ದೇಶ

ಮೀರತ್: ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸಿದ ಅವಳಿ ಸೋದರರು ಕೊರೋನಾದಿಂದ ಸಾವು

ಮೀರತ್: ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸಿದ ಅವಳಿ ಸೋದರರು ಕೊರೋನಾದಿಂದ ಸಾವು
ಸಂಗ್ರಹ ಚಿತ್ರ
Published On :

ಮೀರತ್: ತಮ್ಮ 24 ನೇ ಹುಟ್ಟುಹಬ್ಬವನ್ನು ಒಟ್ಟಿಗೆ ಆಚರಿಸಿದ ಸುಮಾರು ಒಂದು ತಿಂಗಳ ನಂತರ, ಉತ್ತರ ಪ್ರದೇಶದ ಮೀರತ್‌ನಲ್ಲಿ ಅವಳಿ ಸಹೋದರರು ಕೇವಲ ಒಂದೇ ಗಂಟೆಗಳ ಅಂತರದಲ್ಲಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. 

ಅವರ ಪೋಷಕರು ಹೇಳಿದಂತೆ ಮೇ 13 ರಂದು ಜೋಫ್ರೆಡ್ ವರ್ಗೀಸ್ ಗ್ರೆಗೊರಿ ಕೊನೆಯುಸಿರೆಳೆದರು ಮತ್ತು ಕೆಲವು ಗಂಟೆಗಳ ನಂತರ, ಅವರ ಸಹೋದರ ರಾಲ್ಫ್ರೆಡ್ ಜಾರ್ಜ್ ಗ್ರೆಗೊರಿ ಸಹ ಸೋಂಕಿಗೆ ಬಲಿಯಾದರು.

"ನಾವು ಸಾಕಷ್ಟು ಕಷ್ಟಪಟ್ಟಿದ್ದೆವು, ಅವರು ಮನೆ ಹಾಗೂ ನಮಗೆ ಉತ್ತಮ ಜೀವನವನ್ನು ನೀಡಲು ಬಯಸಿದ್ದರು. ಇಬ್ಬರೂ ಹೈದರಾಬಾದ್‌ನಿಂದ ಕೊರಿಯಾಕ್ಕೆ ಮತ್ತು ನಂತರ ಜರ್ಮನಿಗೆ ತೆರಳಲು ಯೋಜಿಸುತ್ತಿದ್ದರು. ದೇವರು ನಮಗೆ ಈ ಶಿಕ್ಷೆಯನ್ನು ಏಕೆ ಕೊಟ್ಟನೆಂದು ನನಗೆ ತಿಳಿದಿಲ್ಲ" ಎಂದು ಅವಳಿ ಸೋದರರ ತಂದೆ ಗ್ರೆಗೊರಿ ರೇಮಂಡ್ ರಾಫೆಲ್ ಹೇಳಿದ್ದಾರೆ.

ಅವಳಿ ಸಹೋದರರು ತಮ್ಮ 24 ನೇ ಹುಟ್ಟುಹಬ್ಬವನ್ನು ಏಪ್ರಿಲ್ 23 ರಂದು ಒಟ್ಟಿಗೆ ಆಚರಿಸಿದ್ದರು. ಏಪ್ರಿಲ್ 24 ರಿಂದ ಅವರ ಆರೋಗ್ಯ ಕ್ಷೀಣಿಸಲು ಪ್ರಾರಂಭಿಸಿತು. ಆರಂಭದಲ್ಲಿ ಇಬ್ಬರಿಗೂ ಮನೆಯಲ್ಲಿ ಚಿಕಿತ್ಸೆ ನೀಡಲಾಗಿದ್ದರೂ ಜ್ವರ ಕಡಿಮೆಯಾಗದಿದ್ದಾಗ ಅವರನ್ನು ಮೇ 1 ರಂದು ಆಸ್ಪತ್ರೆಗೆ ದಾಖಲಿಸಲಾಯಿತು.

ಅವರ ಮೊದಲ ಪರೀಕ್ಷಾ ವರದಿಯು ಕೊರೋನಾವನ್ನು ದೃಢಪಡಿಸಿದೆ ಎಂದು ರಾಫೆಲ್ ಹೇಳಿದ್ದಾರೆ. ಎರಡನೇ ವರದಿ ಬರುವ ಹೊತ್ತಿಗೆ, ಸೋಂಕು ಅವರ ಶ್ವಾಸಕೋಶಕ್ಕೆ ಹರಡಿತ್ತು. "ಇಬ್ಬರೂ ಏಕಕಾಲದಲ್ಲಿ ಜಗತ್ತಿಗೆ ಕಾಲಿಟ್ಟರು. ಇಬ್ಬರೂ ಕಂಪ್ಯೂಟರ್ ಎಂಜಿನಿಯರಿಂಗ್ ಸಹ ಮಾಡಿದರು ಮತ್ತು ಹೈದರಾಬಾದ್ ನಲ್ಲಿ ಕೆಲಸ ಪಡೆದರು. ಇಬ್ಬರೂ ಒಟ್ಟಿಗೆ ಅನಾರೋಗ್ಯದಿಂದ ಬಳಲುತ್ತಿದ್ದರು. ಈ ಜಗತ್ತನ್ನು ಒಟ್ಟಿಗೆ ಬಿಡುತ್ತಾರೆ ಎಂದು ತಿಳಿದಿರಲಿಲ್ಲ" ಎಂದು ರಾಫೆಲ್ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.