ಗಡಿ ಘರ್ಷಣೆ: ಮಿಜೋರಾಂ ಸಂಸದನ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ರದ್ದುಗೊಳಿಸುವಂತೆ ಅಸ್ಸಾಂ ಸಿಎಂ ಬಿಸ್ವಾ ಆದೇಶ

ಅಸ್ಸಾಂ ಮತ್ತು ಮಿಜೋರಾಂ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿದ್ದ ಗಡಿ ಘರ್ಷಣೆ ವಿಚಾರವಾಗಿ ಮಿಜೋರಾಂ ಸಂಸದ ಕೆ ವನ್ಲಾಲ್ವೇನಾ ವಿರುದ್ಧ ಅಸ್ಸಾಂ ಪೊಲೀಸರು ದಾಖಲಿಸಿದ್ದ ಎಫ್ ಐಆರ್ ಅನ್ನು ರದ್ದು ಮಾಡುವಂತೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಆದೇಶಿಸಿದ್ದಾರೆ.
ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ
ಅಸ್ಸಾಂ ರಾಜ್ಯದ ಮುಖ್ಯಮಂತ್ರಿ ಹಿಮಾಂತ ಬಿಸ್ವ ಶರ್ಮಾ

ಗುವಾಹತಿ: ಅಸ್ಸಾಂ ಮತ್ತು ಮಿಜೋರಾಂ ನಡುವೆ ತೀವ್ರ ಸಂಘರ್ಷಕ್ಕೆ ಕಾರಣವಾಗಿದ್ದ ಗಡಿ ಘರ್ಷಣೆ ವಿಚಾರವಾಗಿ ಮಿಜೋರಾಂ ಸಂಸದ ಕೆ ವನ್ಲಾಲ್ವೇನಾ ವಿರುದ್ಧ ಅಸ್ಸಾಂ ಪೊಲೀಸರು ದಾಖಲಿಸಿದ್ದ ಎಫ್ ಐಆರ್ ಅನ್ನು ರದ್ದು ಮಾಡುವಂತೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಆದೇಶಿಸಿದ್ದಾರೆ.

ಉಭಯ ರಾಜ್ಯಗಳ ಗಡಿಯಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಮತ್ತು ಸದ್ಭಾವನೆಯ ಪ್ರತೀಕವಾಗಿ ಮಿಜೋರಾಂ ಸಂಸದ ಕೆ ವನ್ಲಾಲ್ವೇನಾ ವಿರುದ್ಧ ಅಸ್ಸಾಂ ಪೊಲೀಸರು ದಾಖಲಿಸಿದ್ದ ಎಫ್ ಐಆರ್ ಅನ್ನು ರದ್ದು ಮಾಡುವಂತೆ ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಆದೇಶಿಸಿದ್ದಾರೆ.

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ಹಿಂಪಡೆಯಲು ಮಿಜೋರಾಂ ಸರ್ಕಾರ ಸಿದ್ಧವಾಗಿದೆ ಎಂದು ಅಲ್ಲಿನ ಮುಖ್ಯ ಕಾರ್ಯದರ್ಶಿ ಲಾಲ್‌ನುನ್‌ಮಾವಿಯಾ ಚುವಾಂಗೊ ಭಾನುವಾರ ಹೇಳಿದ್ದರು. ಈ ಹೇಳಿಕೆ ಬೆನ್ನಲ್ಲೇ ಅಸ್ಸಾಂ ಸರ್ಕಾರ ಕೂಡ ಶಾಂತಿ ಸ್ಥಾಪನೆ  ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದು, ಮಿಜೋರಾಂ ಸಂಸದ ಕೆ ವನ್ಲಾಲ್ವೇನಾ ವಿರುದ್ಧ  ದಾಖಲಾಗಿದ್ದ ಎಫ್ ಐಆರ್ ಅನ್ನು ರದ್ದು ಮಾಡುವಂತೆ ಸೂಚಿಸಿದೆ.

ಶಾಂತಿ ಸ್ಥಾಪನೆಗಾಗಿ ಬಂಧನಕ್ಕೂ ಸಿದ್ಧ ಎಂದಿದ್ದ ಸಿಎಂ
ಇನ್ನು ಅಸ್ಸಾಂ ಮತ್ತು ವಿಜೋರಾಂ ರಾಜ್ಯಗಳ ನಡುವೆ ಶಾಂತಿ ನೆಲೆಸುತ್ತದೆ ಎಂದಾದರೆ ನಾನು ಮಿಜೋರಾಂ ಪೊಲೀಸರಿಂದ ಬಂಧನಕ್ಕೊಳಗಾಗಲು ಸಿದ್ಧ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಭಾನುವಾರ ಹೇಳಿದ್ದರು. 

ಮಾತುಕತೆ ಮಾತ್ರ ವಿವಾದವನ್ನು ಬಗೆಹರಿಸಲು ನೆರವಾಗುತ್ತದೆ ಎಂದು ಪ್ರತಿಪಾದಿಸಿರುವ ಅಸ್ಸಾಂ ಮುಖ್ಯಮಂತ್ರಿ, ಒಂದುವೇಳೆ ಮಿಜೋರಾಂ ಪೊಲೀಸರಿಂದ ಸಮನ್ಸ್ ಬಂದರೆ, ಅದರಿಂದ ತಪ್ಪಿಸಿಕೊಳ್ಳಲು ಜಾಮೀನು ಪಡೆಯುವುದಿಲ್ಲ. ನನಗೆ ಸಮನ್ಸ್ ನೀಡಿದರೆ, ಸಿಲ್ಚಾರ್‌ನಿಂದ ವೈರೆಂಗ್ಟೆ (ಅಸ್ಸಾಂ  ಅಧಿಕಾರಿಗಳನ್ನು ಕರೆಸಿಕೊಂಡ ಸ್ಥಳ)ಕ್ಕೆ` ಪಾದಯಾತ್ರೆ ಮೂಲಕ ಹೋಗಿ ತನಿಖೆಗೆ ಒಳಪಡುತ್ತೇನೆ. ಪರಿಸ್ಥಿತಿ ಸಾಮಾನ್ಯ ಸ್ಥಿತಿಗೆ ಬರಲು ಅವರು ನನ್ನನ್ನು ಬಂಧಿಸಿದರೆ, ನಾನು ಅದಕ್ಕೆ ಸಿದ್ಧ. ನಾನು ಗುವಾಹಟಿ ಹೈಕೋರ್ಟ್‌ನಿಂದ ಜಾಮೀನು ಪಡೆಯಲು ಬಯಸುವುದಿಲ್ಲ ಎಂದು ಅವರು ಹೇಳಿದ್ದರು.

ಸುಮಾರು 165 ಕಿ.ಮೀ ಗಡಿ ಹಂಚಿಕೊಂಡಿರುವ ಅಸ್ಸಾಂ ಮತ್ತು ಮಿಜೋರಾಂ ನಡುವೆ ಜುಲೈ 26ರಂದು ಸಂಘರ್ಷ ನಡೆದಿದ್ದು, 6 ಮಂದಿ ಪೊಲೀಸರು, ಒಬ್ಬ ನಾಗರಿಕ ಮೃತಪಟ್ಟಿದ್ದರು. ಈ ವಿಚಾರ ಎರಡೂ ರಾಜ್ಯಗಳ ನಡುವಿನ ವೈಮನಸ್ಸಿಗೆ ಕಾರಣವಾಗಿದೆ. ಎರಡೂ ಕಡೆಯ ಪೊಲೀಸರು ಪರಸ್ಪರರ ವಿರುದ್ಧ  ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com