ಖ್ಯಾತ ಹಿರಿಯ ಪತ್ರಕರ್ತ ವಿನೋದ್ ದುವಾ ಆರೋಗ್ಯ ಸ್ಥಿತಿ ಗಂಭೀರ: ಐಸಿಯುಗೆ ದಾಖಲು
ನವದೆಹಲಿ: ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದ ಖ್ಯಾತ ಹಿರಿಯ ಪತ್ರಕರ್ತ ವಿನೋದ್ ದುವಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಅವರನ್ನು ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ.
67 ವರ್ಷದ ವಿನೋದ್ ದುವಾ ಅವರು ದೂರದರ್ಶನ ಹಾಗೂ ಎನ್ ಡಿ ಟಿವಿ ಯಲ್ಲಿ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ಹಿಂದಿ ಪತ್ರೀಕೋದ್ಯಮದಲ್ಲಿ ಅವರು ಹೆಚ್ಚಿನ ಸಾಧನೆ ಮಾಡಿದ್ದರು. ತಂದೆಯ ಆರೋಗ್ಯ ಪರಿಸ್ಥಿತಿ ಕುರಿತು ಸ್ಟ್ಯಾಂಡಪ್ ಕಮೀಡಿಯನ್ ಆಗಿ ಜನಪ್ರಿಯತೆ ಪಡೆದಿರುವ ಪುತ್ರಿ ಮಲ್ಲಿಕಾ ದುವಾ ಮಾಹಿತಿ ಹಂಚಿಕೊಂಡಿದ್ದಾರೆ.
ವಿನೋದ್ ಅವರು ಈ ವರ್ಷದಾರಂಭದಲ್ಲಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಆಸ್ಪತ್ರೆಯಲ್ಲಿ ರೇಡಿಯೊಲಾಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಅವರ ಪತ್ನಿ ಕೊರೊನಾಗೆ ಬಲಿಯಾಗಿದ್ದರು.
Related Article
"ಅವರು ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಯತ್ನಿಸುತ್ತಿದ್ದರು": ಪತ್ರಕರ್ತೆಯರ ವಿರುದ್ಧ ತ್ರಿಪುರಾ ಸಚಿವ
ರಾಜ್ಯ ಮಟ್ಟದ 36ನೇ ಪತ್ರಕರ್ತರ ಸಮ್ಮೇಳನ ಮುಂದೂಡಿಕೆ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ: 17 ಆರೋಪಿಗಳ ವಿರುದ್ಧ ಆರೋಪ ರೂಪಿಸಿದ ಕೋರ್ಟ್
ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಷ್ಯಾ, ಫಿಲಿಪೈನ್ಸ್ನ ಇಬ್ಬರು ಪತ್ರಕರ್ತರಿಗೆ ನೊಬೆಲ್ ಶಾಂತಿ ಪುರಸ್ಕಾರ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ