ದೇಶದ ಜನತೆ 4 ವಿಷಯಗಳಿಗೆ ಬದ್ಧರಾಗಿ, ಕೊರೋನಾ ಲಸಿಕೆ ಉತ್ಸವದಲ್ಲಿ ಭಾಗಿಯಾಗಿ: ಪ್ರಧಾನಿ ಮೋದಿ ಕರೆ 

ದೇಶಾದ್ಯಂತ ಭಾನುವಾರದಿಂದ ಕೊರೋನಾ ಲಸಿಕೆ ಉತ್ಸವ ಆರಂಭವಾಗಲಿದೆ. ಹಲವು ರಾಜ್ಯಗಳಲ್ಲಿ  ಕೋವಿಡ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು, ಕೊರೋನಾ ೨ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ 4 ದಿನಗಳ ಈ ಲಸಿಕಾ ಉತ್ಸವ ಆರಂಭಿಸಿದ್ದಾರೆ. ಈ ಮೂಲಕ ಎಲ್ಲಾ ರಾಜ್ಯಗಳಲ್ಲಿ ಲಸಿಕೆ ನೀಡುವ ಅಭಿಯಾನವನ್ನು ತೀವ್ರಗೊಳಿಸಲು ಅವರು ಕರೆ ಕೊಟ್ಟಿದ್ದಾರೆ.

Published: 11th April 2021 10:32 AM  |   Last Updated: 11th April 2021 10:32 AM   |  A+A-


PM Narendra Modi

ಪ್ರಧಾನ ಮಂತ್ರಿ ನರೇಂದ್ರ ಮೋದಿ

Posted By : Sumana Upadhyaya
Source : PTI

ನವದೆಹಲಿ: ದೇಶಾದ್ಯಂತ ಭಾನುವಾರದಿಂದ ಕೊರೋನಾ ಲಸಿಕೆ ಉತ್ಸವ ಆರಂಭವಾಗಲಿದೆ. ಹಲವು ರಾಜ್ಯಗಳಲ್ಲಿ  ಕೋವಿಡ್ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು, ಕೊರೋನಾ ೨ನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ 4 ದಿನಗಳ ಈ ಲಸಿಕಾ ಉತ್ಸವ ಆರಂಭಿಸಿದ್ದಾರೆ. ಈ ಮೂಲಕ ಎಲ್ಲಾ ರಾಜ್ಯಗಳಲ್ಲಿ ಲಸಿಕೆ ನೀಡುವ ಅಭಿಯಾನವನ್ನು ತೀವ್ರಗೊಳಿಸಲು ಅವರು ಕರೆ ಕೊಟ್ಟಿದ್ದಾರೆ.

ಇದೇ 14ರವರೆಗೆ ಲಸಿಕೆ ಉತ್ಸವ ನಡೆಯಲಿದ್ದು, ಸಾರ್ವಜನಿಕರು ಲಸಿಕೆ ಹಾಕಿಸಿಕೊಂಡು, ಸೋಂಕನ್ನು ನಿಯಂತ್ರಿಸಲು ಮುಂದಾಗಬೇಕು ಎಂದು ಪ್ರಧಾನಿ ಹೇಳಿದ್ದಾರೆ.

ದೇಶಾದ್ಯಂತ ನಾವು 'ಟಿಕಾ ಉತ್ಸವವನ್ನು ಆರಂಭಿಸುತ್ತಿದ್ದೇವೆ. ದೇಶದ ಜನರು 4 ವಿಷಯಗಳಿಗೆ ಬದ್ಧರಾಗಿ ಎಂದು ಕೇಳಿಕೊಳ್ಳುತ್ತೇನೆ. ಲಸಿಕೆ ಪಡೆಯಲು ಸಹಾಯ ಮಾಡುವವರಿಗೆ ಸಹಾಯ ಮಾಡಿ, ಕೋವಿಡ್ ಚಿಕಿತ್ಸೆಯಲ್ಲಿ ಜನರಿಗೆ ಸಹಾಯ ಮಾಡಿ, ಮಾಸ್ಕ್ ಧರಿಸಿ ಮತ್ತು ಇತರರನ್ನು ಧರಿಸುವಂತೆ ಪ್ರೇರೇಪಿಸಿ ಮತ್ತು ಯಾರಿಗಾದರೂ ಸೋಂಕು ತಗುಲಿದರೆ ಆ ಪ್ರದೇಶದಲ್ಲಿ ಸೂಕ್ಷ್ಮ ಕಂಟೈನ್ ಮೆಂಟ್ ವಲಯವೆಂದು ಸೃಷ್ಟಿ ಮಾಡಿ ಎಂದು ಪ್ರಧಾನಿ ಹೇಳಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp