ಉಗ್ರನನ್ನು ಅರೆಸ್ಟ್ ಮಾಡಿದ ಸ್ಥಳ ತಪ್ಪು ಬರೆದ ಪತ್ರಕರ್ತನಿಗೆ ಜೈಲು, ಸಂಪಾದಕನ ವಿರುದ್ಧ ಪ್ರಕರಣ ದಾಖಲು

ಮರ್ಡೋನ್ ಸಾಹಿಬ್ ಗ್ರಾಮದಲ್ಲಿ ಓರ್ವ ಉಗ್ರ ಟಿಫಿನ್ ಬಾಂಬ್ ಸಂಚು ರೂಪಿಸಿದ್ದ. ಆದರೆ ಪತ್ರಿಕೆಯಲ್ಲಿ ಐಒಸಿ ಡಿಪೋ ಎಂಬಲ್ಲಿಂದ ಉಗ್ರನನ್ನು ಬಂಧಿಸಲಾಯಿತು ಎಂದು ಬರೆಯಲಾಗಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಂಡೀಗಢ: ಅಚ್ಚರಿಯ ಘಟನೆಯೊಂದರಲ್ಲಿ ಉಗ್ರಗಾಮಿಯ ಸ್ಥಳವನ್ನು ಬಂಧಿಸಲಾದ ಸ್ಥಳದ ಹೆಸರನ್ನು ತಪ್ಪಾಗಿ ಪ್ರಕಟಿಸಿದ ಕಾರಣ ಆ ಸುದ್ದಿ ಬರೆದ ಪತ್ರಕರ್ತನನ್ನು ಬಂಧಿಸಿರುವ ಘಟನೆ ಪಂಜಾಬ್ ನಲ್ಲಿ ನಡೆದಿದೆ. ಪೊಲೀಸರ ವಿರುದ್ಧ ಮಾಧ್ಯಮ ಸ್ವಾತಂತ್ರ್ಯ ಹರಣ ಮಾಡಿರುವ ಕೂಗು ಎದ್ದಿದೆ.

ದೈನಿಕ್ ಭಾಸ್ಕರ್ ಎನ್ನುವ ಪತ್ರಿಕೆಯಲ್ಲಿ ಪತ್ರಕರ್ತನಾಗಿ ಕೆಲಸ ನಿರ್ವಹಿಸುತ್ತಿದ್ದ ಸುನಿಲ್ ಬರಾರ್ ಬಂಧನಕ್ಕೀಡಾದ ವ್ಯಕ್ತಿ. ಅದೇ ಪತ್ರಿಕೆಯ ಸಂಪಾದಕ ಸಂದೀಪ್ ಶರ್ಮಾ ಅವರ ಮೇಲೂ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. 

ಮರ್ಡೋನ್ ಸಾಹಿಬ್ ಗ್ರಾಮದಲ್ಲಿ ಓರ್ವ ಉಗ್ರ ಟಿಫಿನ್ ಬಾಂಬ್ ಸಂಚು ರೂಪಿಸಿದ್ದ. ಆದರೆ ಪತ್ರಿಕೆಯಲ್ಲಿ ಐಒಸಿ ಡಿಪೋ ಎಂಬಲ್ಲಿಂದ ಉಗ್ರನನ್ನು ಬಂಧಿಸಲಾಯಿತು ಎಂದು ಬರೆಯಲಾಗಿತ್ತು. ಮಾರನೇ ದಿನವೇ ತಪ್ಪನ್ನು ತಿದ್ದಿ ಉಗ್ರನನ್ನು ಬಂಧಿಸಿದ ಸರಿಯಾದ ಸ್ಥಳವನ್ನು ಪತ್ರಿಕೆ ಪ್ರಕಟಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com