ಪಾರ್ಕಿಂಗ್ ವಿಷಯವಾಗಿ ಡಿಸಿಪಿ ಪತ್ನಿ ಮತ್ತು ಎಎಸ್ಐ ಕುಟುಂಬದ ನಡುವೆ ವಾಗ್ವಾದ, ಎಫ್ಐಆರ್ ದಾಖಲು!

ಪಾರ್ಕಿಂಗ್ ವಿಷಯವಾಗಿ ಡಿಸಿಪಿ ಪತ್ನಿ ಹಾಗೂ ಸಬ್ ಇನ್ಸ್ಪೆಕ್ಟರ್ ಕುಟುಂಬದ ನಡುವೆ ವಾಗ್ವಾದ ನಡೆದ ಪರಿಣಾಮ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪಾರ್ಕಿಂಗ್ ವಿಷಯವಾಗಿ ಡಿಸಿಪಿ ಪತ್ನಿ ಹಾಗೂ ಸಬ್ ಇನ್ಸ್ಪೆಕ್ಟರ್ ಕುಟುಂಬದ ನಡುವೆ ವಾಗ್ವಾದ ನಡೆದ ಪರಿಣಾಮ ದೆಹಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 

ಡಿಸಿಪಿ ಪತ್ನಿ ಸಹಾಯಕ ಸಬ್ ಇನ್ಸ್ಪೆಕ್ಟರ್ ಕುಟುಂಬ ಸದಸ್ಯರ ವಿರುದ್ಧ ಪ್ರತಿ ದೂರು ನೀಡಿದ್ದು ಇದೇ ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ಎಫ್ಐಆರ್ ಕೂಡಾ ದಾಖಲಾಗಿದೆ. ಎರಡೂ ಕುಟುಂಬಗಳು ನೆರೆ ಮನೆ ನಿವಾಸಿಗಳಾಗಿದ್ದು ನವದೆಹಲಿ ಲೈನ್ಸ್ ನ ಕಿಂಗ್ಸ್ ವೇ ಕ್ಯಾಂಪ್ ನಲ್ಲಿ ವಾಸಿಸುತ್ತಿದ್ದಾರೆ. 

ಎಎಸ್ಐ ಪುತ್ರಿ ಮುಖರ್ಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪಾರ್ಕಿಂಗ್ ಜಾಗಕ್ಕೆ ಸಂಬಂಧಿಸಿದಂತೆ ಡಿಸಿಪಿ ಹಾಗೂ ಅವರ ಪತ್ನಿ ತಮ್ಮ ಕುಟುಂಬಕ್ಕೆ ಬೆದರಿಕೆ ಹಾಕಿ ದಾಳಿ ನಡೆಸಿದ್ದಾರೆ ಎಂದು ದೂರಿದ್ದಾರೆ. 

"ದೂರಿನಲ್ಲಿ ಉಲ್ಲೇಖಿಸುತ್ತಿರುವ ದಂಪತಿ ತನ್ನ ಸಹೋದರಿಯತ್ತ ಡೋರ್ ಲಾಕ್ ನ್ನು ಎಸೆದಿದ್ದಾರೆ, ಡಿಸಿಪಿ ಪತ್ನಿ ನಮ್ಮ ಮನೆಯ ಮುಂಭಾಗ ಇದ್ದ ಲ್ಯಾಂಪ್ ನ್ನು ಬ್ಯಾಟ್ ನಿಂದ ಮುರಿದುಹಾಕಿದ್ದಾರೆ. ಇದನ್ನು ನಿಲ್ಲಿಸುವಂತೆ ಕೇಳಿದಾಗ ಮನೆಯೊಳಗೆ ನುಗ್ಗಿ ನನ್ನ ಮೇಲೆ ಬ್ಯಾಟ್ ನಿಂದ ಹಲ್ಲೆ ನಡೆಸಿದ್ದಾರೆ" ಎಂದು ಎಎಸ್ಐ ಪುತ್ರಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಇತ್ತ ಡಿಸಿಪಿ ಪತ್ನಿಯೂ ಪ್ರತಿ ದೂರು ನೀಡಿದ್ದು, ತಮಗೆ ಎಎಸ್ಐ ಪುತ್ರಿ ಹಾಗೂ ಎಎಸ್ಐ ಪತ್ನಿ ಕಿರುಕುಳ ನೀಡಿದ್ದು ಹಲ್ಲೆ ನಡೆಸಿದ್ದಾರೆ ಎಂದು ದೂರು ನೀಡಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com