ಲಸಿಕೆ ಪಡೆದ 3-4 ತಿಂಗಳುಗಳಲ್ಲೇ ಒಮಿಕ್ರಾನ್ ಸೋಂಕು ಬಾಧಿಸಬಹುದು: ದಕ್ಷಿಣ ಆಫ್ರಿಕಾದ ಹಿರಿಯ ವೈದ್ಯೆ

ಓಮಿಕ್ರಾನ್ ಭೀತಿ ಜಾಗತಿಕ ಮಟ್ಟದಲ್ಲಿ ತಣ್ಣಗೆ ಆವರಿಸುತ್ತಿದೆ. ಅಷ್ಟೇನೂ ತೀವ್ರವಾದ ಲಕ್ಷಣಗಳನ್ನು ಹೊಂದಿರದ ಈ ವೈರಾಣು ಸೋಂಕು ಲಸಿಕೆ ಪಡೆದು ಮೂರು ನಾಲ್ಕು ತಿಂಗಳಾದರೂ ವ್ಯಕ್ತಿಯನ್ನು ಆವರಿಸುವ ಸಾಮರ್ಥ್ಯ ಹೊಂದಿದೆ
ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ
ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ

ಬೆಂಗಳೂರು: ಓಮಿಕ್ರಾನ್ ಭೀತಿ ಜಾಗತಿಕ ಮಟ್ಟದಲ್ಲಿ ತಣ್ಣಗೆ ಆವರಿಸುತ್ತಿದೆ. ಅಷ್ಟೇನೂ ತೀವ್ರವಾದ ಲಕ್ಷಣಗಳನ್ನು ಹೊಂದಿರದ ಈ ವೈರಾಣು ಸೋಂಕು ಲಸಿಕೆ ಪಡೆದು ಮೂರು ನಾಲ್ಕು ತಿಂಗಳಾದರೂ ವ್ಯಕ್ತಿಯನ್ನು ಆವರಿಸುವ ಸಾಮರ್ಥ್ಯ ಹೊಂದಿದೆ ಎನ್ನುತ್ತಾರೆ ಈ ಹೊಸ ರೂಪಾಂತರಿಯನ್ನು ಪತ್ತೆ ಮಾಡಿದ ದಕ್ಷಿಣ ಆಫ್ರಿಕಾದ ವೈದ್ಯಕೀಯ ಸಂಘಟನೆಯ ಅಧ್ಯಕ್ಷರಾದ ಡಾ.ಏಂಜೆಲಿಕ್ ಕೊಯೆಟ್ಜಿ. 

ಸಂದರ್ಶನದಲ್ಲಿ ಓಮಿಕ್ರಾನ್ ಬಗ್ಗೆ ಮಾತನಾಡಿರುವ ಡಾ. ಏಂಜೆಲಿಕ್ ಕೊಯೆಟ್ಜಿ, ಈ ಸೋಂಕಿನಿಂದ ಉಂಟಾಗುವ ಸೌಮ್ಯವಾದ ರೋಗಲಕ್ಷಣಗಳನ್ನು ಸೂಕ್ಷ್ಮವಾಗಿ ಗುರುತಿಸುವುದನ್ನು ತಪ್ಪಿಸಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.  

ಇದಕ್ಕೆ ಚಿಕಿತ್ಸೆಯೆಂದರೆ ಐಬುಪ್ರೊಫೇನ್ ಜೊತೆ ಕಾರ್ಟಿಸೋಲ್ ನ್ನು ಸಣ್ಣ ಪ್ರಮಾಣದಲ್ಲಿ ನೀಡುವುದಾಗಿದ್ದು ಇದರಿಂದ ಬೇಗ ಗುಣಮುಖರಾಗಲು ಸಾಧ್ಯವಾಗುತ್ತದೆ ಎಂದು ಹೇಳಿದ್ದು, ಸಾಂಕ್ರಾಮಿಕವನ್ನು ಕೊನೆಗಾಣಿಸುವುದಕ್ಕೆ ಬಡ ರಾಷ್ಟ್ರಗಳಿಗೆ ಲಸಿಕೆಗಳನ್ನು ಖರೀದಿಸುವುದು ಕಷ್ಟಸಾಧ್ಯವಾಗಲಿದ್ದು ಫಾರ್ಮಾ ಕಂಪನಿಗಳು ನೆರವಾಗಬೇಕು ಎಂದು ವಿನಂತಿಸಿದ್ದಾರೆ. 

ಮೊದಲ ದಿನದಿಂದಲೂ ರೂಪಾಂತರಿಯನ್ನು ಗುರುತಿಸಿರುವ ವೈದ್ಯರಾಗಿರುವ ಹಿನ್ನೆಲೆಯಲ್ಲಿ ರೂಪಾಂತರಿಯಿಂದ ಬಾಧಿಸಲ್ಪಟ್ಟ ಪ್ರಕರಣಗಳು ತೀವ್ರವಾಗಿದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು,  ಆಸ್ಪತ್ರೆಗಳಲ್ಲಿ ದಾಖಲಾತಿಗಳು ನಿಧಾನವಾಗಿ ಹೆಚ್ಚುತ್ತಿವೆ. ಆದರೆ ಈ ರೂಪಾಂತರಿಗೂ ಡೆಲ್ಟಾ ರೂಪಾಂತರಿಗೂ ಸಂಬಂಧವೇನು ಇಲ್ಲ. ದುರದೃಷ್ಟವೆಂದರೆ ಆಸ್ಪತ್ರೆಗಳಲ್ಲಿ ಡೆಲ್ಟಾ ಹಾಗೂ ಓಮಿಕ್ರಾನ್ ನ ನಡುವೆ ವಿಭಾಗಿಸುವ ಪದ್ಧತಿ ಇಲ್ಲ. ಓಮಿಕ್ರಾನ್ ವೇಗವಾಗಿ ಹರಡುತ್ತದೆ. ಲಸಿಕೆ ಪಡೆದ ಬಳಿಕವೂ ಸೋಂಕು ತಗುಲುವ, ಸೋಂಕು ಪುನರಾವರ್ತನೆಯಾಗುವ ಸಾಧ್ಯತೆಗಳೂ ಈ ರೂಪಾಂತರಿಯಲ್ಲಿ ಹೆಚ್ಚಾಗಿವೆ. ಆದರೆ ಈ ಸೋಂಕಿನಿಂದ ಉಂಟಾಗುವ ಅನಾರೋಗ್ಯದ ಪರಿಣಾಮ ಡೆಲ್ಟಾಗಿಂತ ಕಡಿಮೆ. ಮುಂದಿನ ವಾರ ಅಥವಾ ಇನ್ನೆರಡು ವಾರಗಳಲ್ಲಿ ಪ್ರಧಾನವಾಗಿ ಈ ರೂಪಾಂತರಿಯ ಲಕ್ಷಣ ಸೌಮ್ಯ ರೋಗಲಕ್ಷಣವೋ ಅಲ್ಲವೋ ಎಂಬುದು ತಿಳಿಯಲಿದೆ ಎಂದು ಡಾ. ಏಂಜೆಲಿಕ್ ಕೊಯೆಟ್ಜಿ ಹೇಳಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com