ಭಾರತ- ರಷ್ಯಾ ನಡುವಣ ಸೇನಾ ಸಹಕಾರ ಒಪ್ಪಂದ ಎಲ್ಲಾ ದೇಶಗಳಿಗೂ ಮೀರಿದ್ದು: ಅಧ್ಯಕ್ಷ ಪುತಿನ್

ಭಾರತವನ್ನು ಮಹಾನ್ ದೇಶ ಎಂದು ಕರೆದಿರುವ ಪುತಿನ್ ಎರಡೂ ದೇಶಗಳ ನಡುವೆ ಸೇನೆ ಮತ್ತು ಆರ್ಥಿಕ ಸಹಕಾರ ವೃದ್ಧಿಸುವ ಬಗ್ಗೆ ಆಶಯ ವ್ಯಕ್ತಪಡಿಸಿದ್ದಾರೆ. 
ಮೋದಿ ಮತ್ತು ಪುತಿನ್
ಮೋದಿ ಮತ್ತು ಪುತಿನ್

ನವದೆಹಲಿ: ಭಾರತಕ್ಕೆ ಭೇಟಿ ನೀಡಿರುವ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್, ಈ ಭೇಟಿಯನ್ನು ಮಹತ್ವದ್ದು ಎಂದು ಬಣ್ಣಿಸಿರುವರಲ್ಲದೆ ಫಲಪ್ರದ ಎಂದು ಕರೆದಿದ್ದಾರೆ. ಭಾರತ ಮತ್ತು ರಷ್ಯಾದ ವಿದೇಶಾಂಗ ಸಚಿವರು ಮತ್ತು ರಕ್ಷಣಾ ಸಚಿವರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. 

ಭಾರತವನ್ನು ಮಹಾನ್ ದೇಶ ಎಂದು ಕರೆದಿರುವ ಪುತಿನ್ ಎರಡೂ ದೇಶಗಳ ನಡುವೆ ಸೇನೆ ಮತ್ತು ಆರ್ಥಿಕ ಸಹಕಾರ ವೃದ್ಧಿಸುವ ಬಗ್ಗೆ ಆಶಯ ವ್ಯಕ್ತಪಡಿಸಿದ್ದಾರೆ. 

ಅನಾದಿ ಕಾಲದಿಂದಲೂ ಭಾರತ ರಷ್ಯಾದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದೆ. ಭವಿಷ್ಯದಲ್ಲಿ ಪರಸ್ಪರ ಸಹಕಾರದೊಡನೆ ಎರಡೂ ದೇಶಗಳು ಇನ್ನಷ್ಟು ಎತ್ತರಕ್ಕೆ ಬೆಳೆಯುವ ವಿಶ್ವಾಸವನ್ನು ಪುತಿನ್ ಇದೇ ವೇಳೆ ವ್ಯಕ್ತಪಡಿಸಿದ್ದಾರೆ.

ಪುತಿನ್ ಭೇಟಿ ಕುರಿತು ಹೇಳಿಕೆ ನೀಡಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ  ಶೃಂಗ್ಲಾ, ಪುತಿನ್ ಅವರ ಭಾರತ ಪ್ರವಾಸ ಚಿಕ್ಕ ಅವಧಿಯದ್ದೇ ಆದರೂ ಮಹತ್ವದ್ದು ಎಂದು ಹೇಳಿದ್ದಾರೆ. ಈ ಭೇಟಿ ವೇಳೆ ಎರಡು ರಾಷ್ಟ್ರಗಳ ನಡುವೆ 28 ಒಪ್ಪಂದಗಳಿಗೆ ಸಹಿ ಹಾಕಲಾಯಿತೆಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com