ಚೆನ್ನೈ: ಲಾಕ್ ಡೌನ್ ಸಮಯದಲ್ಲಿ ಶುರುವಾದ ಹವ್ಯಾಸವೊಂದು ಸೋದರರಿಬ್ಬರಿಗೆ ಖ್ಯಾತಿ ತಂದುಕೊಟ್ಟಿದೆ. ಅದೂ ಸದುದ್ದೇಶಕ್ಕೆ ಸಿಕ್ಕ ಮನ್ನಣೆ. ತಮಿಳುನಾಡಿನ ವೆಂಬಕೊಟ್ಟೈ ನಗರದ ನಿವಾಸಿಗಳಾದ ಅರುಣ್(25) ಮತ್ತು ಶ್ರೀಕಾಂತ್(22) ಇಬ್ಬರೂ ಲಾಕ್ ಡೌನ್ ಸಮಯದಲ್ಲಿ ಪುಸ್ತಕವನ್ನು ತಿರುವಿ ಹಾಕುತ್ತಿದ್ದರು.
ಆ ಸಂದರ್ಭದಲ್ಲಿ ಅಮ್ಮ ಇಟ್ಟಿದ್ದ ಎಲೆಯೊಂದು ಕೆಳಕ್ಕೆ ಬಿದ್ದಿತ್ತು. ಅದನ್ನು ಇಬ್ಬರೂ ಸೇರಿ ನೆಟ್ಟಿದ್ದರು. ಹೀಗೆ ಲಾಕ್ ಡೌನ್ ಸಮಯದಲ್ಲಿ ಪ್ರತಿದಿನ ಗಿಡ ನೆಡುವ ಹವ್ಯಾಸವನ್ನು ಇಬ್ಬರೂ ರೂಢಿಸಿಕೊಂಡಿದ್ದರು.
ಸಹೋದರರಿಬ್ಬರೂ ಸೈಕ್ಲಿಸ್ಟ್ ಗಳು. ಶ್ರೀಕಾಂತ್ ರಾಷ್ಟ್ರಮಟ್ಟದ ಸೈಕಲ್ ಪಟು. ಇಬ್ಬರೂ ಸೇರಿ 2 ದಿನಗಳ ಕಾಲ ಸೈಕಲ್ ತುಳಿಯುತ್ತಲೇ 5,000 ಸಸಿಗಳನ್ನು ನೆಟ್ಟಿದ್ದಾರೆ. ಅದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆಗೆ ಪಾತ್ರವಾಗಿದೆ.
ಕೊರೊನಾ ಬರುವುದಕ್ಕೂ ಮೊದಲು ಅವರು ಸೈಕ್ಲಿಂಗ್ ಫಾರ್ ರೀಸೈಕ್ಲಿಂಗ್ ಎನ್ನುವ ಸೈಕ್ಲಿಂಗ್ ಅಭಿಯಾನ ನಡೆಸಿದ್ದರು. ಅದರಂತೆ ಸೈಕಲ್ನಲ್ಲಿಯೇ ಇಬ್ಬರೂ ಸೋದರರು ಕನ್ಯಾಕುಮಾರಿ ತನಕ ಪರಿಸರ ಜಾಗೃತಿ ಜಾಥಾ ನಡೆಸಿದ್ದರು.
ಕೊಳಲು ವಾದಕ ಪ್ರವೀಣ್ ಗೋಡ್ಖಿಂಡಿ ವಿಭಿನ್ನ ಪ್ರಯೋಗ: ಲಾಕ್ ಡೌನ್ ಸಮಯದಲ್ಲಿ 'ದಿವ್ಯ ಬಾನ್ಸುರಿ' ತಯಾರಿ
ಮೈಸೂರು ದಸರಾ: ಜಂಬೂ ಸವಾರಿಯ ಪರಂಪರೆ; ಗಜಪಡೆಯ ವೈಭವ
ಕೆಮಿಸ್ಟ್ರಿ ಪ್ರಯೋಗಾಲಯದಲ್ಲಿ ಪರಿಸರಸ್ನೇಹಿ ಗಣಪ ಸೃಷ್ಟಿ: ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ
ಚಿತ್ರದುರ್ಗ: ತಮಟಕಲ್ಲಿನಲ್ಲಿ 6ನೇ ಶತಮಾನದ ವೀರಗಲ್ಲು, ಪುರಾತನ ತಮಿಳು ಶಾಸನ ಮರುಸ್ಥಾಪನೆ!
ಪದ್ಮನಾಭಸ್ವಾಮಿ ದೇಗುಲ ನಿಧಿ ಕಥಾನಕ ಆಧರಿಸಿ ಬೋರ್ಡ್ ಗೇಮ್ ಸೃಷ್ಟಿಸಿದ ಬೆಂಗಳೂರು ಬಾಲಕ
Advertisement