ಭಾರತದಲ್ಲಿ 5 ಮುಖ್ಯ ಪರಿವರ್ತನೆ ನಡೆಯುತ್ತಿದ್ದು, ಅತ್ಯಂತ ವ್ಯಾಪಕ ಸಾರ್ವಜನಿಕ ಮಾಹಿತಿ ಮೂಲಸೌಕರ್ಯ ನಿರ್ಮಿಸುತ್ತಿದ್ದೇವೆ: ಪ್ರಧಾನಿ ಮೋದಿ

ನಾವು ಇಂದು ಬದಲಾವಣೆಯ ಸಮಯದಲ್ಲಿದ್ದು, ಅದು ಯುಗದಲ್ಲಿ ಒಂದು ಬಾರಿ ನಡೆಯುತ್ತದೆ. ಡಿಜಿಟಲ್ ಯುಗ ನಮ್ಮ ಸುತ್ತಮುತ್ತಲಿರುವುದನ್ನು ಬದಲಾಯಿಸುತ್ತಿದೆ. ಡಿಜಿಟಲ್ ಯುಗ ರಾಜಕೀಯ, ಆರ್ಥಿಕತೆ ಮತ್ತು ಸಮಾಜವನ್ನು ಮರುವ್ಯಾಖ್ಯಾನಿಸುತ್ತಿದೆ. ಇದು ಸಾರ್ವಭೌಮತ್ವ, ಆಡಳಿತ, ನೈತಿಕತೆ, ಕಾನೂನು, ಹಕ್ಕುಗಳು ಮತ್ತು ಭದ್ರತೆಯ ಮೇಲೆ ಹೊಸ ಪ್ರಶ್ನೆಗಳನ್ನು ಎತ್ತುತ್ತಿದೆ ಎಂದು ಪ್ರಧಾ
ವರ್ಚುವಲ್ ಮೂಲಕ ಮಾತನಾಡಿದ ಪಿಎಂ ನರೇಂದ್ರ ಮೋದಿ
ವರ್ಚುವಲ್ ಮೂಲಕ ಮಾತನಾಡಿದ ಪಿಎಂ ನರೇಂದ್ರ ಮೋದಿ
Updated on

ನವದೆಹಲಿ:ನಾವು ಇಂದು ಬದಲಾವಣೆಯ ಸಮಯದಲ್ಲಿದ್ದು, ಅದು ಯುಗದಲ್ಲಿ ಒಂದು ಬಾರಿ ನಡೆಯುತ್ತದೆ. ಡಿಜಿಟಲ್ ಯುಗ ನಮ್ಮ ಸುತ್ತಮುತ್ತಲಿರುವುದನ್ನು ಬದಲಾಯಿಸುತ್ತಿದೆ. ಡಿಜಿಟಲ್ ಯುಗ ರಾಜಕೀಯ, ಆರ್ಥಿಕತೆ ಮತ್ತು ಸಮಾಜವನ್ನು ಮರುವ್ಯಾಖ್ಯಾನಿಸುತ್ತಿದೆ. ಇದು ಸಾರ್ವಭೌಮತ್ವ, ಆಡಳಿತ, ನೈತಿಕತೆ, ಕಾನೂನು, ಹಕ್ಕುಗಳು ಮತ್ತು ಭದ್ರತೆಯ ಮೇಲೆ ಹೊಸ ಪ್ರಶ್ನೆಗಳನ್ನು ಎತ್ತುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರು ಇಂದು ವರ್ಚುವಲ್ ಮೂಲಕ ಭಾರತ-ಸಿಡ್ನಿ ಮಾತುಕತೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಸಿಡ್ನಿ ಸಂವಾದದಲ್ಲಿ ವರ್ಚುವಲ್ ಭಾಷಣದಲ್ಲಿ, ಪ್ರಧಾನಿ ಮೋದಿ ಅವರು ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಪ್ರದೇಶ ಮತ್ತು ಜಗತ್ತಿಗೆ ಉತ್ತಮ ಶಕ್ತಿ ಎಂದು ವಿವರಿಸಿದರು. ತಂತ್ರಜ್ಞಾನವು ಜಾಗತಿಕ ಸ್ಪರ್ಧೆಯ ಪ್ರಮುಖ ಸಾಧನವಾಗಿದೆ ಮತ್ತು ಭವಿಷ್ಯದ ಅಂತರಾಷ್ಟ್ರೀಯ ಕ್ರಮವನ್ನು ರೂಪಿಸಲು ಪ್ರಮುಖವಾಗಿದೆ. ತಂತ್ರಜ್ಞಾನ ಮತ್ತು ಅಂಕಿಅಂಶ ಹೊಸ ಅಸ್ತ್ರಗಳಾಗುತ್ತಿವೆ. ಪ್ರಜಾಪ್ರಭುತ್ವದ ದೊಡ್ಡ ಶಕ್ತಿ ಮುಕ್ತತೆ, ಅದೇ ಸಮಯದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಈ ಮುಕ್ತತೆಯನ್ನು ದುರುಪಯೋಗಪಡಿಸಿಕೊಳ್ಳಲು ನಾವು ಅನುಮತಿ ಕೊಡಬಾರದು ಎಂದರು.

ನಾವು ಹಿಂದಿನ ಸವಾಲುಗಳನ್ನು ಭವಿಷ್ಯಕ್ಕೆ ಮುನ್ನುಗ್ಗಲು ಅವಕಾಶವನ್ನಾಗಿ ಪರಿವರ್ತಿಸುತ್ತಿದ್ದೇವೆ,ಪ್ರಜಾಪ್ರಭುತ್ವ ಮತ್ತು ಡಿಜಿಟಲ್ ನಾಯಕ ರಾಷ್ಟ್ರವಾಗಿ ಭಾರತ ನಮ್ಮ ಹಂಚಿಕೆಯ ಸಮೃದ್ಧಿ ಮತ್ತು ಭದ್ರತೆಗಾಗಿ ಪಾಲುದಾರರೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ. ಭಾರತದ ಡಿಜಿಟಲ್ ಕ್ರಾಂತಿಯು ನಮ್ಮ ಪ್ರಜಾಪ್ರಭುತ್ವ, ನಮ್ಮ ಜನಸಂಖ್ಯಾಶಾಸ್ತ್ರ ಮತ್ತು ನಮ್ಮ ಆರ್ಥಿಕತೆಯ ಪ್ರಮಾಣದಲ್ಲಿ ಬೇರೂರಿದೆ. ಇದು ನಮ್ಮ ಯುವಕರ ಉದ್ಯಮ ಮತ್ತು ನಾವೀನ್ಯತೆಯಿಂದ ಚಾಲಿತವಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು.

5 ಪ್ರಮುಖ ಪರಿವರ್ತನೆಗಳು: 

ಭಾರತದಲ್ಲಿ 5 ಪ್ರಮುಖ ಪರಿವರ್ತನೆಗಳು ನಡೆಯುತ್ತಿವೆ. ನಾವು ಪ್ರಪಂಚದ ಅತ್ಯಂತ ವ್ಯಾಪಕವಾದ ಸಾರ್ವಜನಿಕ ಮಾಹಿತಿ ಮೂಲಸೌಕರ್ಯವನ್ನು ನಿರ್ಮಿಸುತ್ತಿದ್ದೇವೆ. ನಾವು 600,000 ಹಳ್ಳಿಗಳನ್ನು ಸಂಪರ್ಕಿಸುವ ಹಾದಿಯಲ್ಲಿದ್ದೇವೆ; ಕೋವಿನ್ ಮತ್ತು ಆರೋಗ್ಯ ಸೇತು ಬಳಸಿ ಭಾರತದಾದ್ಯಂತ 1.1 ಬಿಲಿಯನ್ ಡೋಸ್ ಲಸಿಕೆಗಳನ್ನು ತಲುಪಿಸಲು ತಂತ್ರಜ್ಞಾನವನ್ನು ಬಳಸಲಾಗಿದೆ ಎಂದು ಪ್ರಧಾನಿ ಹೇಳಿದರು.

ಎರಡನೇ ಪರಿವರ್ತನೆ- ಸಬಲೀಕರಣ, ಸಂಪರ್ಕ, ಪ್ರಯೋಜನಗಳ ವಿತರಣೆ ಮತ್ತು ಕಲ್ಯಾಣ ಸೇರಿದಂತೆ ಆಡಳಿತಕ್ಕಾಗಿ ಡಿಜಿಟಲ್ ತಂತ್ರಜ್ಞಾನವನ್ನು ಬಳಸುವ ಮೂಲಕ ನಾವು ಜನರ ಜೀವನವನ್ನು ಪರಿವರ್ತಿಸುತ್ತಿದ್ದೇವೆ.

ಮೂರನೇ ಪರಿವರ್ತನೆ: ಸಂಪನ್ಮೂಲಗಳ ಪರಿವರ್ತನೆ ಮತ್ತು ಜೀವವೈವಿಧ್ಯದ ರಕ್ಷಣೆಗಾಗಿ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದ ಉದ್ಯಮ ಮತ್ತು ಸೇವಾ ಕ್ಷೇತ್ರಗಳು ಬೃಹತ್ ಡಿಜಿಟಲ್ ರೂಪಾಂತರಕ್ಕೆ ಒಳಗಾಗುತ್ತಿವೆ.

ನಾಲ್ಕನೇ ಪರಿವರ್ತನೆ- ಸಂಪನ್ಮೂಲಗಳ ಪರಿವರ್ತನೆ ಮತ್ತು ಜೀವವೈವಿಧ್ಯದ ರಕ್ಷಣೆಗಾಗಿ ತಂತ್ರಜ್ಞಾನವನ್ನು ಬಳಸಿಕೊಂಡು ಭಾರತದ ಉದ್ಯಮ ಮತ್ತು ಸೇವಾ ಕ್ಷೇತ್ರಗಳು ಬೃಹತ್ ಡಿಜಿಟಲ್ ರೂಪಾಂತರಕ್ಕೆ ಒಳಗಾಗುತ್ತಿವೆ, ಭಾರತವು ವಿಶ್ವದ ಮೂರನೇ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಪರಿಸರ ವ್ಯವಸ್ಥೆಯನ್ನು ಹೊಂದಿದೆ. ಆರೋಗ್ಯದಿಂದ ರಾಷ್ಟ್ರೀಯ ಭದ್ರತೆಯವರೆಗೆ ಎಲ್ಲದಕ್ಕೂ ಪರಿಹಾರಗಳನ್ನು ಒದಗಿಸಲು ಪ್ರತಿ ಕೆಲವು ವಾರಗಳಿಗೊಮ್ಮೆ ಹೊಸ ಯುನಿಕಾರ್ನ್‌ಗಳು ಬರುತ್ತಿವೆ ಎಂದರು.

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, 5ನೇ ಪರಿವರ್ತನೆ: ಭವಿಷ್ಯಕ್ಕಾಗಿ ಭಾರತವನ್ನು ಸಿದ್ಧಪಡಿಸಲು ದೊಡ್ಡ ಪ್ರಯತ್ನವಿದೆ. ನಾವು 5G ಮತ್ತು 6G ಯಂತಹ ಟೆಲಿಕಾಂ ತಂತ್ರಜ್ಞಾನದಲ್ಲಿ ಸ್ಥಳೀಯ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಹೂಡಿಕೆ ಮಾಡುತ್ತಿದ್ದೇವೆ; ಕೃತಕ ಬುದ್ಧಿಮತ್ತೆಯಲ್ಲಿ ಭಾರತವು ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಪ್ರಧಾನಿ ವಿವರಿಸಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com