ಭಾರತ ಸರ್ಕಾರ ನನ್ನನ್ನು ಬ್ಲಾಕ್ ಲಿಸ್ಟ್ ಮಾಡಿದೆ: ನ್ಯೂಜಿಲ್ಯಾಂಡ್ ಪ್ರಜೆ ಆರೋಪ; ವೀಸಾ ನಿಯಮ ಉಲ್ಲಂಘನೆ ಎಂದ ಎಂಎಚ್‌ಎ

ಭಾರತ ಸರ್ಕಾರ ಯಾವುದೇ ಮಾಹಿತಿ ನೀಡದೆ ನನ್ನನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿದೆ ಎಂದು ನ್ಯೂಜಿಲ್ಯಾಂಡ್ ಪ್ರಜೆಯೊಬ್ಬರು ಆರೋಪಿಸಿದ್ದಾರೆ.
ಕರ್ಲ್ ಎಡ್ವರ್ಡ್-ಮನಿಶಾ
ಕರ್ಲ್ ಎಡ್ವರ್ಡ್-ಮನಿಶಾ

ನವದೆಹಲಿ: ಭಾರತ ಸರ್ಕಾರ ಯಾವುದೇ ಮಾಹಿತಿ ನೀಡದೆ ನನ್ನನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿದೆ ಎಂದು ನ್ಯೂಜಿಲ್ಯಾಂಡ್ ಪ್ರಜೆಯೊಬ್ಬರು ಆರೋಪಿಸಿದ್ದಾರೆ. 

ಈ ಆರೋಪವನ್ನು ತಿರಸ್ಕರಿಸಿರುವ ಗೃಹ ಸಚಿವಾಲಯ, ವೀಸಾ ಷರತ್ತುಗಳ ಉಲ್ಲಂಘನೆಯಿಂದಾಗಿ ಅವರನ್ನು ನಿರ್ಬಂಧಿಸಲಾಗಿದೆ ಎಂದು ತಿಳಿಸಿದೆ. 

ನ್ಯೂಜಿಲ್ಯಾಂಡ್ ಪ್ರಜೆ ಕಾರ್ಲ್ ಎಡ್ವರ್ಡ್ ರೈಸ್, ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಅಲ್ಲದೆ ತಮ್ಮನ್ನು 'ಕಪ್ಪುಪಟ್ಟಿ'ಗೆ ಸೇರಿಸಿರುವ ಭಾರತ ಸರ್ಕಾರದ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲದೆ ಈ ವಿಚಾರವಾಗಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಆನ್‌ಲೈನ್ ಅಭಿಯಾನ ಆರಂಭಿಸಿದ್ದಾರೆ. 

ಭಾರತ ಸರ್ಕಾರ ನನ್ನನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸುವ ಮೂಲಕ ದೆಹಲಿಯಲ್ಲಿರುವ ನನ್ನ ಹೆಂಡತಿ ಮತ್ತು ಕುಟುಂಬದಿಂದ ಬೇರ್ಪಡುವಂತೆ ಮಾಡಿದೆ. ಕಾರಣ ನೀಡದೆ ಅಥವಾ ಉತ್ತರಿಸಲು ಅವಕಾಶ ನೀಡದೆ ನನ್ನನ್ನು ಕಪ್ಪುಪಟ್ಟಿಗೆ ಸೇರಿಸಿದ್ದಾರೆ. ದಯವಿಟ್ಟು ನನ್ನ ಹೋರಾಟವನ್ನು ವೀಕ್ಷಿಸಿ https://t.co/dq0Z98SCFw@NZinIndia ತಮ್ಮ ಜೀವನ ಕಥೆಯ ವೀಡಿಯೊವನ್ನು @iamkarlrock ನಿಂದ ಟ್ವೀಟ್ ಮಾಡಿದ್ದಾರೆ.

ನನ್ನ ಪತ್ನಿ ಮನೀಷಾ ಮಲಿಕ್ ಹರಿಯಾಣ ಮೂಲದವರಾಗಿದ್ದು 2019 ರಲ್ಲಿ ವಿವಾಹವಾಗಿದ್ದಾಗಿ ಹೇಳಿದ್ದಾರೆ.

 ಅಲ್ಲದೆ ತಾನು ಕಳೆದ ವರ್ಷ ಕೋವಿಡ್ ಸೋಂಕಿಗೆ ತುತ್ತಾಗಿದ್ದು ಅದರಿಂದ ಚೇತರಿಸಿಕೊಂಡ ನಂತರ ಜನರು ವೈರಸ್‌ನಿಂದ ಚೇತರಿಸಿಕೊಳ್ಳುವ ಸಲುವಾಗಿ ದೆಹಲಿಯಲ್ಲಿ ಎರಡು ಬಾರಿ ಪ್ಲಾಸ್ಮಾವನ್ನು ದಾನ ಮಾಡಿದ್ದಾಗಿ ಹೇಳಿದ್ದಾರೆ. 

ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ನ್ಯೂಜಿಲೆಂಡ್ ಪ್ರಜೆ ತನ್ನ ವೀಸಾದ ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಮುಂದಿನ ವರ್ಷದವರೆಗೆ ಭಾರತಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಅಲ್ಲದೆ ಪ್ರವಾಸಿ ವೀಸಾದಲ್ಲಿ ವ್ಯಾಪಾರ ಚಟುವಟಿಕೆಗಳನ್ನು ಮಾಡುತ್ತಿರುವುದು ಮತ್ತು ಇತರ ವೀಸಾ ಷರತ್ತುಗಳನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಿದ್ದರಿಂದ ತಮ್ಮನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿರುವುದಾಗಿ ತಿಳಿಸಿದರು. ಸುಮಾರು ಎಂಟು ತಿಂಗಳ ಹಿಂದೆ ದುಬೈ ಮತ್ತು ಪಾಕಿಸ್ತಾನಕ್ಕೆ ತೆರಳಲು ಹೊರಟಿದ್ದಾಗ, ತನ್ನ ಭಾರತೀಯ ವೀಸಾವನ್ನು ರದ್ದುಪಡಿಸಲಾಗಿದೆ ಎಂದು ವಿಮಾನ ನಿಲ್ದಾಣದಲ್ಲಿ ತಿಳಿಸಲಾಯಿತು ಎಂದು ವೀಡಿಯೊದಲ್ಲಿ ರೈಸ್ ಹೇಳಿದ್ದಾರೆ.

ಅಂದಿನಿಂದ ರೈಸ್ ವೀಸಾ ನಿಷೇಧಕ್ಕೆ ಕಾರಣ ಕೋರಿ ನ್ಯೂಜಿಲೆಂಡ್‌ನ ಎಂಎಚ್‌ಎ ಅಧಿಕಾರಿಗಳು ಮತ್ತು ಭಾರತೀಯ ಹೈಕಮಿಷನ್ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.

 ಆದರೆ, ಇದುವರೆಗೆ ಯಾರಿಂದಲೂ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿದರು.

 ಅಲ್ಲದೆ ಪ್ರವೇಶವನ್ನು ನಿಷೇಧಿಸುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿರುವುದಾಗಿ ರೈಸ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com