ಸಿಂಹವಿದ್ದ ಪ್ರದೇಶಕ್ಕೆ ನುಗ್ಗಿದ ವ್ಯಕ್ತಿ: ಮುಂದೇನಾಯ್ತು ಗೊತ್ತಾ? ವಿಡಿಯೋ ನೋಡಿ!

ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಆಫ್ರಿಕನ್ ಸಿಂಹವಿದ್ದ ಆವರಣದಲ್ಲಿ ಅಲೆದಾಡುತ್ತಿದ್ದ 31 ವರ್ಷದ ವ್ಯಕ್ತಿಯನ್ನು ಮಂಗಳವಾರ ಮಧ್ಯಾಹ್ನ ಸಿಬ್ಬಂದಿ ರಕ್ಷಿಸಿದ್ದಾರೆ.
ಪ್ರತ್ಯಕ್ಷ ದೃಶ್ಯ
ಪ್ರತ್ಯಕ್ಷ ದೃಶ್ಯ
Updated on

ಹೈದರಾಬಾದ್: ​​ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಆಫ್ರಿಕನ್ ಸಿಂಹವಿದ್ದ ಆವರಣದಲ್ಲಿ ಅಲೆದಾಡುತ್ತಿದ್ದ 31 ವರ್ಷದ ವ್ಯಕ್ತಿಯನ್ನು ಮಂಗಳವಾರ ಮಧ್ಯಾಹ್ನ ಸಿಬ್ಬಂದಿ ರಕ್ಷಿಸಿದ್ದಾರೆ.

ರಕ್ಷಣೆ ಮಾಡಿದ ನಂತರ ಮೃಗಾಲಯದ ಅಧಿಕಾರಿಗಳು ಆ ವ್ಯಕ್ತಿಯನ್ನು ಪೊಲೀಸರಿಗೆ ಒಪ್ಪಿಸಿ, ಆತನ ವಿರುದ್ಧ ದೂರು ದಾಖಲಿಸಿದ್ದಾರೆ. ವ್ಯಕ್ತಿಯನ್ನು ಜಿ ಸಾಯಿಕುಮಾರ್ ಎಂದು ಗುರುತಿಸಲಾಗಿದೆ.

ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ವ್ಯಕ್ತಿಯು ಬಂಡೆಯ ಮೇಲೆ ಕುಳಿತಾಗ, ಸಿಂಹ ಆತನನ್ನು ದಿಟ್ಟಿಸಿ ನೋಡಿದೆ. ಜನರು ಆ ವ್ಯಕ್ತಿಗೆ ಕೂಗುತ್ತಾ, ಜಾಗರೂಕರಾಗಿರಿ ಎಂದು ಹೇಳುವುದು ಮತ್ತು ಸಹಾಯಕ್ಕಾಗಿ ಕರೆ ಮಾಡುವುದನ್ನು ವಿಡಿಯೋದಲ್ಲಿ ಕೇಳಬಹುದಾಗಿದೆ.

ನೆಹರು ಝೂಲಾಜಿಕಲ್ ಪಾರ್ಕ್ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ, ಜಿ ಸಾಯಿಕುಮಾರ್ ಸಾರ್ವಜನಿಕರಿಗೆ ಪ್ರವೇಶವಿಲ್ಲದ ಸಿಂಹದ ಆವರಣದೊಳಗೆ ಹೋಗಿದ್ದಾರೆ ಮತ್ತು ಬಂಡೆಗಳ ಮೇಲೆ ನಡೆಯುತ್ತಿದ್ದರು.

ಹೈದರಾಬಾದ್‌ನ ನೆಹರು ಝೂಲಾಜಿಕಲ್ ಪಾರ್ಕ್‌ನಲ್ಲಿ ಸಂಪೂರ್ಣವಾಗಿ ನಿಷೇಧಿತ ಪ್ರದೇಶವಾಗಿರುವ ಪ್ರದರ್ಶಿತ ಆವರಣದಲ್ಲಿ ಸಿಂಹಗಳನ್ನು ಬಿಡಲಾಗುತ್ತದೆ. ವ್ಯಕ್ತಿಯನ್ನು ರಕ್ಷಿಸಿ ಮೃಗಾಲಯದ ಸಿಬ್ಬಂದಿ ಹಿಡಿದು ಬಹದ್ದೂರ್‌ಪುರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com