ಬಿಜೆಪಿ ರಾಷ್ಟ್ರೀಯ ಸಭೆಯಲ್ಲಿ ಮೋದಿ ಪ್ರವಾಸದ ಚರ್ಚೆ: ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ರಣಕಹಳೆ
ನವದೆಹಲಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ವಿಧಾನಸಭೆ ಚುನಾವಣೆಯ ರಣಕಹಳೆ ಊದಿದ್ದು, ಪ್ರಧಾನಿ ಮೋದಿ ಬ್ಯಾಕ್ ಟು ಬ್ಯಾಕ್ ಪ್ರವಾಸ ಮಾಡಲಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಆರಂಭವಾಗುತ್ತಿದ್ದಂತೆಯೇ ಭಾರತೀಯ ಜನತಾ ಪಕ್ಷ (ಬಿಜೆಪಿ) ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ರಣಕಹಳೆ ಮೊಳಗಿಸಿದೆ.
ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಪಂಚರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಸಿದ್ಧತೆ ಕುರಿತು ಚರ್ಚೆ, ಮಾರ್ಗಸೂಚಿ ರೂಪಿಸಲಾಗುತ್ತಿದ್ದು, ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ರಾಜ್ಯಗಳ ಭೇಟಿ ತೀವ್ರಗೊಳ್ಳಲಿದೆ.
ಇನ್ನು ಉತ್ತರ ಪ್ರದೇಶಕ್ಕೆ ಮುಂದಿನ 15 ದಿನಗಳಲ್ಲಿ ಪ್ರಧಾನಿ ಮೋದಿ 3 ಬಾರಿ ಭೇಟಿ ನೀಡಲಿದ್ದು, ಅಲ್ಲಿ ಹಲವು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದಲ್ಲದೆ, ಗೃಹ ಸಚಿವ ಅಮಿತ್ ಶಾ ಅವರ 2 ಭೇಟಿಗಳನ್ನು ಸಹ ಪ್ರಸ್ತಾಪಿಸಲಾಗಿದೆ.
ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶದಲ್ಲಿ ಪ್ರಧಾನಿ ಬಿರುಸಿನ ಪ್ರವಾಸ ಮಾಡಲಿದ್ದಾರೆ. ಚುನಾವಣೆಯ ದೃಷ್ಟಿಯಿಂದ ಇವು ಅತ್ಯಂತ ಮಹತ್ವದ ಪ್ರವಾಸಗಳಾಗಲಿವೆ. ಇವುಗಳಲ್ಲಿ ಪ್ರಧಾನಿ ಸಾರ್ವಜನಿಕ ಸಭೆಗಳನ್ನೂ ಉದ್ದೇಶಿಸಿ ಮಾತನಾಡಲಿದ್ದಾರೆ. ನವೆಂಬರ್ 19 ರಂದು ಪ್ರಧಾನಿ ಮೋದಿ ಝಾನ್ಸಿಗೆ ಭೇಟಿ ನೀಡಲಿದ್ದಾರೆ. ಝಾನ್ಸಿಯ ಕೋಟೆಯಲ್ಲಿ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಝಾನ್ಸಿ ಪ್ರವಾಸದಲ್ಲಿ ಬುಂದೇಲ್‌ಖಂಡ್‌ಗೆ ಪ್ರಧಾನಿ ಅನೇಕ ಉಡುಗೊರೆಗಳನ್ನು ನೀಡಲಿದ್ದಾರೆ.
Related Article
ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿ: ಪ್ರಧಾನಿ ಮೋದಿ, ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿ ಹಲವು ನಾಯಕರು ಭಾಗಿ
ಪವಿತ್ರ ಯಾತ್ರಾಸ್ಥಳಗಳಿಗೆ ಭೇಟಿ ನೀಡುವಂತೆ ಭಾರತೀಯರಿಗೆ ಮೋದಿ ಕರೆ
ಕೋವಿಡ್ ಚಿಕಿತ್ಸೆಗೆ ಮಾತ್ರೆ ಔಷಧಿ ಅನುಮೋದಿಸಿದ ಮೊದಲ ದೇಶ ಬ್ರಿಟನ್
ಈ ಬಾರಿಯೂ ಸೇನೆಯೊಂದಿಗೆ ದೀಪಾವಳಿ ಆಚರಣೆ: ನೌಶೆರಾ ತಲುಪಿದ ಪ್ರಧಾನಿ ಮೋದಿ, ಹುತಾತ್ಮ ಯೋಧರಿಗೆ ಗೌರವ ನಮನ
COP-26 ಸಮ್ಮೇಳನ: 'ಒಬ್ಬನೇ ಸೂರ್ಯ, ಒಂದು ಜಗತ್ತು, ಒಂದು ಗ್ರಿಡ್' ಗೆ ಪ್ರಧಾನಿ ಮೋದಿ ಕರೆ
66ನೇ ಕನ್ನಡ ರಾಜ್ಯೋತ್ಸವ: ಪ್ರಧಾನಿ ಮೋದಿಯಿಂದ ಕನ್ನಡದಲ್ಲಿ ಶುಭಾಶಯ

