ತಿರುಪತಿ: ತಿರುಪತಿ ನಿವಾಸಿ ಆಟೋ ರಿಕ್ಷಾ ಚಾಲಕ ಕೊಂಪಲ ಬಾಬು ಅವರು ಓರ್ವ ಪರಿಸರ ಪ್ರೇಮಿ. 58 ವರ್ಷದ ಅವರು ಕಳೆದ ಹಲವು ವರ್ಷಗಳಿಂದ ರಿಕ್ಷಾ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ತಮ್ಮ ಪರಿಸರ ಪ್ರೇಮವನ್ನು ಸಾರಲು ಅವರು ಬಳಸಿಕೊಂಡಿದ್ದು ತಮ್ಮ ರಿಕ್ಷಾವನ್ನೇ.
ಅನೇಕರು ಮನೆ ಮುಂದೆ ಉದ್ಯಾನವನ ನಿರ್ಮಿಸಿಕೊಳ್ಳುತ್ತಾರೆ. ಟೆರೇಸ್ ಮೇಲುಗಡೆಯೂ ಕೆಲವರು ಪುಟ್ಟ ಉದ್ಯಾನವನ ನಿರ್ಮಿಸುತ್ತಾರೆ. ಆದರೆ ತಿರುಪತಿಯ ಕಂಪಲ ಬಾಬು ಅವರು ತಮ್ಮ ಆಟೋ ರಿಕ್ಷಾ ಒಳಗೇ ಉದ್ಯಾನ ನಿರ್ಮಿಸಿಕೊಂಡಿದ್ದಾರೆ.
ಇದರಿಂದಾಗಿ ಪ್ರಯಾಣಿಕರು ರಿಕ್ಷಾಗೆ ಆಕರ್ಷಿತರಾಗುತ್ತಿದ್ದಾರೆ. ಹಲವು ಮಂದಿ ಪ್ರಯಾಣಿಕರು ಈ ರಿಕ್ಷಾದಲ್ಲಿ ಕುಳಿತರೆ ಉದ್ಯಾನವನದಲ್ಲಿ ಕುಳಿತ ಅನುಭವವಾಗುತ್ತದೆ ಎಂದು ಹೇಳಿರುವುದಾಗಿ ಬಾಬು ಅವರು ಹೇಳುತ್ತಾರೆ.
ಸುಮಾರು 300 ಮಂದಿ ಕಾಯಂ ಪ್ರಯಾಣಿಕರು ಬಾಬು ಅವರ ಫೋನ್ ನಂಬರ್ ಪಡೆದುಕೊಂಡಿದ್ದಾರೆ. ಏನೇ ಅಗತ್ಯವಿದ್ದರೂ ಬಾಬು ಅವರ ರಿಕ್ಷಾವನ್ನು ಬಳಸಿಕೊಳ್ಳುತ್ತಿದ್ದಾರೆ. ಬಾಬು ತಮ್ಮ ಮನೆಯಲ್ಲಿ ನರ್ಸರಿ ಹೊಂದಿದ್ದಾರೆ. ಆಸಕ್ತಿ ಇದ್ದವರಿಗೆ ಉಚಿತವಾಗಿ ಗಿಡಗಳನ್ನು ನೀಡುತ್ತಾರೆ.
ಪರಿಸರ ನಾಶ ವಿರುದ್ಧ ಸೈಕ್ಲಿಸ್ಟ್ ಸಹೋದರರ ಸವಾಲ್: 48 ಗಂಟೆಗಳಲ್ಲಿ 5,000 ಸಸಿ ನೆಟ್ಟು ದಾಖಲೆ
ಕೆಮಿಸ್ಟ್ರಿ ಪ್ರಯೋಗಾಲಯದಲ್ಲಿ ಪರಿಸರಸ್ನೇಹಿ ಗಣಪ ಸೃಷ್ಟಿ: ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ
ಲಾಠಿ ಹಿಡಿವ ಕೈಗಳಲ್ಲಿ ಸ್ಲೇಟು ಬಳಪ: ಸ್ಮಾರ್ಟ್ ಫೋನ್ ಇಲ್ಲದೆ ಶಿಕ್ಷಣ ವಂಚಿತರಾದ ಬಡ ಮಕ್ಕಳಿಗೆ ಪೊಲೀಸರಿಂದ ಪಾಠ
ಬರಡು ಭೂಮಿಯಲ್ಲಿ ಸೋಲಾರ್ ಬೆಳೆ ತೆಗೆದ ರಾಜಸ್ಥಾನ ರೈತ: ತಿಂಗಳಿಗೆ 4 ಲಕ್ಷ ರೂ. ಆದಾಯ
ಜಗದ್ವಿಖ್ಯಾತ ಲೇಖಕ ಪೌಲೊ ಕೊಯೆಲೊ ಗಮನ ಸೆಳೆದ ಪುಸ್ತಕಪ್ರೇಮಿ ಮಲಯಾಳಿ ರಿಕ್ಷಾ ಡ್ರೈವರ್
Advertisement