ಕೇರಳ ಮಳೆಗೆ ತತ್ತರ: ಅಣೆಕಟ್ಟಿನಿಂದ ನೀರು ಬಿಡಲು ಮುಂದು, ಜನರಲ್ಲಿ ಪ್ರವಾಹ ಆತಂಕ; ಇಡುಕ್ಕಿ, ಇಡಮಲಯರ್ ನಲ್ಲಿ ಅಲರ್ಟ್

2018 ರಲ್ಲಿ ತೀವ್ರ ಪ್ರವಾಹ-ಸಾವು-ನೋವು ಕಂಡಿದ್ದ ದೇವರನಾಡು ಕೇರಳ ಕಳೆದೊಂದು ವಾರದಿಂದ ಧಾರಾಕಾರ ಮಳೆಗೆ ತತ್ತರಿಸಿ ಹೋಗಿದೆ.ಪ್ರವಾಹ-ಭೂಕುಸಿತಕ್ಕೆ ಇದುವರೆಗೆ 25 ಮಂದಿ ಮೃತಪಟ್ಟಿದ್ದಾರೆ.
ಕೇರಳದಲ್ಲಿ ಮಳೆಗೆ ರಸ್ತೆಯಲ್ಲಿ ಉಂಟಾದ ಪ್ರವಾಹ ರೀತಿ ದೃಶ್ಯ, ವಾಹನ ಸವಾರರ ಹರಸಾಹಸ
ಕೇರಳದಲ್ಲಿ ಮಳೆಗೆ ರಸ್ತೆಯಲ್ಲಿ ಉಂಟಾದ ಪ್ರವಾಹ ರೀತಿ ದೃಶ್ಯ, ವಾಹನ ಸವಾರರ ಹರಸಾಹಸ
Updated on

ಕೊಚ್ಚಿ: 2018 ರಲ್ಲಿ ತೀವ್ರ ಪ್ರವಾಹ-ಸಾವು-ನೋವು ಕಂಡಿದ್ದ ದೇವರನಾಡು ಕೇರಳ ಕಳೆದೊಂದು ವಾರದಿಂದ ಧಾರಾಕಾರ ಮಳೆಗೆ ತತ್ತರಿಸಿ ಹೋಗಿದೆ.ಪ್ರವಾಹ-ಭೂಕುಸಿತಕ್ಕೆ ಇದುವರೆಗೆ 25 ಮಂದಿ ಮೃತಪಟ್ಟಿದ್ದಾರೆ.

ಕಳೆದ ಮೂರು ದಿನಗಳ ಭಾರೀ ಮಳೆಯು ಕೇರಳದ ಅಣೆಕಟ್ಟುಗಳಲ್ಲಿ ಸ್ಥಿರವಾದ ಒಳಹರಿವು ಮತ್ತು ನೀರಿನ ಮಟ್ಟ ಹೆಚ್ಚಲು ಕಾರಣವಾಗಿದೆ. ಶಬರಿಗಿರಿ ಯೋಜನೆಯ ಭಾಗವಾಗಿರುವ ಕಕ್ಕಿ ಅಣೆಕಟ್ಟು ಇಂದು ಬೆಳಗ್ಗೆ 11 ಗಂಟೆಗೆ ತನ್ನ ಶಟರ್‌ಗಳನ್ನು ತೆರೆಯುತ್ತದೆ. ಇದರಿಂದಾಗಿ ಪಂಪಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗುವ ನಿರೀಕ್ಷೆಯಿದೆ. 

ಶಬರಿಮಲೆ ಅಯ್ಯಪ್ಪ ಭಕ್ತರು ನಾಳೆ ಶಬರಿಮಲೆ ಬೆಟ್ಟದ ದೇಗುಲಕ್ಕೆ ತೆರಳಲು ಕಾಯುತ್ತಿರುವುದರ ಮಧ್ಯೆ ಅಣೆಕಟ್ಟಿನಿಂದ ನೀರು ಬಿಡುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. 

ಕೇರಳದ ಇಡುಕ್ಕಿ ಜಲಾಶಯದಲ್ಲಿ ಜಿಲ್ಲಾಡಳಿತ ಇಂದು ಬೆಳಿಗ್ಗೆ 7 ಗಂಟೆಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಬೆಳಗ್ಗೆ 7 ಗಂಟೆಗೆ ನೀರಿನ ಮಟ್ಟ 2 ಸಾವಿರದ 396.90 ಅಡಿ ಇತ್ತು. ಶಟರ್‌ಗಳನ್ನು ತೆರೆಯಲು ಕೇಂದ್ರ ಜಲ ಆಯೋಗವು ನಿಗದಿಪಡಿಸಿದ ಬೆಂಚ್‌ಮಾರ್ಕ್ 2 ಸಾವಿರದ 398.86 ಅಡಿಗಳು. ಅಣೆಕಟ್ಟು ದಿನಕ್ಕೆ 34.711 ಎಂಸಿಎಂ ಒಳಹರಿವು ಪಡೆಯುತ್ತಿದೆ ಮತ್ತು ವಿದ್ಯುತ್ ಉತ್ಪಾದನೆಯ ವಿಸರ್ಜನೆಯು ದಿನಕ್ಕೆ 9.07 ಎಂಸಿಎಂ ಆಗಿದೆ. ಒಳಹರಿವನ್ನು ಪರಿಗಣಿಸಿ, ಅಣೆಕಟ್ಟು ಬುಧವಾರದೊಳಗೆ ಪ್ರವಾಹದ ಗೇಟ್‌ಗಳನ್ನು ತೆರೆಯಬಹುದು.

ಕೇರಳದ ಎರಡನೇ ಅತಿದೊಡ್ಡ ಜಲಾಶಯವಾದ ಇಡಮಲಯಾರ್ ನಲ್ಲಿ, ನೀರಿನ ಮಟ್ಟ 165.30 ಮೀ ಮುಟ್ಟಿದ್ದರಿಂದ ಇಂದು ಬೆಳಿಗ್ಗೆ 7 ಗಂಟೆಗೆ ನೀಲಿ ಎಚ್ಚರಿಕೆಯನ್ನು ಬ್ಲೂ ಅಲರ್ಟ್ ಘೋಷಿಸಲಾಗಿದೆ. ಸಂಪೂರ್ಣ ಜಲಾಶಯದ ಮಟ್ಟ 169 ಮೀ ಮತ್ತು ತಿರುವು ಮಟ್ಟ 166.80 ಮೀ. ನೀರಿನ ಮಟ್ಟವು 165.8 ಮೀ ತಲುಪುವುದರಿಂದ ಆರೆಂಜ್ ಅಲರ್ಟ್ ಹೊರಡಿಸಲಾಗುವುದು, ರೆಡ್ ಅಲರ್ಟ್ 166.3 ಮೀ. ಅಣೆಕಟ್ಟು ಪ್ರತಿ ಗಂಟೆಗೆ 0.8 ಎಂಸಿಎಂ ಒಳಹರಿವನ್ನು ಪಡೆಯುತ್ತದೆ. ವಿದ್ಯುತ್ ಉತ್ಪಾದನೆಗೆ ತೆಗೆದುಕೊಳ್ಳುವ ನೀರು ಪ್ರತಿ ಗಂಟೆಗೆ 0.023 ಎಂಸಿಎಂ ಆಗಿದೆ.

ಮಳೆ ಕಡಿಮೆಯಾಗಿದ್ದರೂ ಮುಂದಿನ ಒಂದು ವಾರದಲ್ಲಿ ಅಣೆಕಟ್ಟುಗಳು ಸ್ಥಿರ ಒಳಹರಿವು ಪಡೆಯುವ ನಿರೀಕ್ಷೆಯಿದೆ. ಕಕ್ಕಿ - ಆನತೋಡು ಜಲಾಶಯದ ಎರಡು ಶಟರ್‌ಗಳನ್ನು ಇಂದು ಬೆಳಿಗ್ಗೆ 11 ಗಂಟೆಗೆ ತೆರೆಯಲಾಗುವುದು. ಪೂರ್ಣ ಜಲಾಶಯದ ಮಟ್ಟ 981.46 ಮೀ ಮತ್ತು ನೀರಿನ ಮಟ್ಟ 979.87 ಮೀ. ಪಂಪಾ ನದಿಯಲ್ಲಿ ನೀರಿನ ಮಟ್ಟವು 10 ರಿಂದ 15 ಸೆಂ.ಮೀ. ಪಂಪಾ ನದಿ ಈಗಾಗಲೇ ಪ್ರವಾಹ ಮಟ್ಟಕ್ಕಿಂತ ಹೆಚ್ಚು ಹರಿಯುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com