ಭಾರತ 7 ವರ್ಷಗಳ ಮೋದಿ ಸರ್ಕಾರದ ಅವಧಿಯಲ್ಲಿ ಅಭೂತಪೂರ್ವ ಸಾಧನೆ ಕಂಡಿದೆ: ಅಮಿತ್ ಶಾ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಆಡಳಿತದ 7 ವರ್ಷಗಳ ಅವಧಿಯಲ್ಲಿ ಭಾರತ ಅಭೂತಪೂರ್ವ ಸಾಧನೆ ಕಂಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮೋದಿ 2.0 ಸರ್ಕಾರ 2 ನೇ ವರ್ಷದ ಆಚರಣೆಯ ಹಿನ್ನೆಲೆಯಲ್ಲಿ ಅಭಿನಂದನೆ ಸಲ್ಲಿಸಿರುವ ಅಮಿತ್ ಶಾ, ದೇಶ ಭದ್ರತೆ, ಸಾರ್ವಜನಿಕ ಕಲ್ಯಾಣ, ಸುಧಾರಣೆಗಳ ವಿಭಾಗದಲ್ಲಿ ಅಭೂತಪೂರ್ವ ಸಾಧನೆಗಳನ್ನು ಕಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಬಡವರ, ರೈತರ ಜೀವನ, ದುರ್ಬಲ ಸಮಾಜದವರನ್ನು ಮುನ್ನೆಲೆಗೆ ತರುವ ಮೂಲಕ ಜೀವನ ಗುಣಮಟ್ಟ ಸುಧಾರಣೆ ಮಾಡಿದ್ದು ಭಾರತವನ್ನು ಬಲಿಷ್ಠ ರಾಷ್ಟ್ರವನ್ನಾಗಿಸಿದ ಕೀರ್ತಿಯನ್ನು ಅಮಿತ್ ಶಾ ಮೋದಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಅಭಿವೃದ್ಧಿ, ಭದ್ರತೆ, ಸಾರ್ವಜನಿಕ ಕಲ್ಯಾಣ ಹಾಗೂ ಮೈಲಿಗಲ್ಲು ಸುಧಾರಣೆಗಳಿಗೆ ಮೋದಿ ಸರ್ಕಾರ ಅನನ್ಯ ಉದಾಹರಣೆಯಾಗಿದೆ. 7 ವರ್ಷಗಳ ಅವಧಿಯಲ್ಲಿ ದೇಶದ ಜನತೆ ಮೋದಿ ಸರ್ಕಾರದ ಮೇಲೆ ಸ್ಥಿರವಾದ ವಿಶ್ವಾಸ ವ್ಯಕ್ತಪಡಿಸಿದ್ದಾರೆ, ಪ್ರತಿ ಸವಾಲನ್ನೂ ಎದುರಿಸಿ ಭಾರತದ ತಡೆರಹಿತ ಅಭಿವೃದ್ಧಿ ಪಯಣವನ್ನು ಮುಂದುವರೆಸುತ್ತೇವೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ