ರಷ್ಯಾದಲ್ಲಿ ಮೌಂಟ್ ಎಲ್ಬ್ರಸ್ ಶಿಖರವೇರಿದ ಬೆಂಗಳೂರಿನ ಕೋವಿಡ್ ಯೋಧ!

ಕೋವಿಡ್-19 ಯೋಧರು ಕೇವಲ ಆರೋಗ್ಯ ಕಾಳಜಿ ವೃತ್ತಿಪರರಷ್ಟೇ ಅಲ್ಲ. ಹಲವು ಮಂದಿ ತಮ್ಮ ಉದ್ಯೋಗವನ್ನು ಬಿಟ್ಟು ಕೋವಿಡ್-19 ಯೋಧರಾಗಿರುವ ಉದಾಹರಣೆಗಳಿವೆ.
ಮೌಂಟ್ ಎಲ್ಬ್ರಸ್ ನಲ್ಲಿ ತ್ರಿವರ್ಣ ಧ್ವಜ ಹಿಡಿದು ನಿಂತಿರುವ ನವೀನ್
ಮೌಂಟ್ ಎಲ್ಬ್ರಸ್ ನಲ್ಲಿ ತ್ರಿವರ್ಣ ಧ್ವಜ ಹಿಡಿದು ನಿಂತಿರುವ ನವೀನ್

ಬೆಂಗಳೂರು: ಕೋವಿಡ್-19 ಯೋಧರು ಕೇವಲ ಆರೋಗ್ಯ ಕಾಳಜಿ ವೃತ್ತಿಪರರಷ್ಟೇ ಅಲ್ಲ. ಹಲವು ಮಂದಿ ತಮ್ಮ ಉದ್ಯೋಗವನ್ನು ಬಿಟ್ಟು ಕೋವಿಡ್-19 ಯೋಧರಾಗಿರುವ ಉದಾಹರಣೆಗಳಿವೆ ಹಾಗೂ ಇತ್ತೀಚಿನ ದಿನಗಳಲ್ಲಿ ಪ್ರಯಾಣ ನಿರ್ಬಂಧಗಳು ಸಡಿಲಗೊಳ್ಳುತ್ತಿದ್ದಂತೆಯೇ ಅವರು ತಮ್ಮ ಆಸಕ್ತಿಯ ವಿಷಯಗಳತ್ತ ಪುನಃ ಗಮನಹರಿಸಲು ಪ್ರಾರಂಭಿಸಿದ್ದಾರೆ.  34 ವರ್ಷದ ನವೀನ್ ಮಲ್ಲೇಶ್, ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಟ್ರೆಕ್ ನಾಮಡ್ಸ್ ನ ಸ್ಥಾಪಕ ಇಂತಹ ವ್ಯಕ್ತಿಗಳ ಪೈಕಿ ಒಬ್ಬರು.

ಮಾರ್ಚ್ 2020 ರಲ್ಲಿ ಮಲ್ಲೇಶ್ ಅವರನ್ನು ಕರ್ನಾಟಕ ಸ್ಟಾರ್ಟ್ ಅಪ್ ಸೆಲ್ ನಿಂದ ಕೋವಿಡ್-19 ಯೋಧರನ್ನಾಗಿ ಆಯ್ಕೆ ಮಾಡಿ ದಕ್ಷಿಣ ಜೋನ್ ನ ವಾರ್ ರೂಮ್ ನ ಸ್ವಯಂಸೇವಕರ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿತ್ತು.

ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಬೆಂಗಳೂರು, ಕರ್ನಾಟಕದಿಂದ ಈ ಶಿಖರವನ್ನೇರಿರುವ ಏಕೈಕ ವ್ಯಕ್ತಿಯಾಗಿದ್ದಾರೆ. ನವೀನ್ ಮಲ್ಲೇಶ್ ಶುಕ್ರವಾರದಂದು ಮೌಂಟ್ ಎಲ್ಬ್ರಸ್ (5,642ಮೀಟರ್)- ರಷ್ಯಾ-ಯುರೋಪ್ ಗಳಲ್ಲಿ ಅತಿ ಎತ್ತರದ ಹಾಗೂ ಪ್ರಮುಖ ಶಿಖರವನ್ನು ಏರಿದ್ದಾರೆ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, "ಸಪ್ತ ಖಂಡಗಳಲ್ಲಿ ಎಲ್ಲಾ ಶಿಖರಗಳನ್ನೇರುವುದು ನನ್ನ ಕನಸು ಅಕ್ಟೋಬರ್ 2019 ರಲ್ಲಿ ಕಿಲಿಮಾಂಜಾರೊ ಪರ್ವತವನ್ನೇರಿದ್ದೆ. 2020 ರಲ್ಲೇ ಎಲ್ಬ್ರಸ್ ಶಿಖರವೇರುವ ಗುರಿ ಹೊಂದಿದ್ದೆ. ಆದೆ ಕೋವಿಡ್ ನಿಂದ ಅದು ಸಾಧ್ಯವಾಗಿರಲಿಲ್ಲ. ಈಗ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು ಮತ್ತೊಮ್ಮೆ ನನ್ನ ಆಸಕ್ತಿಯ ವಿಷಯವನ್ನು ಮುಂದುವರೆಸಲು ನಿರ್ಧರಿಸಿದ್ದೇನೆ" ಎಂದು ಹೇಳಿದ್ದಾರೆ.

ತಮ್ಮ ಪ್ರಯಾಣದ ಅನುಭವಗಳನ್ನು ಹಂಚಿಕೊಂಡಿರುವ ನವೀನ್ ಮಲ್ಲೇಶ್, ರಷ್ಯಾಗೆ ಪರ್ವತಾರೋಹಣಕ್ಕೂ ಮುನ್ನ ಕಾಶ್ಮೀರದಲ್ಲಿ 2 ತಿಂಗಳ ಕಠಿಣ ಅಭ್ಯಾಸ, ತರಬೇತಿ ಪಡೆದುಕೊಂಡಿದ್ದೆ. ಮೂವರು ರಷ್ಯನ್ನರ ಜೊತೆ ಕರ್ನಾಟಕದಿಂದ ತೆರಳಿದ್ದು ನಾನೊಬ್ಬನೇ. ಇದು ಮೌಂಟ್ ಎಲ್ಬ್ರಸ್ ಆರೋಹಣಕ್ಕೆ ಕೊನೆಯ ಋತುವಾಗಿದ್ದರಿಂದ ಬೇಗ ತೆರಳಬೇಕಾಯಿತು. ರಷ್ಯಾದ ಶಿಷ್ಟಾಚಾರಗಳು ನನಗೆ ಅಘಾತಕಾರಿಯಾಗಿದ್ದವು, ಕ್ಲಿಯರೆನ್ಸ್ ದೊರೆಯುವುದಕ್ಕೂ ಮೂರು ಗಂಟೆಗಳ ಮುನ್ನ ನನ್ನನ್ನು ಸುತ್ತುವರಿಯಲಾಗಿತ್ತು. ಆ ನಂತರ ಮಿನರಲ್ನಿ ವೊಡಿ ಗೆ ತೆರಳಿ ಟ್ರೆಕ್ ಗೈಡ್ ನ್ನು ಭೇಟಿ ಮಾಡಿ ಅಲ್ಲಿಂದ ಮೌಂಟ್ ಎಲ್ಬ್ರಸ್ ಬೇಸ್ ಕ್ಯಾಂಪ್ ಗೆ ತೆರಳಿದೆವು ಎಂದು ವಿವರಿಸಿದ್ದಾರೆ.

ಶುಕ್ರವಾರ ಮಧ್ಯರಾತಿ 1 ಗಂಟೆಗೆ ಪ್ರಾರಂಭ ಮಾಡುವುದಕ್ಕೂ ಮುನ್ನ ಹವಾಮಾನಕ್ಕೆ ಹೊಂದಿಕೊಳ್ಳಲು 2 ಟ್ರೆಕ್ ಗಳನ್ನು ನಡೆಸಲಾಯಿತು, ತುದಿ ತಲುಪುವುದಕ್ಕೆ 9 ಗಂಟೆಗಳ ಸಮಯ ಬೇಕಾಯಿತು ಎನ್ನುತ್ತಾರೆ ನವೀನ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com