ಯೂಟ್ಯೂಬ್ ವಿಡಿಯೋ ನೋಡಿಕೊಂಡು ಸ್ವಯಂ ಹೆರಿಗೆ ಮಾಡಿಕೊಂಡ 17 ವರ್ಷದ ಅಪ್ರಾಪ್ತೆ; ನೆರೆಮನೆಯಾತನ ಬಂಧನ

17 ವರ್ಷದ ಆಪ್ರಾಪ್ತೆಯೊಬ್ಬಳು ಯೂಟ್ಯೂಬ್ ನೋಡಿಕೊಂಡು ತನಗೆ ತಾನೇ ಹೆರಿಗೆ ಮಾಡಿಕೊಂಡ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಮಲಪ್ಪುರಂ: 17 ವರ್ಷದ ಆಪ್ರಾಪ್ತೆಯೊಬ್ಬಳು ಯೂಟ್ಯೂಬ್ ನೋಡಿಕೊಂಡು ತನಗೆ ತಾನೇ ಹೆರಿಗೆ ಮಾಡಿಕೊಂಡ ಆಘಾತಕಾರಿ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಮಲಪ್ಪುರಂನ ಕೊಟ್ಟಕ್ಕಲ್ ನಲ್ಲಿ ಈ ಘಟನೆ ನಡೆದಿದ್ದು, 17 ವರ್ಷದ ಬಾಲಕಿಯೊಬ್ಬಳು ಅಕ್ಟೋಬರ್ 20 ರಂದು ತನ್ನ ಮನೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾಳೆ. ಅದೂ ಕೂಡ ಮನೆಯಲ್ಲಿ ಯಾರಿಗೂ ತಿಳಿಯದೇ.. 

ಹೌದು.. ಮನೆಯಲ್ಲಿನ ಹೆಣ್ಣುಮಗಳು ಗರ್ಭಿಣಿಯಾಗಿದ್ದಾಳೆ ಎಂಬ ಪರಿವೇ ಇಲ್ಲದ ಮನೆ ಮಂದಿ ಮಗು ಅತ್ತ ಬಳಿಕ ಮಗುವಿನ ಜನನದ ಬಗ್ಗೆ ತಿಳಿದು ಆಘಾತಗೊಂಡಿದ್ದಾರೆ. 

ಏನಿದು ಘಟನೆ?
ಅಕ್ಟೋಬರ್ 20 ರಂದು 17 ವರ್ಷದ ಬಾಲಕಿ ಮನೆಯ ಕೊಠಡಿಯಲ್ಲಿ ಯೂಟ್ಯೂಬ್ ನೋಡಿಕೊಂಡು ಹೆರಿಗೆ ಮಾಡಿಕೊಂಡಿದ್ದಾಳೆ. ಅಲ್ಲದೆ ವಿಡಿಯೋದಲ್ಲಿರುವಂತೆಯೇ ಮಗು ಜನನದ ಬಳಿಕ ಮಗುವಿನ ಹೊಕ್ಕಳು ಬಳ್ಳಿಯನ್ನು ಕೂಡ ಕತ್ತರಿಸಿದ್ದಾಳೆ. ಮಗುವಿನ ಅಳು ಕೇಳಿದ ಮನೆ ಮಂದಿ ಕೂಡಲೇ ಮಗುವನ್ನು ಮತ್ತು ಬಾಲಕಿಯನ್ನು ಆಸ್ಪತ್ರೆ ಸೇರಿಸಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಕೂಡಲೇ ತನಿಖೆ ನಡೆಸಿದ ಪೊಲೀಸರು ಕುಟುಂಬಸ್ಥರನ್ನು ವಿಚಾರಿಸಿದ್ದು ಈ ವೇಳೆ 21 ವರ್ಷದ ನೆರೆಮನೆಯಾತನೊಂದಿಗೆ ಸಂಬಂಧ ಇರುವುದು ಪತ್ತೆಯಾಗಿದೆ. ಇದೀಗ ಪೊಲೀಸರು ಆತನನ್ನು ಕೂಡ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಸ್ಥಳೀಯ ಎಸ್ಎಚ್ ಒ ಎಂಕೆ ಶಾಜಿ, ಬಾಲಕಿ ಗರ್ಭಧರಿಸಿರುವುದನ್ನು ಆಕೆಯಾಗಲೂ ಅಥವಾ ಅದಕ್ಕೆ ಕಾರಣನಾದ ವ್ಯಕ್ತಿ ಕೂಡ ಯಾರಿಗೂ ಹೇಳಿರಲಿಲ್ಲ. ಬಾಲಕಿಯ 50 ವರ್ಷದ ತಾಯಿ ದೃಷ್ಟಿಹೀನರಾಗಿದ್ದು, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ ಅವರ ತಂದೆ ಯಾವಾಗಲೂ ರಾತ್ರಿ ಕರ್ತವ್ಯದಲ್ಲಿದ್ದರು. ಗರ್ಭಿಣಿಯಾಗಿರುವುದು ಖಚಿತವಾದ ಬಳಿಕ ಬಾಲಕಿ ಯಾವಾಗಲೂ ಕೊಠಡಿಯಲ್ಲೇ ಇರುತ್ತಿದ್ದಳು. ಮನೆಯವರು ಆನ್ ಲೈನ್ ತರಗತಿಗಳಲ್ಲಿ ನಿರತಳಾಗಿದ್ದಾಳೆ ಎಂದು ಭಾವಿಸುತ್ತಿದ್ದರು ಎಂದು ಹೇಳಿದ್ದಾರೆ.

ಇದೀಗ ಆಸ್ಪತ್ರೆಯಲ್ಲಿರುವ ಬಾಲಕಿ ಮತ್ತು ಆಕೆಯ ನವಜಾತ ಶಿಶುವಿಗೆ ಚಿಕಿತ್ಸೆ ಮುಂದುವರೆದಿದೆ ಎಂದು ಮಂಜೇರಿಯ ಸರ್ಕಾರಿ ಆಸ್ಪತ್ರೆ ಆಡಳಿತ ಮಂಡಳಿ ಹೇಳಿದೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com