ಚುನಾವಣಾ ಆಯೋಗದ ಶೋಕಾಸ್ ನೋಟಿಸ್ ಗೆ 'ಡೋಂಟ್ ಕೇರ್' ಎಂದ ಮಮತಾ!

ಕೇಂದ್ರಿಯ ಪಡೆಗಳಿಂದ ಮತದಾರರಿಗೆ ಬೆದರಿಕೆ ಹೇಳಿಕೆಗಾಗಿ ಚುನಾವಣಾ ಆಯೋಗದಿಂದ ನೀಡಲಾಗಿರುವ ನೋಟಿಸ್ ಕುರಿತಂತೆ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿಆರ್ ಪಿಎಫ್ , ಬಿಜೆಪಿ ಪರ ಕೆಲಸ ಮಾಡುವುದನ್ನು ನಿಲ್ಲಿಸುವವರೆಗೂ ಅದರ ಬಗ್ಗೆ ಮಾತನಾಡುವುದನ್ನು ಮುಂದುವರೆಸುತ್ತೇನೆ ಎಂದಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಜಮಲ್ ಪುರ: ಕೇಂದ್ರಿಯ ಪಡೆಗಳಿಂದ ಮತದಾರರಿಗೆ ಬೆದರಿಕೆ ಹೇಳಿಕೆಗಾಗಿ ಚುನಾವಣಾ ಆಯೋಗದಿಂದ ನೀಡಲಾಗಿರುವ ನೋಟಿಸ್ ಕುರಿತಂತೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸಿಆರ್ ಪಿಎಫ್ , ಬಿಜೆಪಿ ಪರ ಕೆಲಸ ಮಾಡುವುದನ್ನು ನಿಲ್ಲಿಸುವವರೆಗೂ ಅದರ ಮಧ್ಯಪ್ರವೇಶದ ಬಗ್ಗೆ ಮಾತನಾಡುವುದನ್ನು ಮುಂದುವರೆಸುತ್ತೇನೆ ಎಂದಿದ್ದಾರೆ.

ಚುನಾವಣಾ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ಪುನರುಚ್ಚರಿಸಿದ ಮಮತಾ, ಚುನಾವಣೆ ದಿನದಂದು ಪ್ರಧಾನ ಮಂತ್ರಿ ಪ್ರಚಾರ ಮಾಡಿದ್ದಾರೆ. ಆದರೂ, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ಎಲ್ಲಿಯೂ ಆಯೋಗ ಹೇಳಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಪುರ್ಬಾ ಬರ್ಧಾಮನ್‌ನ ಜಮಾಲ್‌ಪುರದಲ್ಲಿ ನಡೆದ ರ‍್ಯಾಲಿ ಮಾತನಾಡಿದ ಅವರು, ಸಿಆರ್ ಪಿಎಫ್ ಬಿಜೆಪಿ ಪರ ಕೆಲಸವನ್ನು ನಿಲ್ಲಿಸುವವರೆಗೂ ಅದರ ಮದ್ಯಪ್ರವೇಶದ ಬಗ್ಗೆ ಮಾತನಾಡುವುದನ್ನು ಮುಂದುವರೆಸುತ್ತೇನೆ. ಅದು ಆ ಕೆಲಸ ಮಾಡಿದ ನಂತರ ಸಲ್ಯೂಟ್ ಹೊಡೆಯುತ್ತೇನೆ. ಚುನಾವಣಾ ಆಯೋಗದ ಶೋಕಾಸ್ ಪತ್ರಗಳಿಗೆ ನಾನು ಹೆದರುವುದಿಲ್ಲ ಎಂದರು.

ಬಿಜೆಪಿ ಹೇಳುವುದನ್ನು ಕೇಳುವ ಚುನಾವಣಾ ಆಯೋಗ, ಟಿಎಂಸಿ ಮಾತು ಕೇಳುವುದಿಲ್ಲ, ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವಂತೆಯೇ ತಾನು ಕೂಡಾ ಚುನಾವಣೆ ದಿನದಂದು ಪ್ರಚಾರ ಮಾಡುವುದಾಗಿ ತಿಳಿಸಿದರು.

ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಡೆಯುತ್ತಿರುವಾಗ ಪ್ರಧಾನಿ ಹೇಗೆ ಪರೀಕ್ಷಾ ಪೆ ಚರ್ಚೆ ನಡೆಸಿದರು, ಇದು ನೀತಿ ಸಂಹಿತೆ ಉಲ್ಲಂಘನೆಯಲ್ಲವೇ? ಎಂದು ಮಮತಾ ಬ್ಯಾನರ್ಜಿ ಪ್ರಶ್ನಿಸಿದರು. 

ಗುರುವಾರ ಪ್ರಚಾರದ ವೇಳೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿರತವಾಗಿರುವ ಸಿಆರ್ ಪಿಎಫ್ ಕೇಂದ್ರಿಯ ಪಡೆ ಮಮತಾ ನೀಡಿರುವ ಹೇಳಿಕೆ ಸಂಪೂರ್ಣವಾಗಿ ತಪ್ಪಿನಿಂದ ಕೂಡಿದ್ದು, ಶನಿವಾರದೊಳಗೆ ಪ್ರತಿಕ್ರಿಯೆ ನೀಡುವಂತೆ ಶೋಕಾಸ್ ನೋಟಿಸ್ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com