ತಾಲಿಬಾನ್ ಸರ್ಕಾರದೊಂದಿಗೆ ಭಾರತ ವ್ಯವಹರಿಸಬಾರದು: ಯಶವಂತ್ ಸಿನ್ಹಾ

ಅಫ್ಘಾನಿಸ್ತಾನದಲ್ಲಿ ಹೊಸದಾಗಿ ರಚನೆಯಾದ ಸರ್ಕಾರದೊಂದಿಗೆ ಭಾರತ ಯಾವುದೇ ರೀತಿಯ ವ್ಯವಹಾರ ನಡೆಸಲು ಸಾಧ್ಯವಿಲ್ಲ ಮತ್ತು ನಡೆಸಬಾರದು ಎಂದು ತಾಲಿಬಾನ್ ಉಸ್ತುವಾರಿ...
ಯಶವಂತ್ ಸಿನ್ಹಾ
ಯಶವಂತ್ ಸಿನ್ಹಾ

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಹೊಸದಾಗಿ ರಚನೆಯಾದ ಸರ್ಕಾರದೊಂದಿಗೆ ಭಾರತ ಯಾವುದೇ ರೀತಿಯ ವ್ಯವಹಾರ ನಡೆಸಲು ಸಾಧ್ಯವಿಲ್ಲ ಮತ್ತು ನಡೆಸಬಾರದು ಎಂದು ತಾಲಿಬಾನ್ ಉಸ್ತುವಾರಿ ಸಚಿವ ಸಂಪುಟ ಘೋಷಿಸಿದ ನಂತರ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಯಶವಂತ್ ಸಿನ್ಹಾ ಮಂಗಳವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

"ಅಫ್ಘಾನಿಸ್ತಾನದಲ್ಲಿ ಹೊಸದಾಗಿ ರಚನೆಯಾಗಿರುವ ತಾಲಿಬಾನ್ ಸರ್ಕಾರದೊಂದಿಗೆ ಭಾರತ ಯಾವುದೇ ರೀತಿಯ ವ್ಯವಹಾರ ನಡೆಸಬಾರದು" ಎಂದು ಯಶವಂತ್ ಸಿನ್ಹಾ ಅವರು ಟ್ವೀಟ್ ಮಾಡಿದ್ದಾರೆ.

ಇತ್ತೀಚಿಗೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ, ತಾಲಿಬಾನ್‌ನೊಂದಿಗೆ ವ್ಯವಹರಿಸುವ ಬಗ್ಗೆ ಭಾರತ ಮುಕ್ತವಾಗಿರಬೇಕು ಮತ್ತು ಕಾಬೂಲ್‌ನಲ್ಲಿ ತನ್ನ ರಾಯಭಾರ ಕಚೇರಿಯನ್ನು ತೆರೆಯಬೇಕು. ರಾಯಭಾರಿಯನ್ನು ವಾಪಸ್ ಕಳುಹಿಸಬೇಕು ಎಂದು ಸಿನ್ಹಾ ಅವರು ಹೇಳಿದ್ದರು.

ಅಫ್ಘಾನಿಸ್ತಾನದ ನೂತನ ತಾಲಿಬಾನ್ ಸರ್ಕಾರದ ಮುಖ್ಯಸ್ಥರನ್ನಾಗಿ ಮುಲ್ಲಾ ಮೊಹಮ್ಮದ್ ಹಸನ್  ಅಖುಂದ್‌ ಅವರನ್ನು ನೇಮಕ ಮಾಡಲಾಗಿದೆ ಎಂದು ಮಂಗಳವಾರ ತಾಲಿಬಾನ್ ಘೋಷಿಸಿದೆ.

ತಾಲಿಬಾನ್ ಸಹ ಸಂಸ್ಥಾಪಕ ಅಬ್ದುಲ್ ಘನಿ ಬರದಾರ್ ಅವರನ್ನು ಉಪ ಪ್ರಧಾನಿಯಾಗಿ ನೇಮಕ ಮಾಡಲಾಗಿದೆ ಎಂದು ತಾಲಿಬಾನ್ ಮುಖ್ಯ ವಕ್ತಾರ ಜಬಿಹುಲ್ಲಾ ಮುಜಾಹಿದ್ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com