ಚೀನಾ ಸೇನೆಯ ದಾಳಿಗೆ ಸಜ್ಜು: ಭಾರತೀಯ ಯೋಧರು ಗಡಿ ಬಳಿ ಯಾವ ರೀತಿ ತರಬೇತಿ ಪಡೆಯುತ್ತಿದ್ದಾರೆ ವಿಡಿಯೊ ನೋಡಿ!

ಭಾರತ ಮತ್ತು ಚೀನಾ ಗಡಿ ನಡುವೆ ಉದ್ವಿಗ್ನತೆ ಮತ್ತೆ ತಲೆದೋರುವ ಲಕ್ಷಣ ಕಾಣುತ್ತಿದೆ, ಎರಡೂ ದೇಶಗಳ ನಡುವೆ ಮಾತುಕತೆ ನಡೆಯುತ್ತಿದ್ದರೂ ಕೂಡಾ ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಾಗಿ ಭಾರತ ಈಗ ಚೀನಾದ ಗಡಿಯಲ್ಲಿ ಭಾರತದ ಬ್ರಹ್ಮಾಸ್ತ್ರ ಎಂದೇ ಕರೆಯಲ್ಪಡುವ ಬೋಫೋರ್ಸ್‌ ಗನ್‌ಗಳನ್ನ ನಿಯೋಜಿಸಿದೆ.
ತವಂಗ್ ಸೆಕ್ಟರ್ ನಲ್ಲಿ ಯೋಧರ ತರಬೇತಿ
ತವಂಗ್ ಸೆಕ್ಟರ್ ನಲ್ಲಿ ಯೋಧರ ತರಬೇತಿ

ಲಡಾಕ್: ಭಾರತ ಮತ್ತು ಚೀನಾ ಗಡಿ ನಡುವೆ ಉದ್ವಿಗ್ನತೆ ಮತ್ತೆ ತಲೆದೋರುವ ಲಕ್ಷಣ ಕಾಣುತ್ತಿದೆ, ಎರಡೂ ದೇಶಗಳ ನಡುವೆ ಮಾತುಕತೆ ನಡೆಯುತ್ತಿದ್ದರೂ ಕೂಡಾ ಪರಿಸ್ಥಿತಿ ಮಾತ್ರ ಬೂದಿ ಮುಚ್ಚಿದ ಕೆಂಡದಂತಿದೆ. ಹೀಗಾಗಿ ಭಾರತ ಈಗ ಚೀನಾದ ಗಡಿಯಲ್ಲಿ ಭಾರತದ ಬ್ರಹ್ಮಾಸ್ತ್ರ ಎಂದೇ ಕರೆಯಲ್ಪಡುವ ಬೋಫೋರ್ಸ್‌ ಗನ್‌ಗಳನ್ನ ನಿಯೋಜಿಸಿದೆ.

ಭಾರತೀಯ ಸೇನೆಯ ಸೈನಿಕರು ಅರುಣಾಚಲ ಪ್ರದೇಶದ ಪೂರ್ವ ವಲಯದ ಒರಟಾದ ಹವಾಮಾನ ಪರಿಸ್ಥಿತಿಗಳು ಮತ್ತು ಭೂಪ್ರದೇಶಗಳಲ್ಲಿ ಆಕ್ರಮಣಕಾರಿ ತರಬೇತಿ, ತೀವ್ರ ವ್ಯಾಯಾಮ, ಕಸರತ್ತು ಮತ್ತು ಏಕಾಗ್ರತೆಗಾಗಿ ಧ್ಯಾನದ ಮೊರೆ ಹೋಗುತ್ತಿದ್ದಾರೆ, ಅವರಿಗೆ ಅಲ್ಲಿ ಕಠಿಣ ತರಬೇತಿ ನೀಡಲಾಗುತ್ತಿದೆ. 

ಭಾರತೀಯ ಸೈನಿಕರು ಚೀನಾದ ಕಡೆಯಿಂದ ಯಾವುದೇ ಬೆದರಿಕೆಯನ್ನು ಎದುರಿಸಲು ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ತವಾಂಗ್ ಸೆಕ್ಟರ್‌ನಲ್ಲಿ ಡ್ರಿಲ್ ಕಾರ್ಯಾಚರಣೆಗಿಳಿದಿದ್ದು ಅದರ ಪ್ರದರ್ಶನ ನಡೆಸಿದರು. 

ಭಾರತೀಯ ಸೈನಿಕರು ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿ ತವಾಂಗ್ ಸೆಕ್ಟರ್‌ನಲ್ಲಿ ಶತ್ರು ಟ್ಯಾಂಕ್‌ಗಳನ್ನು ನಾಶಮಾಡಲು ಯುದ್ಧ ಕವಾಯತು ಪ್ರದರ್ಶಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com