ಎನ್ಇಪಿ ಜಾರಿ: ಅಸ್ಸಾಂಗೆ ಕರ್ನಾಟಕದ ಪಾಠ! 

ರಾಷ್ಟ್ರೀಯ ಶಿಕ್ಷಣ ನೀತಿ-2020-21 ನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಇಲ್ಲಿನ ಅಧಿಕಾರಿಗಳ ತಂಡ ಎನ್ಇಪಿ ಜಾರಿಗೊಳಿಸಲು ಅಸ್ಸಾಂಗೆ ಸಹಕಾರ ನೀಡುತ್ತಿದೆ. 
ಅಸ್ಸಾಂ ಸಿಎಂ ಜೊತೆ ಸಚಿವ ಡಾ. ಅಶ್ವತ್ಥ ನಾರಾಯಣ
ಅಸ್ಸಾಂ ಸಿಎಂ ಜೊತೆ ಸಚಿವ ಡಾ. ಅಶ್ವತ್ಥ ನಾರಾಯಣ

ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ-2020-21 ನ್ನು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾರಿಗೊಳಿಸಿದ ಮೊದಲ ರಾಜ್ಯ ಕರ್ನಾಟಕವಾಗಿದ್ದು, ಇಲ್ಲಿನ ಅಧಿಕಾರಿಗಳ ತಂಡ ಎನ್ಇಪಿ ಜಾರಿಗೊಳಿಸಲು ಅಸ್ಸಾಂಗೆ ಸಹಕಾರ ನೀಡುತ್ತಿದೆ. 

ನ.29 ರಂದು ರಾಜ್ಯದ ಉನ್ನತ ಶಿಕ್ಷಣ ಹಾಗೂ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ವಿಭಾಗದ ಅಧಿಕಾರಿಗಳು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಅವರನ್ನು ಭೇಟಿ ಮಾಡುವುದಕ್ಕಾಗಿ ಗುವಾಹಟಿಗೆ ಭೇಟಿ ನೀಡಿದ್ದಾರೆ. 

ಸ್ಟಾರ್ಟ್‌ಅಪ್‌ಗಳಿಗಾಗಿ ರಾಜ್ಯ ವಿಷನ್ ಗ್ರೂಪ್ ನ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅಧ್ಯಕ್ಷ ಪ್ರದೀಪ್ ಪಿ. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಆಯುಕ್ತರು, ಮೀನಾ ನಾಗರಾಜ್ ಸಿಎನ್, ನಿರ್ದೇಶಕರು, ಎಲೆಕ್ಟ್ರಾನಿಕ್ಸ್ ವಿಭಾಗ, IT/BT ಅಸ್ಸಾಂ ಗೆ ತೆರಳಿರುವ ಅಧಿಕಾರಿಗಳಾಗಿದ್ದಾರೆ. 

ಉನ್ನತ ಶಿಕ್ಷಣ ಸಚಿವ, ಐಟಿ/ಬಿಟಿ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಅವರ ಕಚೇರಿ ನೀಡಿರುವ ಮಾಹಿತಿಯ ಪ್ರಕಾರ, ಸಚಿವರು ನ.29 ರಂದು ಸಂಜೆ ಗುವಾಹಟಿಯಲ್ಲಿ ಹಿಮಂತ ಬಿಸ್ವ ಶರ್ಮ ಅವರನ್ನು ಭೇಟಿ ಮಾಡಿದ್ದು ರಾಜ್ಯದಲ್ಲಿ ಎನ್ಇಪಿ ಜಾರಿಗೊಳಿಸುತ್ತಿರುವುದರ ಬಗ್ಗೆ ಮಾಹಿತಿ ನೀಡಿ ವೀಡಿಯೊ ಪ್ರಸ್ತುತಿಯನ್ನೂ ನೀಡಿದ್ದಾರೆ.
 
ಎನ್ಇಪಿ ಜಾರಿಯ ಪ್ರಥಮ ಹಂತದಲ್ಲಿ ಎದುರಾಗುವ ಗೊಂದಲಗಳು, ಸವಾಲುಗಳು ಹಾಗೂ ಅವುಗಳನ್ನು ನಿವಾರಿಸುವ ಬಗ್ಗೆ ಕರ್ನಾಟಕದ ಸಚಿವರನ್ನು ಹಿಮಂತ ಬಿಸ್ವ ಶರ್ಮ ಹಲವು ಪ್ರಶ್ನೆಗಳನ್ನು ಕೇಳಿದ್ದು ಗೊಂದಲಗಳನ್ನು ಪರಿಹರಿಸಿಕೊಂಡಿದ್ದಾರೆ.
 
ಸಭೆಯಲ್ಲಿ ಎನ್ಇಪಿಯ ವೈಶಿಷ್ಟ್ಯಗಳು, ಅಧಿಕೃತ ಆನ್ ಲೈನ್ ಕೋರ್ಸ್ ಗಳು ಹಾಗೂ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದೆ. 

ಸಾಮಾನ್ಯ ತರಗತಿ ಕೊಠಡಿಗಳನ್ನು ಸ್ಮಾರ್ಟ್ ತರಗತಿ ಕೊಠಡಿಗಳನ್ನಾಗಿ ಮೇಲ್ದರ್ಜೆಗೆ ಏರಿಸುವುದು, ವಿದ್ಯಾರ್ಥಿಗಳಿಗೆ ಡಿಜಿಟಲ್ ಟೀಚಿಂಗ್-ಲರ್ನಿಂಗ್ ಗೆ ಅನುಕೂಲವಾಗಲು ಟ್ಯಾಬ್ಲೆಟ್ ಗಳನ್ನು ಉಚಿತವಾಗಿ ವಿತರಿಸುವುದು ಸೇರಿದಂತೆ ಹಲವು ವಿಷಯಗಳನ್ನು ಕರ್ನಾಟಕ ಅಸ್ಸಾಂ ನ ಆಡಳಿತಕ್ಕೆ ವಿವರಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com