ಗೋಲ್ವಾಲ್ಕರ್, ಸಾರ್ವಕರ್ ಇತಿಹಾಸ ಪಠ್ಯದಲ್ಲಿದ್ದರೆ ತಪ್ಪೇನು: ಶಶಿ ತರೂರ್

ಹಿಂದೂ ಮಹಾಸಭಾ ನಾಯಕ ಡಿವಿ ಸಾವರ್ಕರ್ ಮತ್ತು ಆರ್‌ಎಸ್‌ಎಸ್‌ ನಾಯಕ ಎಂಎಸ್ ಗೋಲ್ವಾಲ್ಕರ್ ಅವರ ಪುಸ್ತಕವನ್ನು ಸ್ನಾತಕೋತ್ತರ ಪದವಿಯ ಆಡಳಿತ ಮತ್ತು ರಾಜಕೀಯ ಕೋರ್ಸ್ ನಲ್ಲಿ ಸೇರಿಸುವ ಕಣ್ಣೂರು ವಿಶ್ವವಿದ್ಯಾಲಯದ ನಿರ್ಧಾರವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಬೆಂಬಲಿಸಿದ್ದಾರೆ.
ಶಶಿ ತರೂರ್
ಶಶಿ ತರೂರ್
Updated on: 

ತಿರುವನಂತಪುರ: ಹಿಂದೂ ಮಹಾಸಭಾ ನಾಯಕ ಡಿವಿ ಸಾವರ್ಕರ್ ಮತ್ತು ಆರ್‌ಎಸ್‌ಎಸ್‌ ನಾಯಕ ಎಂಎಸ್ ಗೋಲ್ವಾಲ್ಕರ್ ಅವರ ಪುಸ್ತಕವನ್ನು ಸ್ನಾತಕೋತ್ತರ ಪದವಿಯ ಆಡಳಿತ ಮತ್ತು ರಾಜಕೀಯ ಕೋರ್ಸ್ ನಲ್ಲಿ ಸೇರಿಸುವ ಕಣ್ಣೂರು ವಿಶ್ವವಿದ್ಯಾಲಯದ ನಿರ್ಧಾರವನ್ನು ಕಾಂಗ್ರೆಸ್ ನಾಯಕ ಶಶಿ ತರೂರ್ ಬೆಂಬಲಿಸಿದ್ದಾರೆ.

ನಮ್ಮ ಸಮಾಜದಲ್ಲಿ ಬೌದ್ಧಿಕ ಸ್ವಾತಂತ್ರ್ಯ ಅತ್ಯಂತ ಮಹತ್ವ ಪಡೆದಿದೆ. ಪಕ್ಷ ರಾಜಕೀಯ ಬಲಿ ನೀಡಲು ಬೌದ್ಧಿಕ ಸ್ವಾತಂತ್ರ್ಯ ತ್ಯಾಗ ಮಾಡಬಾರದು ಎಂದು ಶಶಿ ತತೂರ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ. 

ಗೋಲ್ವಾಲ್ಕರ್ ಮತ್ತು ಸಾರ್ವಕರ್ ಅವರ ಬಗ್ಗೆ ತಿಳಿದುಕೊಳ್ಳದೆ ಇದ್ದರೆ ಯಾವ ಅಂಶಗಳ ಆಧಾರದ ಮೇಲೆ ನಾವು ಅವರನ್ನು ವಿರೋಧಿಸಬೇಕು? ಕಣ್ಣೂರು ವಿಶ್ವವಿದ್ಯಾಲಯವು ಮಹಾತ್ಮ ಗಾಂಧಿ ಮತ್ತು ರವೀಂದ್ರನಾಥ ಟ್ಯಾಗೋರ್ ಅವರ ವಿಷಯಗಳ ಬಗ್ಗೆಯೂ ಭೋದಿಸುತ್ತದೆ ಎಂದು ಹೇಳಿದ್ದಾರೆ. 

ಕಣ್ಣೂರು ವಿಶ್ವವಿದ್ಯಾಲಯದ ನಿರ್ಧಾರಕ್ಕೆ ಕೆಲ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಅಲ್ಲದೆ ಇದನ್ನು ವಿಶ್ವವಿದ್ಯಾಲಯದ ಕೇಸರೀಕರಣ ಎಂದು ಟೀಕಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com