ಚಂದ್ರನ ನೆಲದಲ್ಲಿ ನೀರಿನಂಶ ಪತ್ತೆ ಹಚ್ಚಿದ ಇಸ್ರೊ ನೌಕೆ

ಚಂದ್ರಯಾನ-2 ಗಗನನೌಕೆಯ ಲ್ಯಾಂಡರ್ (ಚಂದ್ರವಾಹನ) ಚಂದ್ರನ ಮೇಲೆ ಅಪ್ಪಳಿಸಿ ಪತನಗೊಂಡಿದ್ದರೂ, ಚಂದ್ರನ ಸುತ್ತಲೇ ಸುತ್ತುತ್ತಿರುವ ನೌಕೆ ತನ್ನಲ್ಲಿನ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಚಂದ್ರನ ನೆಲದ ಮೇಲೆ ನೀರಿನಂಶ ಇರುವುದನ್ನು ಪತ್ತೆ ಹಚ್ಚಿದೆ.
ಕಾಲ್ಪನಿಕ ಚಿತ್ರ
ಕಾಲ್ಪನಿಕ ಚಿತ್ರ

ನವದೆಹಲಿ: ಚಂದ್ರಯಾನ-2 ಗಗನನೌಕೆಯ ಲ್ಯಾಂಡರ್ (ಚಂದ್ರವಾಹನ) ಚಂದ್ರನ ಮೇಲೆ ಅಪ್ಪಳಿಸಿ ಪತನಗೊಂಡಿದ್ದರೂ, ಚಂದ್ರನ ಸುತ್ತಲೇ ಸುತ್ತುತ್ತಿರುವ ನೌಕೆ ತನ್ನಲ್ಲಿನ ವೈಜ್ಞಾನಿಕ ಉಪಕರಣಗಳ ಸಹಾಯದಿಂದ ಚಂದ್ರನ ನೆಲದ ಮೇಲೆ ನೀರಿನಂಶ ಇರುವುದನ್ನು ಪತ್ತೆ ಹಚ್ಚಿದೆ. 

ಇದರಿಂದಾಗಿ ಇಸ್ರೋ ವಿಜ್ಞಾನಿಗಳು ಮುಂಬರುವ ಚಂದ್ರಯಾನ-3 ಯೋಜನೆಯತ್ತ ಆಶಾಭಾವದ ನೋಟ ಬೀರಿದ್ದಾರೆ. ಚಂದ್ರನ ಸುತ್ತ ಸುತ್ತುತ್ತಿರುವ ಗಗನನೌಕೆಯಲ್ಲಿನ ಇನ್ ಫ್ರಾರೆಡ್ ಸ್ಪೆಕ್ಟ್ರೊಮೀಟರ್ ಉಪಕರಣ ಚಂದ್ರನ ಮೇಲಿನ ಖನಿಜಗಳ ಅಧ್ಯಯನಕ್ಕೆಂದೇ ಅಭಿವೃದ್ಧಿಗೊಳಿಸಲಾಗಿತ್ತು. ಇದೇ ಉಪಕರಣ ಈಗ ಹೈಡ್ರಾಕ್ಸಿಲ್ ಮತ್ತು ನೀರಿನ ಕಣಗಳನ್ನು ಚಂದಿರನ ನೆಲದಲ್ಲಿ ಪತ್ತೆ ಹಚ್ಚಿದೆ. 

ಚಂದ್ರಯಾನ-೩ ಯೋಜನೆ 2022ರಲ್ಲಿ ಕಾರ್ಯಗತಗೊಳ್ಳಲಿದೆ. ಮುಂದಿನ ವರ್ಷಗಳಲ್ಲಿ ಹಲವು ದೇಶಗಳೂ ಚಂದ್ರನಲ್ಲಿಗೆ ಮಾನವ ಸಹಿತ ಮತ್ತು ಮಾನವ ರಹಿತ ಬಾಹ್ಯಾಕಾಶ ಯೋಜನೆಯನ್ನು ಕಾರ್ಯಗತಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆಯ ನೂತನ ಸಂಶೋಧನೆ ಮಹತ್ವಪೂರ್ಣವಾದುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com