ದೇಶ
ವಿಧಾನಸಭೆ ಚುನಾವಣಾ ಪ್ರಚಾರ ಖರ್ಚು: ಟಿಎಂಸಿ 154 ಕೋಟಿ ರೂ., ಡಿಎಂಕೆ 114 ಕೋಟಿ, ಕಾಂಗ್ರೆಸ್ 84 ಕೋಟಿ, ಬಿಜೆಪಿ ಮಾಹಿತಿ ಸಿಕ್ಕಿಲ್ಲ
ಪಂಚರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಅತಿ ಕಡಿಮೆ ಖರ್ಚು ಮಾಡಿದ ಪಕ್ಷ ಎಂದರೆ ಸಿಪಿಐ.
ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಟಿಎಂಸಿ ಪಕ್ಷ ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕೆಂಡು 154.28 ಕೋಟಿ ರೂ.ಗಳನ್ನು ವ್ಯಯಿಸಿದೆ ಎಂದು ಕೇಂದ್ರ ಚುನಾವಣಾ ಆಯೋಗ ಬಹಿರಂಗಪಡಿಸಿದೆ.
ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷದಿಂದ ಅಧಿಕಾರ ಕಿತ್ತುಕೊಂಡು ಗದ್ದುಗೆಗೆ ಏರಿದ ಡಿಎಂಕೆ ವಿಧಾನಸಭಾ ಚುನಾವಣೆಯಲ್ಲಿ 114.14 ಕೋಟಿ ರೂ.ಗಳನ್ನು ವ್ಯಯಿಸಿದೆ. ಈ ಖರ್ಚು ತಮಿಳುನಾಡು ಮತ್ತು ಪುದುಚೆರಿ ಎರಡೂ ಪ್ರದೇಶಗಳನ್ನು ಒಳಗೊಂಡಿದೆ. ಎಐಎಡಿಎಂಕೆ ಪಕ್ಷ 57.33 ಕೋಟಿ ರೂ. ಖರ್ಚು ಮಾಡಿದೆ.
ಪಂಚರಾಜ್ಯ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ 84.93 ಕೋಟಿ ರೂ. ವ್ಯಯಿಸಿದೆ. ಬಿಜೆಪಿ ಪಕ್ಷ ಚುನಾವಣಾ ಪ್ರಚಾರಕ್ಕೆಂದು ಮಾಡಿದ ಖರ್ಚು ಎಷ್ಟು ಎಂಬುದು ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಪಂಚರಾಜ್ಯ ಚುನಾವಣಾ ಪ್ರಚಾರಕ್ಕೆ ಅತಿ ಕಡಿಮೆ ಖರ್ಚು ಮಾಡಿದ ಪಕ್ಷ ಎಂದರೆ ಸಿಪಿಐ. ಸಿಪಿಐ ಪಕ್ಷ ಒಟ್ಟು 13.19 ಕೋಟಿ ರೂ. ಖರ್ಚು ಮಾಡಿದೆ.