ಬೆಂಗಳೂರು: ಒಂದೇ ದಿನ 93,000 ಗಣೇಶ ವಿಸರ್ಜನೆ

ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಗಣೇಶ ಚತುರ್ಥಿ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಸುಮಾರು 93,524 ಗಣೇಶ ಮೂರ್ತಿಗಳನ್ನು ಕಲ್ಯಾಣಿಗಳು ಮತ್ತು ಮೊಬೈಲ್ ಟ್ಯಾಂಕ್ ಗಳಲ್ಲಿ ವಿಸರ್ಜನೆ ಮಾಡಲಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಗಣೇಶ ಚತುರ್ಥಿ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಸುಮಾರು 93,524 ಗಣೇಶ ಮೂರ್ತಿಗಳನ್ನು ಕಲ್ಯಾಣಿಗಳು ಮತ್ತು ಮೊಬೈಲ್ ಟ್ಯಾಂಕ್ ಗಳಲ್ಲಿ ವಿಸರ್ಜನೆ ಮಾಡಲಾಗಿದೆ. 

ವಾರ್ಡ್ ನಲ್ಲಿ ಒಂದಕ್ಕಿಂತ ಹೆಚ್ಚು ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಮೆರವಣಿಗೆ ಕೈಗೊಳ್ಳುವ ಮೂಲಕ ಸರ್ಕಾರದ ಆದೇಶ ಉಲ್ಲಂಘಿಸಿದ ಪ್ರಕರಣಗಳು ನಡೆದಿವೆ. 

ಗಣೇಶ ಹಬ್ಬದ ಮೊದಲ ದಿನ ಎಂಟು ವಲಯಗಳಲ್ಲಿ ಒಟ್ಟು 382 ಮೊಬೈಲ್ ಟ್ಯಾಂಕ್ ಗಳು 10 ಕಲ್ಯಾಣಿಗಳನ್ನು ಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಉದ್ದೇಶದಿಂದ ಬಿಬಿಎಂಪಿ ನಿರ್ಮಿಸಿತ್ತು. ಶುಕ್ರವಾರ ಬೆಳಗ್ಗೆ 7ರಿಂದ ತಡರಾತ್ರಿವರೆಗೂ ಭಕ್ತಾದಿಗಳು ಗಣೇಶ ಮೂರ್ತಿ ವಿಸರ್ಜಿಸುತ್ತಿದ್ದ ದೃಶ್ಯ ಕಂಡುಬಂತು. 93,584 ಮೂರ್ತಿಗಳನ್ನು ವಿಸರ್ಜಿಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ಪೂರ್ವ ವಲಯದಲ್ಲಿ 76 ಮೊಬೈಲ್ ಟ್ಯಾಂಕ್ ವ್ಯವಸ್ಥೆ ಮಾಡಿದ್ದು, 1813 ಮತ್ತು ಹಲಸೂರು ಕೆರೆಯ ಕಲ್ಯಾಣಿಯಲ್ಲಿ 19,123 ಸೇರಿದಂತೆ 20,936 ಗಣೇಶ ಮೂರ್ತಿಗಳ್ನು ವಿಸರ್ಜಿಸಲಾಯಿತು. 

ಪಶ್ಚಿಮ ವಲಯದಲ್ಲಿ 40 ಮೊಬೈಲ್ ಟ್ಯಾಂಕ್ ನಲ್ಲಿ 11,860 ಹಾಗೂ ಸ್ಯಾಂಕಿ ಕೆರೆ ಕಲ್ಯಾಣಿಯಲ್ಲಿ 15,650 ಗಣೇಶ ಮೂರ್ತಿ ಸೇರಿದಂತೆ ಒಟ್ಟು 27,510 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. 

ದಕ್ಷಿಣ ವಲಯದಲ್ಲಿ 46 ಮೊಬೈಲ್ ಟ್ಯಾಂಕ್ ಮತ್ತು ಯಡಿಯೂರು ಕೆರೆ ಕಲ್ಯಾಣಿ, ವಿವೇಕಾನಂದ ಕಲ್ಯಾಣಿಯಲ್ಲಿ ಒಟ್ಟು 33,006 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. ದಾಸರಹಳ್ಳಿಯಲ್ಲಿ 16 ಮೊಬೈಲ್ ಟ್ಯಾಂಕ್ ನಲ್ಲಿ 468 ಮತ್ತು ಚೊಕ್ಕಸಂದ್ರದ ಕೆರೆ ಕಲ್ಯಾಣಿಯಲ್ಲಿ 243 ಸೇರಿ 711 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು. 

ಇನ್ನು ಮಹದೇವಪುರದಲ್ಲಿ 2650, ಬೊಮ್ಮನಹಳ್ಳಿಯಲ್ಲಿ 2296, ಯಲಹಂಕದಲ್ಲಿ 2276 ಮತ್ತು ರಾಜರಾಜೇಶ್ವರಿ ನಗರದಲ್ಲಿ 4139 ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com