ಪ್ರಧಾನಿ ಇಮೇಜ್‌ ಹಾಳಾಗಿದೆ, ಕೊರೋನಾ ವೈರಸ್ ಮಾರಣ ಹೋಮಕ್ಕೆ ಮೋದಿ ಕಾರಣ: ರಾಹುಲ್ ಗಾಂಧಿ

ದೇಶದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಬಾರಿಸಲು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣಕರ್ತರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on: 

ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಮರಣ ಮೃದಂಗ ಬಾರಿಸಲು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣಕರ್ತರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಪ್ರಧಾನಿ ಅವರ ಇಮೇಜ್‌ ಹಾಳಾಗಿದೆ, ಅವರು ಶಾಕ್‌ನಲ್ಲಿ ಇದ್ದಾರೆ ಎಂದು ರಾಹುಲ್ ಹೇಳಿದ್ದಾರೆ.

ವಿಡಿಯೋ ಕಾನ್ಫರೆನ್ಸ್‌ ಮೂಲಕ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಕೊರೊನಾ 3ನೇ ಅಲೆಯು 2ನೇ ಅಲೆಗಿಂತ ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ. ನಾವು ಲಸಿಕಾ ಅಭಿಯಾನಕ್ಕೆ ವೇಗ ನೀಡದಿದ್ದರೆ 4, 5ನೇ ಅಲೆಗಳು ಬರುತ್ತವೆ ಎಂದೂ ರಾಹುಲ್ ಎಚ್ಚರಿಕೆ ನೀಡಿದ್ದಾರೆ.

ನಾನು ನಿಮ್ಮನ್ನು ಭಯಪಡಿಸುತ್ತಿಲ್ಲ ಎಂದು ಹೇಳಿದ ರಾಹುಲ್, ನಾನು ಕೇವಲ ನಿಮ್ಮನ್ನು ಎಚ್ಚರಿಸುತ್ತಿವೆ ಎಂದಿದ್ದಾರೆ. ಇದೇ ವೇಳೆ ಕೋವಿಡ್‌ ಅನ್ನು 'ಮೋವಿಡ್‌' ಎಂದು ಲೇವಡಿ ಮಾಡಿದ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡ ರಾಹುಲ್ ಗಾಂಧಿ, ಕಾಂಗ್ರೆಸ್‌ ವಿರುದ್ಧದ ಟೂಲ್‌ ಕಿಟ್ ಆರೋಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿದರು.

ಕೊರೊನಾ ವಿಚಾರವಾಗಿ 3 ತಿಂಗಳ ಹಿಂದೆಯೇ ಈ ಕುರಿತು ನಾನು ಎಚ್ಚರಿಸಿದ್ದೆ ಎಂದ ರಾಹುಲ್ ಗಾಂಧಿ, ಸಾವಿನ ಸಂಖ್ಯೆ ಕುರಿತು ಸುಳ್ಳು ಹೇಳಬೇಡಿ, ದೇಶದ ಜನರಿಗೆ ನೀವು ಸುಳ್ಳು ಹೇಳುತ್ತಿದ್ದೀರಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಅಧಿಕಾರಿಗಳು, ವಿರೋಧ ಪಕ್ಷದ ನಾಯಕರ ಮಾತುಗಳನ್ನು ಕೇಳಿ, ನಿಮಗೆ ಮಾಹಿತಿ ಕೊರತೆ ಇದೆ ಹಾಗೂ ಸಮಯ ಕೂಡಾ ಕಡಿಮೆ ಇದೆ ಎಂದು ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಅಬ್ಬರಿಸಿದ್ದಾರೆ.

ದೇಶದಲ್ಲಿ ಕೊರೊನಾ ಲಸಿಕೆ ಅಭಿಯಾನ ವೇಗಗೊಳಿಸಿ, ಅದೊಂದೇ ಪರಿಹಾರ ಎಂದಿರುವ ರಾಹುಲ್ ಗಾಂಧಿ, ಮೊದಲ ಅಲೆಗಿಂತಾ ಎರಡನೇ ಅಲೆಯಲ್ಲಿ ವೈರಸ್ ಶಕ್ತಿಯುತವಾಗಿತ್ತು, ನಂತರದ ಅಲೆಗಳಲ್ಲಿ ಮತ್ತಷ್ಟು ಶಕ್ತಿಯುತವಾಗಿ ಬರುತ್ತವೆ ಎಂದು ಹೇಳಿದ್ದಾರೆ. ಕೊರೊನಾ ಲಸಿಕಾ ಅಭಿಯಾನದ ಕಾರ್ಯತಂತ್ರವನ್ನು ಕಳೆದ ವರ್ಷವೇ ಆರಂಭಿಸಿಬೇಕಿತ್ತು. ನಾನು ಎಚ್ಚರಿಕೆಯನ್ನೂ ನೀಡಿದ್ದೆ. ಆದ್ರೆ, ನೀವೆಲ್ಲರೂ ಈ ಮಾತನ್ನು ಕಡೆಗಣಿಸಿದಿರಿ ಎಂದು ರಾಹುಲ್ ಬೇಸರ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com