ಪಾಕಿಸ್ತಾನದಿಂದ ಶಹಬ್ಬಾಸ್ ಗಿರಿ ಪಡೆದುಕೊಳ್ಳಬೇಕಾ?: ರೈತ ನಾಯಕರಿಗೆ ಕೇಂದ್ರ ಸಚಿವ ಸಂಜೀವ್ ಬಾಲಿಯಾನ್ ಪ್ರಶ್ನೆ
ನವದೆಹಲಿ: ಕೇಂದ್ರದ ನೂತನ ಕೃಷಿ ಕಾನೂನು ವಿರೋಧಿಸಿ ಭಾನುವಾರ ನಡೆದ ರೈತರ ಕಿಸಾನ್ ಮಹಾಪಂಚಾಯತ್ ಸಭೆಯನ್ನು ರಾಜಕೀಯ ಸಮಾವೇಶ ಎಂದು ಕೇಂದ್ರ ಸಚಿವ ಸಂಜೀವ್ ಬಾಲಿಯಾನ್ ಟೀಕೆ ಮಾಡಿದ್ದಾರೆ.
ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ನಡೆದ ಕಿಸಾನ್ ಮಹಾಪಂಚಾಯತ್ ಅನ್ನು ಸಂಯುಕ್ತ ಕಿಸಾನ್ ಮೋರ್ಚಾ ಆಯೋಜನೆ ಮಾಡಿತ್ತು. ಈ ಬಗ್ಗೆ ಟೀಕೆ ಮಾಡಿರುವ ಸಂಜೀವ್ ಬಾಲಿಯಾನ್ ಕಿಸಾನ್ ಪಂಚಾಯತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೈತ ನಾಯಕರನ್ನು ಕುರಿತು, ನಿಮಗೆ ಪಾಕಿಸ್ತಾನದಿಂದ ಶಹಬ್ಬಾಸ್ ಗಿರಿ ಪಡೆದುಕೊಳ್ಳಬೇಕಾ ಎಂದು ಪ್ರಶ್ನೆ ಹಾಕಿದ್ದಾರೆ.
ಸಂಜೀವ್ ಬಾಲಿಯಾನ್ ಅವರು ಮುಜಾಫರ್ ನಗರದ ಸಂಸದರಾಗಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಸಮರ ಸಾರಿರುವ ರೈತರು ಪಾಕಿಸ್ತಾನವನ್ನು ಮೆಚ್ಚಿಸುವ ಉದ್ದೇಶದಿಂದ ಪ್ರತಿಭಟನೆ ಮಾಡುತ್ತಿದ್ದಾರೆ ಎನ್ನುವ ಅರ್ಥದಲ್ಲಿ ಸಚಿವರು ಮಾತನಾಡಿರುವುದಕ್ಕೆ ಆಕ್ಷೇಪ ಕೇಳಿಬಂದಿದೆ.
Related Article
'ರೈತರು ನಮ್ಮ ಆಪ್ತ ಬಂಧುಗಳು, ಅವರ ನೋವು ಅರ್ಥಮಾಡಿಕೊಳ್ಳಬೇಕು: ಬಿಜೆಪಿ ನಾಯಕ ವರುಣ್ ಗಾಂಧಿ
ಕರ್ನಾಟಕದಲ್ಲಿ ರೈತರ ಆದಾಯ ದ್ವಿಗುಣಗೊಳಿಸುವುದು ಅದ್ಭುತ ಯೋಜನೆ; ಆದರೆ ಸವಾಲುಗಳು ಅನೇಕ
ರೈತರ 'ಮಹಾಪಂಚಾಯತ್' ತಡೆಯಲು ಬಂದರೆ ಬಲವಂತವಾಗಿ ನುಗ್ಗುವೆವು: ಕಿಸಾನ್ ಮೋರ್ಚಾ ಮುಖಂಡ ರಾಕೇಶ್ ಟಿಕಾಯಿತ್ ಗುಡುಗು
'ರೈತರೊಂದಿಗೆ ಚರ್ಚೆಗೆ ಕೇಂದ್ರ ಸಿದ್ಧ, ದೇಶದಾದ್ಯಂತ 10 ಸಾವಿರ ಕೃಷಿ ಉತ್ಪಾದಕರ ಸಂಘ ಸ್ಥಾಪನೆ': ಶೋಭಾ ಕರಂದ್ಲಾಜೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ