ಒಂದೇ ವೋಟ್ ನಲ್ಲಿ ಪಂಚಾಯಿತಿ ಎಲೆಕ್ಷನ್ ಸೋತರೂ ಚುನಾವಣಾ ಪ್ರಚಾರ ಭರವಸೆ ಈಡೇರಿಸಲು ಅಭ್ಯರ್ಥಿ ಮುಂದು

ಚುನಾವಣಾ ಪ್ರಚಾರ ವೇಳೆ ಅವರು ಕಳೆದ 10 ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಬಡ ಕುಟುಂಬವೊಂದನ್ನು ಭೇಟಿ ಮಾಡಿದ್ದರು. ಅವರಿಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರು. 
ಬಡ ಕುಟುಂಬದ ಜೊತೆ ಶ್ರೀರಾಮಮೂರ್ತಿ
ಬಡ ಕುಟುಂಬದ ಜೊತೆ ಶ್ರೀರಾಮಮೂರ್ತಿ
Updated on

ಶ್ರೀಕಾಕುಲಂ: ವೃತ್ತಿಯಲ್ಲಿ ವಕೀಲರಾದ ಶ್ರೀರಾಮಮೂರ್ತಿ, ತಮಿಳುನಾಡಿನ ಧವಳಪೇಟ ಪಂಚಾಯಿತಿ ಚುನಾವಣೆಯಲ್ಲಿ ಒಂದೇ ವೋಟಿನಿಂದ ಸೋತಿದ್ದರು. ಆದರೆ ಚುನಾವಣಾ ಪ್ರಚಾರ ವೇಳೆ ತಾವು ನೀಡಿದ್ದ ಭರವಸೆಗಳನ್ನು ಮರೆಯದೆ ಈಡೇರಿಸುವ ಮೂಲಕ ಜನರ ಮನಸ್ಸನ್ನು ಗೆದ್ದಿದ್ದಾರೆ. 

ಚುನಾವಣಾ ಪ್ರಚಾರ ವೇಳೆ ಅವರು ಕಳೆದ 10 ವರ್ಷಗಳಿಂದ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಬಡ ಕುಟುಂಬವೊಂದನ್ನು ಭೇಟಿ ಮಾಡಿದ್ದರು. ಅವರಿಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದ್ದರು. 

ಚುನಾವಣೆಯಲ್ಲಿ ಸೋತ ನಂತರ ತಮ್ಮ ಮಾತು ಮರೆಯದ ಶ್ರೀರಾಮಮೂರ್ತಿ ತಮ್ಮ ಸ್ವಂತ ದುಡಿಮೆಯಾದ 3 ಲಕ್ಷ ರೂ. ಖರ್ಚು ಮಾಡಿ ಮನೆ ನಿರ್ಮಿಸಿಕೊಟ್ಟಿದ್ದಾರೆ. 

ಇದುವರೆಗೂ ಗುಡಿಸಲಿನಲ್ಲಿ ವಾಸಿಸುತ್ತಿದ್ದ 7 ಮಂದಿ ಸದಸ್ಯರ ಬಡ ಕುಟುಂಬ ಇನ್ನುಮುಂದೆ ಹೊಸಮನೆಯಲ್ಲಿ ಜೀವನ ಸಾಗಿಸಲಿದೆ. ಈ ಬಗ್ಗೆ ಮಾತನಾಡಿರುವ ಶ್ರೀರಾಮಮೂರ್ತಿ ತಾವು ಜನರ ಸೇವೆಗಾಗಿ ರಾಜಕೀಯಕ್ಕೆ ಬಂದಿದ್ದು, ಚುನಾವಣೆಯಲ್ಲಿ ಸೋತರೂ ಜನಸೇವೆ ಮುಂದುವರಿಸುತ್ತೇನೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com