಿದ್ದು, ಚೀನಾ 119 ದಿನಗಳನ್ನು ತೆಗೆದುಕೊಂಡಿತ್ತು. ಇದೇ ಹೆಗ್ಗುರುತನ್ನು ತಲುಪಲು ಯುಎಸ್ 115 ದಿನಗಳನ್ನು ತೆಗೆದುಕೊಂಡಿದೆ ಎಂದು  ಸಚಿವಾಲಯ ತಿಳಿಸಿದೆ.

ಇಲ್ಲಿಯವರೆಗೆ ದೇಶದಲ್ಲಿ ಒಟ್ಟು 17,01,76,603 ಡೋಸ್ ಲಸಿಕೆ ಪ್ರಮಾಣವನ್ನು ನೀಡಲಾಗಿದೆ. ಈ ಪೈಕಿ ಇದರಲ್ಲಿ 95,47,102 ಆರೋಗ್ಯ ಕಾರ್ಯಕರ್ತರು ಮೊದಲನೇ ಹಾಗೂ 64,71,385 ಮಂದಿ ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ. 1,39,72,612 ಮುಂಚೂಣಿ ಕಾರ್ಯಕರ್ತರು  ಮೊದಲನೇ ಹಾಗೂ 77,55,283 ಕಾರ್ಯಕರ್ತರು ಎರಡನೇ ಡೋಸ್‌ ಪಡೆದಿದ್ದಾರೆ. 18-45 ವಯಸ್ಸಿನ (1 ನೇ ಡೋಸ್) 20,31,854 ಫಲಾನುಭವಿಗಳು, 5,51,79,217 (1 ನೇ ಡೋಸ್) ಪಡೆದಿದ್ದಾರೆ.

45 ರಿಂದ 60 ವರ್ಷ ವಯಸ್ಸಿನ 65,61,851 (2 ನೇ ಡೋಸ್) ಫಲಾನುಭವಿಗಳು. 5,36,74,082 1 ನೇ ಡೋಸ್ ಫಲಾನುಭವಿಗಳು ಮತ್ತು 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ 1,49,83,217 2 ನೇ ಡೋಸ್ ಫಲಾನುಭವಿಗಳಿದ್ದಾರೆ. ಕಳೆದ 24 ಗಂಟೆಗಳಲ್ಲಿ 6.8 ಲಕ್ಷಕ್ಕೂ ಹೆಚ್ಚು ಲಸಿಕೆ ಪ್ರಮಾಣವನ್ನು ನೀಡಲಾಯಿತು  ಎಂದು ಸಚಿವಾಲಯ ತಿಳಿಸಿದೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com