ಸ್ನಾನದ ಬಳಿಕ ಟವಲ್ ನೀಡಲು ತಡ ಮಾಡಿದ ಪತ್ನಿ ಕೊಂದ ಪತಿರಾಯ!

ಸ್ನಾನದ ಬಳಿಕ ಟವಲ್ ನೀಡಲು ತಡ ಮಾಡಿದ್ದಕ್ಕೆ ಕೋಪಗೊಂಡ ಪತಿಯೊಬ್ಬ ಪತ್ನಿಯನ್ನೇ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಬಾಲಾಘಾಟ್'ನಲ್ಲಿ ಶನಿವಾರ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬಾಲಾಘಾಟ್: ಸ್ನಾನದ ಬಳಿಕ ಟವಲ್ ನೀಡಲು ತಡ ಮಾಡಿದ್ದಕ್ಕೆ ಕೋಪಗೊಂಡ ಪತಿಯೊಬ್ಬ ಪತ್ನಿಯನ್ನೇ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಬಾಲಾಘಾಟ್'ನಲ್ಲಿ ಶನಿವಾರ ನಡೆದಿದೆ.

ಪುಷ್ಪಾ ಭಾಯ್ (45) ಮೃತಪಟ್ಟ ಮಹಿಳೆಯಾಗಿದ್ದಾರೆ. ರಾಜ್ ಕುಮಾರ್ ಬಾಹೆ (50) ಹತ್ಯೆ ಮಾಡಿದ ಆರೋಪಿಯಾಗಿದ್ದಾನೆ.

ಆರೋಪಿ ರಾಜ್ ಕುಮಾರ್ ಬಾಹೆ ಸ್ನಾನಕ್ಕೆ ಹೋಗಿದ್ದು, ಸ್ನಾನದ ಬಳಿಕ ಟವಲ್ ನೀಡುವಂತೆ ಪತ್ನಿಯನ್ನು ಕೇಳಿದ್ದಾನೆ. ಈ ವೇಳೆ ಪಾತ್ರೆ ತೊಳೆಯುತ್ತಿದ್ದು, ಸ್ವಲ್ಪ ಹೊತ್ತು ಕಾಯುವಂತೆ ಪುಷ್ಪಾ ತಿಳಿಸಿದ್ದಾರೆ. ಇದಕ್ಕೆ ಕೋಪಗೊಂಡ ಆರೋಪಿ ಪತ್ನಿಯ ತಲೆಯನ್ನು ಹಿಡಿದು ಬಡಿಯಲು ಆರಂಭಿಸಿದ್ದಾನೆ. ಈ ವೇಳೆ ಆತನ ಪುತ್ರಿ ಮಧ್ಯೆ ಪ್ರವೇಶಿಸಿ ತಡೆಯಲು ಯತ್ನಿಸಿದಾಗ ಆಕೆಗೆ ಬೆದರಿಕೆ ಹಾಕಿದ್ದಾನೆ.

ತಲೆಗೆ ತೀವ್ರವಾಗಿ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಪುಷ್ಪಾ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆ ಬಳಿಕ ಪೊಲೀಸರು ಆರೋಪಿ ಪತಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com