The New Indian Express
ನವದೆಹಲಿ: ಭಾರತ- ರಷ್ಯಾ ನಡುವೆ ಸೋಮವಾರ ಸಭೆ ನಡೆಯಲಿದ್ದು, ಈ ವೇಳೆ ರಕ್ಷಣಾ ಕ್ಷೇತ್ರ, ಇಂಧನ ಮತ್ತು ವ್ಯಾಪಾರ ಸೇರಿದಂತೆ ಹಲವು ಕ್ಷೇತ್ರಗಳ ಒಪ್ಪಂದಗಳಿಗೆ ಮೋದಿ ಮತ್ತು ಪುತಿನ್ ಸಹಿ ಹಾಕಲಿದ್ದಾರೆ.
ಇದನ್ನೂ ಓದಿ: ರಷ್ಯಾ: ಕಲ್ಲಿದ್ದಲು ಗಣಿಯಲ್ಲಿ ಮೀಥೇನ್ ಅನಿಲ ಸ್ಪೋಟ, 52 ಕಾರ್ಮಿಕರ ದಾರುಣ ಸಾವು
ಸಭೆಯಲ್ಲಿ ಅಫ್ಘಾನಿಸ್ತಾನ ಕುರಿತೂ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಅಲ್ಲದೆ ಉಗ್ರಸಂಘಟನೆಗಳಾದ ಲಷ್ಕರ್ ಇ ತಯ್ಬಾ, ಜೈಷ್ ಇ ಮೊಹಮ್ಮದ್ ನಿಂದ ಒದಗಿರುವ ಬೆದರಿಕೆಯ ಕುರಿತೂ ಉಭಯದೇಶಗಳ ಸಚಿವರು ಮಾತುಕತೆ ನಡೆಸಲಿದ್ದಾರೆ.
ಇದನ್ನೂ ಓದಿ: ಸತತ ಮೂರನೇ ದಿನವೂ ರಷ್ಯಾದಲ್ಲಿ ದಾಖಲೆಯ ಕೋವಿಡ್ ಸಾವು ವರದಿ
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಸೋಮವಾರ ನವದೆಹಲಿಗೆ ಆಗಮಿಸಲಿದ್ದು, ರಷ್ಯಾ ರಕ್ಷಣಾ ಸಚಿವ ಹಾಗೂ ವಿದೇಶಾಂಗ ಸಚಿವ ಭಾನುವಾರ ರಾತ್ರಿಯೇ ನವದೆಹಲಿಗೆ ಬಂದಿಳಿಯಲಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಎಸ್ -400 ಕ್ಷಿಪಣಿ ನಿರೋಧಕ ವ್ಯವಸ್ಥೆ ಪೂರೈಕೆ ಆರಂಭ; ರಷ್ಯಾ ಸರ್ಕಾರ