ಭಾರತದಲ್ಲಿನ ಅವಕಾಶಗಳನ್ನು ಬಳಸಿಕೊಳ್ಳಲು ಇಸ್ರೇಲಿ ಉದ್ಯಮಪತಿಗಳಿಗೆ ವಿದೇಶಾಂಗ ಸಚಿವ ಜೈಶಂಕರ್ ಕರೆ
ಜೆರುಸಲೆಂ: ವ್ಯಾಪಾರ ಮಾತುಕತೆ ಸಂಬಂಧ ಇಸ್ರೇಲ್ ಗೆ ಭೇಟಿ ನೀಡಿರುವ ಭಾರತೀಯ ವಿದೇಶಾಂಗ ಸಚಿವ ಜೈಶಂಕರ್ ಭಾರತದ ಅತ್ಯಂತ ವಿಶ್ವಾಸಪಾತ್ರ ದೇಶ ಇಸ್ರೇಲ್ ಎಂದು ಬಣ್ಣಿಸಿದ್ದಾರೆ. ಭಾರತದಲ್ಲಿ ಉದ್ಯಮ ಸ್ನೇಹ ವಾತಾವರಣವಿದ್ದು ಅದನ್ನು ಇಸ್ರೇಲಿ ಉದ್ಯಮಪತಿಗಳು ಬಳಸಿಕೊಳ್ಳಬೇಕಾಗಿ ಅವರು ಕರೆ ನೀಡಿದ್ದಾರೆ.
ಇದೇ ವೇಳೆ ಅವರು ನೀಡಿದ ಭಾಷಣದಲ್ಲಿ ಜೈಶಂಕರ್ ಅವರು ಭಾರತದ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ದಿನದಿಂದಲೂ ದೇಶದಲ್ಲಿ ತುಂಬಾ ಬದಲಾವಣೆಗಳಾಗಿವೆ, ಜನರು ಆ ಕುರಿತಾಗಿ ಸ್ವಲ್ಪ ಸ್ವಲ್ಪವೇ ತಿಳಿದುಕೊಂಡಿದ್ದಾರೆ ಎಂದರು.
ಇವೆಲ್ಲಾ ವಿಚಾರಗಳಿಂದ ದೇಶ ಪ್ರಗತಿಯತ್ತ ಮುಂದಡಿ ಇಟ್ಟಿದೆಯೆಂಬುದು ಯಾರಿಗೇ ಆದರೂ ಅರ್ಥವಾಗುತ್ತದೆ ಎಂದು ಜೈಶಂಕರ್ ಹೇಳಿದ್ದಾರೆ. ಅವರು ಪ್ರಮುಖವಾಗಿ ಇಸ್ರೇಲಿನ ಭದ್ರತಾ ಕ್ಷೇತ್ರದ ಸಂಸ್ಥೆಗಳನ್ನು ಭಾರತದಲ್ಲಿ ಹೂಡಿಕೆ ನಡೆಸಲು ಆಹ್ವಾನಿಸಿದ್ದಾರೆ.
ಮಾತುಕತೆ ವೇಳೆ ಭಾರತ ಸರ್ಕಾರದ ನೂತನ ಕೃಷಿ ಸುಧಾರಣಾ ಕಾನೂನಿನಿಂದ ಭವಿಷ್ಯದಲ್ಲಿ ಕೃಷಿ ಮತ್ತು ಆಹಾರ ಉತ್ಪಾದನೆ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಲಿದೆ ಎಂದು ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ.
Related Article
ದೇಶೀಯ ಕೃಷಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಅಳವಡಿಕೆ: ಭಾರತದ ರೈತರ ಆದಾಯ ದ್ವಿಗುಣವಾಗಲು ನೆರವು
ಇಸ್ರೇಲ್ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನ್ನೆಟ್ಟ್ ಆಯ್ಕೆ; ಪ್ರಧಾನಿ ಮೋದಿ ಶುಭ ಹಾರೈಕೆ
ಮಂಗಳೂರು: ಇಸ್ರೇಲ್ ಬೆಂಬಲಿಸಿದ ವ್ಯಕ್ತಿಯ ಮೇಲೆ ಹಲ್ಲೆ, ಐವರ ಬಂಧನ
ಗೊಂದಲ ಬಳಿಕ ಕೊನೆಗೂ ಕೆಜಿಎಫ್'ಗೆ ಬಂದಿಳಿದ ಇಸ್ರೇಲ್'ನ ಆಕ್ಸಿಜನ್ ಘಟಕ
ಇಸ್ರೇಲ್: ಧಾರ್ಮಿಕ ಸಭೆಯಲ್ಲಿ ಕಾಲ್ತುಳಿತ, 40 ಮಂದಿ ದಾರುಣ ಸಾವು
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ