ಪಟ್ನಾ: ರಾಷ್ಟ್ರೀಯ ಲೋಕ ದಳ (ಆರ್ ಜೆ ಡಿ) ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ರಾಷ್ಟ್ರೀಯ ರಾಜಕಾರಣಕ್ಕೆ ಧುಮುಕಲು ಬಹಳ ಕಾತರರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಹಾರ ಬೈ ಎಲೆಕ್ಷನ್ ನವೆಂಬರ್ 2ಕ್ಕೆ ಘೋಷಣೆಯಾಗಿದ್ದು, ಅದರ ಫಲಿತಾಂಶವನ್ನು ಎದುರುನೋಡುತ್ತಿದ್ದಾರೆ.
ಮೇವು ಹಗರಣಕ್ಕೆ ಸಂಬಂಧಿಸಿದಂತೆ ಮೂರು ವರ್ಷ ಜೈಲುಶಿಕ್ಷೆಗೆ ಗುರಿಯಾಗಿದ್ದ ಲಾಲೂ ಇತ್ತೀಚಿಗಷ್ಟೆ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಬಿಜೆಪಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳನ್ನು ರಾಜ್ಯದಲ್ಲಿ ಸಂಘಟಿಸಿದ್ದಾರೆ ಎಂದು ಆವರ ಆಪ್ತರು ತಿಳಿಸಿದ್ದಾರೆ.
ರಾಷ್ಟ್ರೀಯ ರಾಜಕಾರಣದಲ್ಲಿ ನಿಮ್ಮ ಪಾತ್ರವೇನು ಎನ್ನುವ ಪ್ರಶ್ನೆಗೆ ಅವರು ಉತ್ತರಿಸುತ್ತಾ ತಮ್ಮ ಹೊಣೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳನ್ನು ಸಂಘಟಿಸುವುದು ಎಂದು ಹೇಳಿದ್ದರು.
ಲಾಲು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಬಡವರು, ರೈತರು ದಮನಿತರ ದನಿಯನ್ನು ಕೇಳುವವರು ಸರ್ಕಾರದಲ್ಲೊಬ್ಬರೂ ಇಲ್ಲ ಎಂದು ಕಿಡಿ ಕಾರಿದ್ದರು.
Advertisement