ಜಿಎನ್‌ಸಿಟಿಡಿ ತಿದ್ದುಪಡಿಯಿಂದ ದೆಹಲಿಯಲ್ಲಿ ಚುನಾಯಿತ ಸರ್ಕಾರದ ಸಾಂವಿಧಾನಿಕ, ಕಾನೂನು ಕರ್ತವ್ಯಗಳು ಬದಲಾಗಲ್ಲ: ಎಂಹೆಚ್‌ಎ

ಜಿಎನ್‌ಸಿಟಿಡಿ ತಿದ್ದುಪಡಿಯಿಂದ ರಾಷ್ಟ್ರ ರಾಜಧಾನಿಯಲ್ಲಿ ಚುನಾಯಿತ ಸರ್ಕಾರದ ಸಾಂವಿಧಾನಿಕ ಮತ್ತು ಕಾನೂನು ಜವಾಬ್ದಾರಿಗಳನ್ನು ಯಾವುದೇ ರೀತಿಯಲ್ಲಿ ಬದಲಾಯಿಸುವುದಿಲ್ಲ ಎಂದು ಕೇಂದ್ರ ಗುರುವಾರ ಹೇಳಿದೆ.
ಕೇಜ್ರಿವಾಲ್-ಬೈಜಾಲ್
ಕೇಜ್ರಿವಾಲ್-ಬೈಜಾಲ್

ನವದೆಹಲಿ: ಜಿಎನ್‌ಸಿಟಿಡಿ ತಿದ್ದುಪಡಿಯಿಂದ ರಾಷ್ಟ್ರ ರಾಜಧಾನಿಯಲ್ಲಿ ಚುನಾಯಿತ ಸರ್ಕಾರದ ಸಾಂವಿಧಾನಿಕ ಮತ್ತು ಕಾನೂನು ಜವಾಬ್ದಾರಿಗಳನ್ನು ಯಾವುದೇ ರೀತಿಯಲ್ಲಿ ಬದಲಾಯಿಸುವುದಿಲ್ಲ ಎಂದು ಕೇಂದ್ರ ಗುರುವಾರ ಹೇಳಿದೆ.

ತಿದ್ದುಪಡಿಗಳು ಚುನಾಯಿತ ಸರ್ಕಾರ ಮತ್ತು ಲೆಫ್ಟಿನೆಂಟ್ ಗವರ್ನರ್ (ಎಲ್ಜಿ) ಅವರ ಜವಾಬ್ದಾರಿಗಳನ್ನು ವ್ಯಾಖ್ಯಾನಿಸುತ್ತದೆ ಮತ್ತು ಶಾಸಕಾಂಗ ಮತ್ತು ಕಾರ್ಯಾಂಗಗಳ ನಡುವೆ 'ಸಾಮರಸ್ಯದ ಸಂಬಂಧವನ್ನು ಸೃಷ್ಟಿಸುತ್ತದೆ' ಎಂದು ಗೃಹ ಸಚಿವಾಲಯ (ಎಂಎಚ್‌ಎ) ಹೇಳಿಕೆಯಲ್ಲಿ ತಿಳಿಸಿದೆ.

ದೆಹಲಿಯ ರಾಷ್ಟ್ರೀಯ ರಾಜಧಾನಿ(ಜಿಎನ್‌ಸಿಟಿಡಿ) ತಿದ್ದುಪಡಿ ಕಾಯ್ದೆ 2021 ಮಾರ್ಚ್ 22ರಂದು ಲೋಕಸಭೆಯಲ್ಲಿ ಹಾಗೂ ಮಾರ್ಚ್ 24ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಲ್ಪಟ್ಟ ನಂತರ ಮಾರ್ಚ್ 28ರಿಂದ ಜಾರಿಗೆ ಬಂದಿದೆ. ಜಿಎನ್‌ಸಿಟಿಡಿ ಕಾಯ್ದೆಯ 21, 24, 33 ಮತ್ತು 44 ಸೆಕ್ಷನ್‌ಗಳನ್ನು ತಿದ್ದುಪಡಿ ಮಾಡಲಾಗಿದೆ.

ತಿದ್ದುಪಡಿ ಕಾಯ್ದೆಯ ಉದ್ದೇಶವು ರಾಜಧಾನಿಯ ಅಗತ್ಯಗಳಿಗೆ ಹೆಚ್ಚು ಪ್ರಸ್ತುತವಾಗುವುದು. ಚುನಾಯಿತ ಸರ್ಕಾರ ಮತ್ತು ಎಲ್ಜಿಯ ಜವಾಬ್ದಾರಿಗಳನ್ನು ಮತ್ತಷ್ಟು ವ್ಯಾಖ್ಯಾನಿಸುವುದು ಮತ್ತು ಶಾಸಕಾಂಗ ಮತ್ತು ಕಾರ್ಯಾಂಗಗಳ ನಡುವೆ ಸಾಮರಸ್ಯದ ಸಂಬಂಧವನ್ನು ಸೃಷ್ಟಿಸುವುದು ಎಂದು ಎಂಎಚ್‌ಎ ಹೇಳಿದೆ.

 ಈ ತಿದ್ದುಪಡಿಗಳು ದೆಹಲಿಯ ಎನ್‌ಸಿಟಿಯಲ್ಲಿ ಉತ್ತಮ ಆಡಳಿತವನ್ನು ಖಚಿತಪಡಿಸುತ್ತದೆ ಮತ್ತು ದೆಹಲಿಯ ಸಾಮಾನ್ಯ ಜನರಿಗೆ ಸಂಬಂಧಿಸಿದ ಯೋಜನೆಗಳು ಮತ್ತು ಕಾರ್ಯಕ್ರಮಗಳ ಸುಧಾರಿತ ಅನುಷ್ಠಾನಕ್ಕೆ ಕಾರಣವಾಗುತ್ತದೆ ಎಂದು ಹೇಳಿಕೆ ತಿಳಿಸಿದೆ.

ಈ ತಿದ್ದುಪಡಿಗಳು ಅಸ್ತಿತ್ವದಲ್ಲಿರುವ ಕಾನೂನು ಮತ್ತು ಸಾಂವಿಧಾನಿಕ ನಿಬಂಧನೆಗಳಿಗೆ ಅನುಗುಣವಾಗಿರುತ್ತವೆ. ಜುಲೈ 4, 2018 ಮತ್ತು ಫೆಬ್ರವರಿ 14, 2019 ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳಿಗೆ ಅನುಗುಣವಾಗಿರುತ್ತವೆ ಎಂದು ಎಂಹೆಚ್ಎ ಹೇಳಿದೆ.

 ಶಾಸನದ ಪ್ರಕಾರ, ದೆಹಲಿಯಲ್ಲಿ "ಸರ್ಕಾರ" ಎಂದರೆ "ಲೆಫ್ಟಿನೆಂಟ್ ಗವರ್ನರ್" ಮತ್ತು ಯಾವುದೇ ಕಾರ್ಯಕಾರಿ ಕ್ರಮ ತೆಗೆದುಕೊಳ್ಳುವ ಮೊದಲು ಸರ್ಕಾರವು ಎಲ್ಜಿಯ ಅಭಿಪ್ರಾಯವನ್ನು ಪಡೆಯಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com