ಕೈದಿಗಳೇ ಮಾಡಿದ ಗಣೇಶ ಮೂರ್ತಿಗಳು ಭರ್ಜರಿ ಮಾರಾಟ: ಐದೇ ನಿಮಿಷಗಳಲ್ಲಿ ಎಲ್ಲಾ ಸೇಲ್

ಮುಂಬರುವ ದಿನಗಳಲ್ಲಿ ಸಾವಯವ ಕೃಷಿ ಉತ್ಪನ್ನ, ಬೇಕರಿ, ಕ್ಯಾಂಟೀನ್ ಮತ್ತು ಗೋಶಾಲೆ ನಿರ್ಮಾಣ ಯೋಜನೆಯನ್ನು ಕಾರಾಗೃಹ ಅಧಿಕಾರಿಗಳು ಹೊಂದಿದ್ದಾರೆ. 
ವಿಗ್ರಹ ಹಸ್ತಾಂತರಿಸುತ್ತಿರುವ ಐಜಿಪಿ ರವಿದೀಪ್ ಸಿಂಗ್
ವಿಗ್ರಹ ಹಸ್ತಾಂತರಿಸುತ್ತಿರುವ ಐಜಿಪಿ ರವಿದೀಪ್ ಸಿಂಗ್

ಪುದುಚೆರಿ: ಗಣೇಶ ಚತುರ್ಥಿಯ ದಿನ ಸಕಲರಿಗೂ ಒಳ್ಳೆಯದನ್ನು ಮಾಡುವುದೆಂಬ ನಂಬಿಕೆ ಪುದುಚೆರಿ ಕೈದಿಗಳ ವಿಚಾರದಲ್ಲಿ ನಿಜವಾಗಿದೆ. ಅವರು ತಯಾರಿಸಿದ್ದ 51 ಮೂರ್ತಿಗಳು ಕೇವಲ ಐದೇ ನಿಮಿಷಗಳಲ್ಲಿ ಸೇಲಾಗಿರುವುದು ಅದಕ್ಕೆ ಸಾಕ್ಷಿ. ಕೈದಿಗಳ ಸುಧಾರಣಾ ಕಾರ್ಯಕ್ರಮದ ಅಂಗವಾಗಿ ಕಾರಾಗೃಹ ಅಧಿಕಾರಿಗಳು ಕೈದಿಗಳ ಕೈಲಿ ವಿಗ್ರಹಗಳನ್ನು ಮಾಡಿಸಿದ್ದರು.

ಪುದುಚೆರಿ ಜೈಲಿನಲ್ಲಿ ವಿಗ್ರಹ ರಚನೆ ಸೇರಿದಂತೆ ಬಟ್ಟೆ ಹೊಲಿಯುವುದು, ಯೋಗ ಮತ್ತಿತರ ಚಟುವಟಿಕೆಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ. ಅರಬಿಂದೊ ಸೊಸೈಟಿ ಸಹಯೋಗದಲ್ಲಿ ಜೈಲು ಸುಧಾರಣಾ ಕಾರ್ಯಕ್ರಮ ನಡೆಸಲಾಗುತ್ತಿದೆ.

ಗಣೇಶ ವಿಗ್ರಹ ಮಾರಾಟದಿಂದ ಸಂತುಷ್ಟರಾಗಿರುವ ಅಧಿಕಾರಿ ವರ್ಗ ವಿಗ್ರಹಗಳಿಗೆ ಇನ್ನೂ ಬೇಡಿಕೆ ಬರುತ್ತಲೇ ಇದೆ ಎಂದು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಸಾವಯವ ಕೃಷಿ ಉತ್ಪನ್ನ, ಬೇಕರಿ, ಕ್ಯಾಂಟೀನ್ ಮತ್ತು ಗೋಶಾಲೆ ನಿರ್ಮಾಣ ಯೋಜನೆಯನ್ನು ಕಾರಾಗೃಹ ಅಧಿಕಾರಿಗಳು ಹೊಂದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com