The New Indian Express
ಚೆನ್ನೈ: ತಮಿಳುನಾಡಿನ ಒತಾಕಡೈ ಎಂಬಲ್ಲಿನ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿನಿಯರನ್ನು ಶಾಲೆಗೆ ಆಕರ್ಷಿಸಲು ಸಾಂಪ್ರದಾಯಿಕ ಆಟಗಳ ಮೊರೆ ಹೋಗಿದ್ದಾರೆ ಎಲ್ಲಿನ ಶಿಕ್ಷಕರು. ಈ ಪ್ರಯೋಗಕ್ಕೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನೂ ಓದಿ: ಪರಿಸರ ನಾಶ ವಿರುದ್ಧ ಸೈಕ್ಲಿಸ್ಟ್ ಸಹೋದರರ ಸವಾಲ್: 48 ಗಂಟೆಗಳಲ್ಲಿ 5,000 ಸಸಿ ನೆಟ್ಟು ದಾಖಲೆ
ಈ ಪ್ರಯೋಗಕ್ಕೆ ಸರ್ಕಾರಿ ಅನುದಾನವಿಲ್ಲ, ಮುಖ್ಯೋಪಾಧ್ಯಯರು ತಮ್ಮ ಹಣದಿಂದಲೇ ಈ ಯೋಜನೆ ಸಾಕಾರಗೊಳಿಸಿದ್ದಾರೆ ಎನ್ನುವುದು ವಿಶೇಷ. ಮಕ್ಕಳಿಗೆ ಆಮಿಷ ಒಡ್ಡಲು ಸಾಂಪ್ರದಾಯಿಕ ಆಟಗಳನ್ನೇ ಏಕೆ ಬಳಸಿಕೊಂಡಿರಿ ಎಂಬ ಪ್ರಶ್ನೆಗೆ ಮುಖ್ಯೋಪಾಧ್ಯಾಯಿನಿ ಸಸಿತ್ರಾ, ಮೊಬೈಲ್ ಗೇಮುಗಳಿಂದ ಮಕ್ಕಳ ಮನಸ್ಸನ್ನು ಹೊರಗೆ ತರುವ ಉದ್ದೇಶ ಇದರ ಹಿಂದಿತ್ತು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಲಾಠಿ ಹಿಡಿವ ಕೈಗಳಲ್ಲಿ ಸ್ಲೇಟು ಬಳಪ: ಸ್ಮಾರ್ಟ್ ಫೋನ್ ಇಲ್ಲದೆ ಶಿಕ್ಷಣ ವಂಚಿತರಾದ ಬಡ ಮಕ್ಕಳಿಗೆ ಪೊಲೀಸರಿಂದ ಪಾಠ
ಶಾಲೆಯ ನೂತನ ಪ್ರಯೋಗದ ಬಗ್ಗೆ ವಿದ್ಯಾರ್ಥಿನಿಯರು ಸಂತಸ ವ್ಯಕ್ತಪಡಿಸಿದ್ದಾರೆ. ತೆನ್ ಮೋಳಿ ಎಂಬ ವಿದ್ಯಾರ್ಥಿನಿ 'ನಾನು ಚೆಸ್ ಪ್ಲೇಯರ್. ಈಗ ಬಯಲಲ್ಲಿ, ಮರದ ಕೆಳಗೆ ಕುಳಿತುಕೊಂಡು ಚೆಸ್ ಆಡುವ ಅನುಭವವನ್ನು ಹಿಂದೆಂದೂ ಕಂಡಿಲ್ಲ' ಎಂದು ಸಂಸಸ ವ್ಯಕ್ತಪಡಿಸುತ್ತಾಳೆ.
ಇದಲ್ಲದೆ ಸಾಂಪ್ರದಾಯಿಕ ಆಟಗಳನ್ನು ಆಡುವುದರಿಂದ ಗಣಿತ ಲೆಕ್ಕ ಬಿಡಿಸುವುದು ಕೂಡಾ ಸುಲಭವಾಗುತ್ತದೆ ಎಂದು ಹಲವು ವಿದ್ಯಾರ್ಥಿಗಳು ತಿಳಿಸಿದ್ದಾರೆ.