ಕೆಮಿಸ್ಟ್ರಿ ಪ್ರಯೋಗಾಲಯದಲ್ಲಿ ಪರಿಸರಸ್ನೇಹಿ ಗಣಪ ಸೃಷ್ಟಿ: ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

ಪಾರ್ವತಿ ತನ್ನ ಮೈಯ ಮೇಲಿನ ಅರಿಶಿನ ಲೇಪದಿಂದ ಗಣಪನನ್ನು ಸೃಷ್ಟಿಸಿದಳು ಎನ್ನುವುದು ಪುರಾಣದಲ್ಲಿದೆ. ಮಧ್ಯಪ್ರದೇಶದ ಶಾಲಾ ವಿದ್ಯಾರ್ಥಿಗಳು ನೀರು ಶುದ್ಧೀಕರಿಸುವ ಪೊಟ್ಯಾಷಿಯಂ ಏಲಂ ಬಳಸಿ ಗಣಪನನ್ನು ಸೃಷ್ಟಿಸಿದ್ದಾರೆ. 
ಪ್ರಾಧ್ಯಾಪಕರೊಡನೆ ಶಾಲಾ ವಿದ್ಯಾರ್ಥಿಗಳ ತಂಡ
ಪ್ರಾಧ್ಯಾಪಕರೊಡನೆ ಶಾಲಾ ವಿದ್ಯಾರ್ಥಿಗಳ ತಂಡ

ಭೂಪಾಲ್: ಮಧ್ಯಪ್ರದೇಶದ ಸತ್ನ ಎಂಬ ಪಟ್ಟಣದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಕೆಮಿಸ್ಟ್ರಿ ಲ್ಯಾಬಿನಲ್ಲಿ ಪರಿಸರಸ್ನೇಹಿ ಗಣಪನನ್ನು ಸೃಷ್ಟಿಸಿದ್ದಾರೆ.

ಪೊಟ್ಯಾಷಿಯಂ ಏಲಂ ಎನ್ನುವ ರಾಸಾಯನಿಕವನ್ನು ನೀರು ಶುದ್ಧೀಕರಿಸಲು ಬಳಕೆ ಮಾಡಲಾಗುತ್ತದೆ. ಅದೇ ರಾಸಾಯನಿಕವನ್ನು ಗಣಪನ ವಿಗ್ರಹ ತಯಾರಿಗೆ ಬಳಸಿರುವುದು ವಿದ್ಯಾರ್ಥಿಗಳ ಸಾಧನೆ. 

ಪಾರ್ವತಿ ತನ್ನ ಮೈಯ ಮೇಲಿನ ಕೊಳೆಯಿಂದ ಗಣಪನನ್ನು ಸೃಷ್ಟಿಸಿದಳು ಎನ್ನುವುದು ಪುರಾಣದಲ್ಲಿದೆ. ಮಧ್ಯಪ್ರದೇಶದ ಶಾಲಾ ವಿದ್ಯಾರ್ಥಿಗಳು ನೀರು ಶುದ್ಧೀಕರಿಸುವ ಪೊಟ್ಯಾಷಿಯಂ ಏಲಂ ಬಳಸಿ ಗಣಪನನ್ನು ಸೃಷ್ಟಿಸಿದ್ದಾರೆ. 

ಇದರಿಂದಾಗಿ ಗಣಪನ ವಿಗ್ರಹವನ್ನು ನೀರಿನಲ್ಲಿ ಮುಳುಗಿಸಿ ಸಂಭಮಿಸಿದಂತೆಯೂ ಆಗುತ್ತದೆ, ಜೊತೆಗೆ ವಿಗ್ರಹ ಕರಗಿದಾಗ ನೀರು ಶುದ್ಧವಾದಂತೆಯೂ ಆಗುತ್ತದೆ.

ಸಾಮಾನ್ಯವಾಗಿ ಪ್ಲಾಸ್ಟರ್ ಆಫ್ ಪ್ಯಾರಿಸ್ ರಾಸಾಯನಿಕ ಬಳಸಿ ಗಣಪನ ವಿಗ್ರಹ ತಯಾರಿಸಲಾಗುತ್ತದೆ. ಅದು ನೀರಿಗೆ ಸೇರಿದಾಗ ನೀರು ಕಲುಷಿತಗೊಳ್ಳುತ್ತದೆ. ಕಲುಷಿತ ನೀರು ಆರೋಗ್ಯಕ್ಕೆ ಹಾನಿಕರ. ಈ ಬಗ್ಗೆ ತರಗತಿಯಲ್ಲಿ ಪ್ರಾಧ್ಯಾಪಕರೊಡನೆ ಚರ್ಚೆ ನಡೆದಾಗ ಈ ಉಪಾಯ ಹೊಳೆದಿದ್ದೆಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com