ಮನೆ ಮಾಲೀಕನ ಪುತ್ರಿ ಸ್ನಾನದ ವಿಡಿಯೊ ಚಿತ್ರೀಕರಣ ಮಾಡಿದ 16 ವರ್ಷದ ಬಾಲಕ: ಪ್ರಕರಣ ದಾಖಲು
ಹೈದರಾಬಾದ್ ನಿವಾಸಿಯಾಗಿರುವ ಯುವತಿ, ಅಪಾರ್ಟ್ ಮೆಂಟ್ ಮಾಲೀಕರ ಪುತ್ರಿ ಎಂದು ತಿಳಿದುಬಂದಿದೆ. ಆರೋಪಿ ಬಾಲಕನ ಕುಟುಂಬ ಅದೇ ಅಪಾರ್ಟ್ ಮೆಂಟಿನಲ್ಲಿ ಬಾಡಿಗೆಗಿದ್ದಾರೆ.
Published: 12th December 2021 01:11 PM | Last Updated: 12th December 2021 01:11 PM | A+A A-

ಸಾಂದರ್ಭಿಕ ಚಿತ್ರ
ಹೈದರಾಬಾದ್: 30 ವರ್ಷದ ಯುವತಿಯೋರ್ವಳು ತಾನು ಸ್ನಾನ ಮಾಡುವುದನ್ನು ಕದ್ದು ವಿಡಿಯೋ ಚಿತ್ರೀಕರಣ ಮಾಡಿದ್ದಾಗಿ 16 ವರ್ಷದ ಬಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ.
ಇದನ್ನೂ ಓದಿ: ಪಾಕ್ ಶಾಸಕಿಯ ಅಶ್ಲೀಲ ವಿಡಿಯೋ ವೈರಲ್: ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲು
ಹೈದರಾಬಾದ್ ನಿವಾಸಿಯಾಗಿರುವ ಯುವತಿ ಅಪಾರ್ಟ್ ಮೆಂಟ್ ಮಾಲೀಕರ ಪುತ್ರಿ ಎಂದು ತಿಳಿದುಬಂದಿದೆ. ಆರೋಪಿ ಬಾಲಕನ ಕುಟುಂಬ ಅದೇ ಅಪಾರ್ಟ್ ಮೆಂಟಿನಲ್ಲಿ ಬಾಡಿಗೆಗಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ಪೊಲೀಸ್ ರಾಸಲೀಲೆ ಪ್ರಕರಣ: ಅಮಾನತಾಗಿದ್ದ ಡಿ ಎಸ್ ಪಿ- ಮಹಿಳಾ ಪೇದೆ ಕರ್ತವ್ಯದಿಂದ ವಜಾ
ಪೊಲೀಸರು ಐಪಿಸಿ ಸೆಕ್ಷನ್ 354 ಅಡಿ ಬಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ದೂರು ನೀಡಿರುವ ಯುವತಿ ಮೂರು ತಿಂಗಳ ಹಿಂದೆ ಆರೋಪಿ ತನ್ನ ಸ್ನಾನದ ವಿಡಿಯೋ ಚಿತ್ರೀಕರಣ ಮಾಡಿದ್ದಾಗಿ ಹೇಳಿಕೆ ನೀಡಿರುವುದು ಗೊಂದಲ ಸೃಷ್ಟಿಸಿದೆ. ಪೊಲೀಸರು ಎಲ್ಲಾ ಕೋನಗಳಿಂದಲೂ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಎಸಿಬಿ ಇನ್ಸ್ಪೆಕ್ಟರ್ಗೆ ಬೆತ್ತಲೆ ಮೈ ಪ್ರದರ್ಶಿಸಿ ಬ್ಲ್ಯಾಕ್ಮೇಲ್: ದೂರು ದಾಖಲು