ಕಣ್ಣೂರು: ಕೇರಳ ಪೊಲೀಸರು ಸೋಮವಾರ 100 ಕೋಟಿ ರೂಪಾಯಿ ಮೌಲ್ಯದ ಕ್ರಿಪ್ಟೋ ಕರೆನ್ಸಿ ವಂಚನೆಯನ್ನು ಬಯಲಿಗೆಳೆದಿದ್ದು, ನಾಲ್ವರನ್ನು ಬಂಧಿಸಿದ್ದಾರೆ.
ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ 100 ಕೋಟಿ ರೂಪಾಯಿಗಳ ಹೂಡಿಕೆ ವಂಚನೆ ಪ್ರಕರಣ ಇದಾಗಿದ್ದು, ಬೆಂಗಳೂರು ಮೂಲದ ಕಂಪನಿ ಲಾಂಗ್ ರೀಚ್ ಟೆಕ್ನಾಲಜೀಸ್ ನಿಂದ ಸಾವಿರಾರು ಹೂಡಿಕೆದಾರರಿಂದ ಹಣವನ್ನು ಆನ್ ಲೈನ್ ಮೂಲಕ ಸಂಗ್ರಹಿಸಲಾಗಿದೆ.
ಕಣ್ಣೂರು ಎಸಿಪಿ, ಪಿಪಿ ಸದಾನಂದನ್ ಈ ಬಗ್ಗೆ ಮಾತನಾಡಿದ್ದು, ಹೂಡಿಕೆದಾರರನ್ನು ಆಕರ್ಷಿಸುವುದಕ್ಕೆ ವಂಚಕರು ವಿವಿಧ ಜಾಹಿರಾತುಗಳನ್ನು ನೀಡಿದ್ದರು. ಆನ್ ಲೈನ್ ಮೂಲಕ ಹಣವನ್ನೂ ಪಡೆದಿದ್ದರು ಎಂದು ಹೇಳಿದ್ದಾರೆ.
ಪಿಎಂ ಮುಹಮ್ಮದ್ ರಿಯಾಸ್ (31), ಕಾಸರಗೋಡು, ಆಲಂಪಾಡಿ, ಸಿ ಶಫೀಕ್ (30) ಮಂಜೇರಿ, ಮಳಪುರಂ, ವಸೀಮ್ ಮುನಾವರ್ ಅಲಿ (35) ಪವನ್ಗಡ್, ಕೋಜಿಕ್ಕೋಡ್ ಹಾಗೂ ಮುಹಮ್ಮದ್ ಶಫೀಕ್ (28) ವಂಡೂರ್ ಮಳಪ್ಪುರಂ ಬಂಧಿತ ವಂಚಕರಾಗಿದ್ದಾರೆ.
ಈ ವಂಚಕರ ತಂಡ ಹೂಡಿಕೆದಾರರಿಗೆ ದಿನವೂ ಶೇ.2 ರಿಂದ 5 ರಷ್ಟು ಬಡ್ಡಿ ಬರುವುದಾಗಿ ನಂಬಿಸುತ್ತಿದ್ದರು. ಆದರೆ ಕೆಲವು ಹೂಡಿಕೆದಾರರಿಗೆ ಬಡ್ಡಿಯೂ ಇಲ್ಲದೇ ತಮ್ಮ ಹಣವೂ ವಾಪಸ್ಸಾಗದೇ ಇದ್ದಾಗ ವಂಚನೆಗೊಳಗಾಗಿದ್ದೇವೆ ಎಂಬ ಸತ್ಯ ಅರಿವಾಗತೊಡಗಿದೆ. ಹೂಡಿಕೆದಾರರ ಪೈಕಿ ಮುಹಮ್ಮದ್ ದಿಶಾದ್ ಎಂಬಾತ ನಾಲ್ಕು ತಿಂಗಳ ಹಿಂದೆ ಕಣ್ಣೂರು ಪೊಲೀಸರು ಈ ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದ್ದರು.
Advertisement